
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಮನೆ ಕೆಲಸಗಳು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಮಕ್ಕಳ ಶಿಕ್ಷಣದ ಪ್ರಗತಿಗಾಗಿ ನೀವು ಕೆಲವು ತ್ಯಾಗ ಮಾಡಲಿಕ್ಕೆ ಮುಂದಾಗಿದ್ದೀರಿ. ಹೆಣ್ಣುಮಕ್ಕಳಿಗೆ ತವರು ಮನೆಗೆ ಉಡುಗೊರೆ ದೊರೆಯಲಿದೆ. ಹೂವು- ಹಣ್ಣಿನ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ವ್ಯಾಪಾರ ಆಗಲಿದೆ, ಹೊಸ ಆರ್ಡರ್ ಗಳು- ಹೊಸ ಗ್ರಾಹಕರು ದೊರೆಯಲಿದ್ದಾರೆ. ಆಸ್ತಮಾ- ಕಫ ಇಂಥ ಸಮಸ್ಯೆ ಇದೆ ಎಂದಾದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ. ಔಷಧದ ಪದ್ಧತಿಯಲ್ಲಿ ಅಥವಾ ಬದಲಾವಣೆ ಮಾಡುವ ಮುಂಚೆ ಆಲೋಚಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಭಾವನಾತ್ಮಕವಾಗಿ ತುಂಬ ಕಠಿಣವಾದ ದಿನ ಇದಾಗಿರಲಿದೆ. ಬಹಳ ವರ್ಷಗಳಿಂದ ಬಾಂಧವ್ಯ ಇರುವ ವ್ಯಕ್ತಿ, ಸಂಘಟನೆ, ಸಂಸ್ಥೆಯಿಂದ ದೂರ ಆಗಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಮುಂದೆ ಏನು ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಂಥ ಒತ್ತಡವೊಂದು ಮೇಲೆ ಬೀಳಲಿದೆ. ಮುಖ್ಯ ಕೆಲಸಗಳನ್ನು ಗಡುವಿನ ಮಾಡಿ ಮುಗಿಸುವುದು ಬಹಳ ಮುಖ್ಯ. ಮರೆವಿನ ಕಾರಣಕ್ಕೆ ಸಣ್ಣ ಪ್ರಮಾಣದಲ್ಲಿಯಾದರೂ ತೊಂದರೆ ಅನುಭವಿಸುವಂತೆ ಆಗಲಿದೆ. ಮಾಂಸಾಹಾರ ಸೇವಿಸುವವರು ದಿನದ ಮಟ್ಟಿಗೆ ದೂರ ಇರುವುದು ಉತ್ತಮ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ದೇಹದಲ್ಲಿನ ವಸ್ತುಗಳು, ಹಿಮೋಗ್ಲೋಬಿನ್ ಇತರ ಮುಖ್ಯ ಅಂಶಗಳು ಸರಿಯಾದ ಪ್ರಮಾಣದಲ್ಲಿ ಇದೆಯೇ ಅಥವಾ ಕೊರತೆ ಇದೆಯಾ ಎಂದು ತಿಳಿದುಕೊಳ್ಳಲು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದೆ. ಬ್ಯಾಂಕ್ಗಳಲ್ಲಿ ಕೆಲಸ ಮಾಡುವವರು ಈ ದಿನ ನಡೆಸುವ ಹಣಕಾಸು ವ್ಯವಹಾರಗಳಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಎಚ್ಚರಿಕೆ ವಹಿಸಿ. ಕುಟುಂಬದ ಸದಸ್ಯರಿಂದ ಆಗುವ ಸಣ್ಣ- ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಿ, ಕೂಗಾಟ- ಕಿರುಚಾಟ ಮಾಡಲಿಕ್ಕೆ ಹೋಗಬೇಡಿ.
ಲೇಖನ- ಸ್ವಾತಿ ಎನ್.ಕೆ.