ಚಿಕ್ಕಬಳ್ಳಾಪುರ, ಜನವರಿ 17: ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿ ಎಸ್ಕೇಪ್ ಆಗಿರುವ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ (ರಾಜೀವ್ ಗೌಡ) ಮೂರು ದಿನವಾದರೂ ಪತ್ತೆ ಆಗಿಲ್ಲ. ಮೊನ್ನೆ ವೀರಾವೇಷದ ಮಾತನಾಡಿದ್ದ ರಾಜೀವ್‌ಗೌಡ, ಕೇಸ್‌ಗಾಗಿ ಎಸ್‌ಕೇಪ್ ಆಗಿದ್ದಾರೆ. ಇದರ ನಡುವೆ ನಿರೀಕ್ಷಣಾ ಜಮೀನಿಗಾಗಿ ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು (ಜಾಮೀನು) ನಿರಾಕರಿಸಿರುವ ಕೋರ್ಟ್, ವಿಚಾರಣೆಯನ್ನ ಜನವರಿ 22ಕ್ಕೆ ಮುಂದೂಡಲಾಗಿದೆ.
ರಾಜೀವ್ಗೌಡ ಪತ್ತೆಗಾಗಿ ಸಿಸಿಟಿವಿ ಮೊರೆ ಹೋದ ಖಾಕಿ!
ರಾಜೀವ್‌ಗೌಡರ ಬಂಧನಕ್ಕೆ ಮೂರು ತಂಡಗಳು ಸೇರಿಕೊಂಡಿರುವ ಪೊಲೀಸರು, ಬೆಂಗಳೂರಿನಲ್ಲಿ ಸಿಸಿಟಿವಿ ಹಿನ್ನೆಲೆಯಲ್ಲಿ ಶೋಧ ಕಾಣುತ್ತಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ರಾಜೀವ್ಗೌಡ ಫೋನ್ ಸ್ವೀಚ್ ಆಫ್ ಆಗಿದ್ದು, ಅದೇ ಏರಿಯಾದಲ್ಲೇ ಶೋಧ ಆಗುತ್ತಿದೆ. ರಾಜೀವ್ಗೌಡರನ್ನ ಬಂಧಿಸದಂತೆ ರಾಜ್ಯದ ಪ್ರಭಾವಿ ಮಂತ್ರಿ ಪೊಲೀಸರ ಮೇಲೆ ಒತ್ತಡ ಹಾಕಿರುವ ಆರೋಪ ಕೇಳಿ ಬಂದಿದೆ.
15 ಕೋಟಿ ರೂ ಮೌಲ್ಯದ ಭೂಮಿ ಕಬಳಿಸಿದ್ರಾ ರಾಜೀವ್?
ಧಮ್ಕಿ ಕೇಸ್‌ನಿಂದ ರಾಜೀವ್‌ಗೌಡ ಅಸಲಿತ್ತು ಬಯಲಾಗುತ್ತಿದ್ದಂತೆ ಒಂದೆಡೆ ಅಕ್ರಮಗಳು ಹೊರಬರುತ್ತಿವೆ. ಇವರ ವಿರುದ್ಧ 15 ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿರುವ 15 ಕೋಟಿ ರೂ ಮೌಲ್ಯದ 1 ಕೋಟಿ 18 ಗುಂಟೆ ಭೂಮಿ ರಾಜೀವ್ ಗೌಡ ಕಬಳಿಸಿದ್ದಾರೆ ಅಂತಾ ಆಶಾಲತಾ ಅನ್ನೋರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಬಲವಾದ ಕಾರಣ
ಇನ್ನು ಮಂಡೂರಿನ ಸುತ್ತಮುತ್ತ ಇರುವ ಇವರು ಮಾಡಿರುವ ವಂಚನೆ ಬಗ್ಗೆ ಭಿತ್ತಿಪತ್ರ ಮಾಡಿದ್ದು, ಶಿಡ್ಲಘಟ್ಟದಲ್ಲಿ ವಿತರಿಸಲಾಗಿದೆ. ಇದರ ನಡುವೆ ಹಲವು ಸಂಘಟನೆಗಳು ಪೌರಾಯುಕ್ತರ ಕಚೇರಿಗೆ ತೆರಳಿದ ಅಮೃತಾರಿಗೆ ಧೈರ್ಯ ತುಂಬುವ ಕೆಲಸ ಮಾಡಿವೆ. ರೇಷ್ಮೆ ಸೀರೆ, ಬಳೆ ಹರಿಸಿದ ಕುಂಕಮ ಸೇರಿದಂತೆ ಬಾಗಿನ ಕೊಟ್ಟು ಬೆಂಬಲಕ್ಕೆ ನಿಂತಿದ್ದಾರೆ. ಜನರ ಪ್ರೀತಿಗೆ ಅಮೃತಾ ಭಾವುಕರಾದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.