ಟಿ20 ವಿಶ್ವಕಪ್: ಭಾರತಕ್ಕೆ ಬರಲ್ಲವೆಂದು ಹಟ ಹಿಡಿದಿರುವ ಬಾಂಗ್ಲಾದೇಶಕ್ಕೆ ಕಟ್ಟ ಕಡೆಯ ವಾರ್ನಿಂಗ್ ಕೊಟ್ಟ ಐಸಿಸಿ! | Icc Issues Deadline To Bangladesh Over 2026 T20 World Cup Participation In India

ಟಿ20 ವಿಶ್ವಕಪ್: ಭಾರತಕ್ಕೆ ಬರಲ್ಲವೆಂದು ಹಟ ಹಿಡಿದಿರುವ ಬಾಂಗ್ಲಾದೇಶಕ್ಕೆ ಕಟ್ಟ ಕಡೆಯ ವಾರ್ನಿಂಗ್ ಕೊಟ್ಟ ಐಸಿಸಿ! | Icc Issues Deadline To Bangladesh Over 2026 T20 World Cup Participation In India



ಟಿ20 ವಿಶ್ವಕಪ್: ಭಾರತಕ್ಕೆ ಬರಲ್ಲವೆಂದು ಹಟ ಹಿಡಿದಿರುವ ಬಾಂಗ್ಲಾದೇಶಕ್ಕೆ ಕಟ್ಟ ಕಡೆಯ ವಾರ್ನಿಂಗ್ ಕೊಟ್ಟ ಐಸಿಸಿ! | Icc Issues Deadline To Bangladesh Over 2026 T20 World Cup Participation In India

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಲೀಗ್ ಪಂದ್ಯಗಳನ್ನು ಭಾರತದಲ್ಲಿ ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಭದ್ರತೆಯ ನೆಪವೊಡ್ಡಿ ನಿರಾಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಜನವರಿ 21ರೊಳಗೆ ನಿರ್ಧಾರ ತಿಳಿಸುವಂತೆ ಬಾಂಗ್ಲಾಗೆ ಡೆಡ್‌ಲೈನ್ ನೀಡಿದೆ ಐಸಿಸಿ.

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂಬರುವ ಫೆಬ್ರವರಿ 07ರಿಂದ ಟಿ20 ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ಪ್ರತಿಷ್ಠಿತ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. ಇನ್ನು ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಖಡಕ್ ವಾರ್ನಿಂಗ್ ನೀಡಿದೆ ಎಂದು ವರದಿಯಾಗಿದೆ.

ESPNcricinfo ವರದಿಯ ಪ್ರಕಾರ, ಬಾಂಗ್ಲಾದೇಶ ತಂಡವು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಸ್ಟೇಜ್ ಪಂದ್ಯಗಳನ್ನಾಡಲು ಭಾರತಕ್ಕೆ ಬರುತ್ತೀರೋ ಅಥವಾ ಇಲ್ಲವೇ ಎನ್ನುವುದನ್ನು ಇದೇ ಜನವರಿ 21ರೊಳಗೆ ಖಚಿತಪಡಿಸಬೇಕು ಎಂದು ಐಸಿಸಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಡೆಡ್ ಲೈನ್ ನೀಡಿದೆ ಎಂದು ವರದಿಯಾಗಿದೆ. ಒಂದು ವೇಳೆ ಭಾರತಕ್ಕೆ ಬರುವುದಿಲ್ಲ ಎಂದಾದರೇ, ಬಾಂಗ್ಲಾದೇಶ ಕ್ರಿಕೆಟ್ ತಂಡದ ಬದಲಿಗೆ ಐಸಿಸಿ ಟಿ20 ರ್‍ಯಾಂಕಿಂಗ್‌ ಆಧಾರದಲ್ಲಿ ಸ್ಕಾಟ್‌ಲೆಂಡ್ ತಂಡಕ್ಕೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದೆ.

ಮುಸ್ತಾಫಿಜುರ್ ರಹಮಾನ್ ಅವರನ್ನು ಐಪಿಎಲ್‌ನಿಂದ ಹೊರಹಾಕಿದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಭದ್ರತೆಯ ನೆಪವೊಡ್ಡಿ ಬಾಂಗ್ಲಾದೇಶದ ಆಟಗಾರರನ್ನು ಭಾರತಕ್ಕೆ ಕಳಿಸಿಕೊಡಲು ಹಿಂದೇಟು ಹಾಕುತ್ತಿದೆ. ಈ ಕುರಿತಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ನಡುವಿನ ಮಹತ್ವದ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ಕೊಂಕು ನೆಪವೊಡ್ಡಿರುವ ಬಾಂಗ್ಲಾದೇಶಕ್ಕೆ ಐಸಿಸಿ ಎಚ್ಚರಿಕೆ:

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳನ್ನಾಡಲು ಭಾರತಕ್ಕೆ ಬರುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಪಟ್ಟು ಹಿಡಿದಿದೆ. ಇದರ ಬದಲಾಗಿ ಸಹ ಆತಿಥ್ಯ ವಹಿಸಿರುವ ಶ್ರೀಲಂಕಾಗೆ ತಮ್ಮ ಪಂದ್ಯಗಳನ್ನು ಶಿಫ್ಟ್ ಮಾಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದೆ. ಇದಿಷ್ಟಕ್ಕೆ ಸುಮ್ಮನಾಗದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಗ್ರೂಪ್ ಅನ್ನೇ ಬದಲಿಸುವಂತೆಯೂ ಮನವಿ ಮಾಡಿಕೊಂಡಿದೆ.

ಬಾಂಗ್ಲಾಕ್ಕೆ ತೆರಳಿದ್ದ ಐಸಿಸಿ ಅಧಿಕಾರಿಗಳ ಜೊತೆ ಸಭೆಯಲ್ಲಿ ಈ ಬಗ್ಗೆ ಮನವಿ ಮಾಡಿರುವ ಬಾಂಗ್ಲಾ, ತನ್ನನ್ನು ‘ಸಿ’ ಗುಂಪಿನ ಬದಲು ‘ಬಿ’ ಗುಂಪಿನಲ್ಲಿ ಆಡಿಸುವಂತೆ ಕೋರಿದೆ. ಬಾಂಗ್ಲಾ ಸದ್ಯ ವಿಂಡೀಸ್‌, ಇಂಗ್ಲೆಂಡ್, ಇಟಲಿ, ನೇಪಾಳ ಜೊತೆ ‘ಸಿ’ ಗುಂಪಿನಲ್ಲಿದೆ. ಈ ಗುಂಪಿನ ಪಂದ್ಯಗಳು ಕೋಲ್ಕತಾ ಮುಂಬೈನಲ್ಲಿ ನಡೆಯಬೇಕಿದೆ. ಆದರೆ ತನ್ನನ್ನು ‘ಬಿ’ ಗುಂಪಿಗೆ ಸೇರಿಸಿ, ಐರ್ಲೆಂಡ್‌ ಅನ್ನು ‘ಸಿ’ ಗುಂಪಿಗೆ ಹಾಕುವಂತೆ ಕೋರಿದೆ. ‘ಬಿ’ ಗುಂಪಿನ ಪಂದ್ಯಗಳು ಶ್ರೀಲಂಕಾದಲ್ಲಿ ನಿಗದಿಯಾಗಿವೆ. ಆದರೆ ಇದಕ್ಕೆ ಐಸಿಸಿ ಕ್ಯಾರೇ ಎಂದಿಲ್ಲ ಎಂದು ವರದಿಯಾಗಿದೆ.

ಬಾಂಗ್ಲಾದೇಶ ವೇಳಾಪಟ್ಟಿ:

ಬಾಂಗ್ಲಾದೇಶ ತಂಡವು ಫೆಬ್ರವರಿ 07ರಂದು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್‌ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ. ಇದಾದ ಬಳಿಕ ಲಿಟನ್ ದಾಸ್ ಪಡೆ ಫೆಬ್ರವರಿ 9 ರಂದು ಇಟಲಿ ಮತ್ತು ಫೆಬ್ರವರಿ 14 ರಂದು ಇಂಗ್ಲೆಂಡ್ ಅನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಫೆಬ್ರವರಿ 17 ರಂದು ನೇಪಾಳ ವಿರುದ್ಧದ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.



Source link

Leave a Reply

Your email address will not be published. Required fields are marked *