Headlines

ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುತ್ತಿರುವ ದೊಂಬರಾಟಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್

ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುತ್ತಿರುವ ದೊಂಬರಾಟಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್


ಯಾರಾದರೂ ಹೆಸರುಗಳು ಎಂದರೆ ಅದರ ಲಾಭ ಪಡೆಯಲು ಮುಂದಾಗುತ್ತಾರೆ. ಅವರ ಬೇಳೆ ಬೇಯಿಸಿಕೊಳ್ಳುವ ಜನಪ್ರಿಯ ಪ್ರಯತ್ನ ನಡೆಯುತ್ತಿದೆ. ಗಿಲ್ಲಿ ವಿಷಯದಲ್ಲಿ ಹೀಗೆಯೇ ಆಗುತ್ತಿದೆ ಎಂದು ಸುದೀಪ್ (ಸುದೀಪ್) ಆಪ್ತ, ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಹಾರೈಸಿರೋ ಅವರು, ಗಿಲ್ಲಿ ಹೆಸರಲ್ಲಿ ನಡೆದ ದೊಂಬರಾಟವನ್ನು ಖಂಡಿಸಿದ್ದಾರೆ.

ಇದೇ ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್ ಪಾಡ್ ಕಾಸ್ಟ್‌ನಲ್ಲಿ ಚಕ್ರವರ್ತಿ ಮಾತನಾಡಿದ್ದಾರೆ. ‘ಕಾಲಾಪತ್ಥರ್ ಸಿನಿಮಾದಲ್ಲಿ ಗಿಲ್ಲಿ ನನ್ನ ಜೊತೆ ನಟಿಸಿದ್ದ. ಅವನ ಹತ್ತಿರದಿಂದ ಕಂಡಿದ್ದೇನೆ. ಅವನು ಬಡವರ ಮಗ. ಯೂಟ್ಯೂಬ್ ಮಾಡಿಕೊಂಡು, ವಿವಿಧ ಶೋ ಮಾಡಿಕೊಂಡು ಇಲ್ಲಿಗೆ ತಲುಪಿದ್ದಾನೆ. ಹೊರಗೆ ಅವನ ಹೆಸರಿನಲ್ಲಿ ಒಂದಷ್ಟು ಜನರು ಪಿಆರ್ ಮಾಡುತ್ತಿದ್ದಾರೆ. ಗಿಲ್ಲಿ ಆ ನಟನ ಪರ, ಈ ನಟನ ವಿರುದ್ಧ, ಗಿಲ್ಲಿ ಆ ಜಾತಿ ಎಂದೆಲ್ಲ ದೊಡ್ಡ ಮಾಫಿಯಾ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಈ ಬೆಳವಣಿಗೆ ಗಿಲ್ಲಿಗೆ ಗೊತ್ತಿಲ್ಲ ಎಂದು ನನಗೆ ಅನಿಸುತ್ತದೆ. ಆಚೆ ಬಂದಮೇಲೆ ಇದರ ಪರಿಣಾಮ, ದುಷ್ಪರಿಣಾಮ ಎರಡೂ ತಿಳಿಯುತ್ತದೆ. ಗಿಲ್ಲಿ ನಂಗೂ ಇಷ್ಟ. ಆದರೆ, ಅವನ ಹೆಸರಲ್ಲಿ ದೊಂಬರಾಟ ಇಷ್ಟ ಆಗ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಎಂದರೆ ಯಾಕೆ ಅಷ್ಟು ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು..

‘ಅವನ ಹೆಸರಲ್ಲಿ ಜಾತಿ ಶುರು ಮಾಡಿದೆ, ಅವನ ಹೆಸರಲ್ಲಿ ಪ್ರಾದೇಶಿಕತೆ ಶುರು ಮಾಡಿದೆ. ರಾಜಕೀಯ ಮಾಡಿದ್ದಾರೆ. ಈಗ ಅವನ ಹೆಸರಲ್ಲಿ ಸಿನಿಮಾ ಮಾಡ್ತೀನಿ ಎಂದು ಹೊರಟಿದ್ದಾರೆ. ಆರು ತಿಂಗಳು ಬಿಟ್ಟು ಇವರೆಲ್ಲ ಏನು ಮಾಡಬೇಕೆಂದು ನೋಡಬೇಕಾಗಿದೆ. ಆತ ಪ್ರತಿಭಾವಂತ, ಅವನಿಗೆ ಒಳ್ಳೇದಾಗಬೇಕು. ಆದರೆ, ಅವನ ಹೆಸರಲ್ಲಿ ಪ್ರಸ್ತುತ ದೊಂಬರಾಟಕ್ಕೆ ಪ್ರೋತ್ಸಾಹಿಸಬಾರದು. ಇದು ಸಂಪತ್ತಿಗೆ ಸವಾಲ್ ಸಿನಿಮಾ ರೀತಿ ಕಾಣಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *