ಕಾರವಾರ, ಜನವರಿ 19: ಕಾರವಾರ ಜೆಡಿಎಸ್(ಜೆಡಿಎಸ್) ಮುಖಂಡೆ ಪುತ್ರನ ಕಿರುಕುಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ (ಆತ್ಮಹತ್ಯೆ) ಪ್ರಕರಣದ ಗ್ರಾಮಗಳ ಮಧ್ಯೆ ವೈಮನಸ್ಸಿಗೆ ಉತ್ತಮವಾಗಿದೆ. ಇತ್ತೀಚೆಗೆ ಕದ್ರಾ ಪಿಎಸ್ ಐಯನ್ನು ಅಮಾನತು ಕೂಡ ಮಾಡಲಾಗಿದೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡ ಇವತ್ತಿಗೆ 11ನೇ ದಿನ. ಇದುವರೆಗೂ ಆರೋಪಿಯನ್ನು ಏಕೆ ಬಂಧಿಸಿಲ್ಲ? ಇದರಲ್ಲಿ ರಾಜಕೀಯ ಪ್ರಭಾವ ಇರುವುದು ಗೊತ್ತಾಗುತ್ತಿದೆ ಎಂದು ಮೃತ ಯುವತಿಯ ತಾಯಿ ರೀನಾ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ.
ಕಾಣದ ಕೈಗಳು ನನ್ನ ಮಗಳ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದಾರೆ: ರೀನಾ ಡಿಸೋಜಾ
ಮಾಧ್ಯಮದವರೊಂದಿಗೆ ಮಾತನಾಡಿದ ರೀನಾ ಡಿಸೋಜಾ, ನನ್ನ ಮಕ್ಕಳ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಈಗ ಪಿಎಸ್ಐ ಸಸ್ಪೆಂಡ್ ಮಾಡಲಾಗಿದೆ. ಆದರೆ ಇದರಲ್ಲಿ ಅವರ ಮೇಲಿನವರ ಕೈವಾಡದ ಶಂಕೆ ಇದೆ. ಕಾಣದ ಕೈಗಳು ನನ್ನ ಮಗಳ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಏಕೆ ಇದುವರೆಗೂ ಕ್ರಮಕೈಗೊಂಡಿಲ್ಲ? ಯಾರೆಲ್ಲಾ ತಪ್ಪು ಮಾಡಿದ್ದಾರೆ ಅವರಿಗೆಲ್ಲಾ ಶಿಕ್ಷೆ ಆಗಲೇಬೇಕು.
ಇದನ್ನೂ ಓದಿ: ಪ್ರೀತಿಸುವಂತೆ ಕಾಟ: ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ನನ್ನ ಮಗಳು ಚಿರಾಗ್ ನನ್ನ ಪ್ರೀತಿಸುತ್ತಿದ್ದಳು ಎಂಬುವುದು ನನಗೆ ಗೊತ್ತಿರಲಿಲ್ಲ. ನನ್ನ ಗಮನಕ್ಕೆ ಬಂದಾಗ ಮಗಳಿಗೆ ಒಮ್ಮೆ ಬುದ್ದಿ ಹೇಳಿದ್ದೆ. ಕೆಲವು ದಿನ ನನ್ನ ಮಗಳು ಚಿರಾಗ್ ಜೊತೆಗೆ ಮಾತನಾಡಲಿಲ್ಲ. ಆಗ ಅವರ ಕಡೆಯಿಂದ ನನಗೆ ಕರೆ ಮಾಡಿ ಬೆದರಿಸಿದ್ದಾರೆ. ರಿಶೇಲ, ಚಿರಾಗ್ ಜೊತೆ ಏಕೆ ಮಾತನಾಡುತ್ತಿಲ್ಲ, ಏನು ಹೇಳಿದ್ದೀಯಾ ಅವಳಿಗೆ. ಅವಳು ಚಿರಾಗ್ ಜೊತೆಗೆ ಮಾತನಾಡದಿದ್ದರೆ ಸರಿ ಇರಲ್ಲ ಎಂದಿದ್ದರು. ಆದರೆ ನಾನು ಅದಕ್ಕೆಲ್ಲಾ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ರಿಶೇಲ ತಾಯಿ ಹೇಳಿದ್ದಾರೆ.
ಅದಾದ ಬಳಿಕ ಅವರಿಬ್ಬರು ಯಾವಾಗ ಪ್ರೀತಿಸಲು ಆರಂಭಿಸಿದರು ಗೊತ್ತಿಲ್ಲ. ಚಿರಾಗ್ ತಾಯಿಗೆ ನನ್ನ ಮಗಳು ಅವರ ಮನೆಗೆ ಬರುತ್ತಿದ್ದಾಳೆ ಅಂತ ಗೊತ್ತಿದ್ದರೆ ಅವರ ತಾಯಿ ಏಕೆ ಒಮ್ಮೆಯೂ ನನಗೆ ಫೋನ್ ಮಾಡಿ ಹೇಳಿಲ್ಲ. 20 ವರ್ಷದ ಹುಡುಗಿ ಮನೆಗೆ ಕರೆದುಕೊಂಡು ಬಂದರೂ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ.
ಸಾವಿಗೂ ಮುನ್ನ ನನ್ನ ಮಗಳಿಗೆ ಏನು ಮಾಡೋದು ಗೊತ್ತಾಗಬೇಕು
ನನ್ನ ಮಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ರೀಲ್ಸ್ ಬಗ್ಗೆ ನಮಗೆ ಮಾಹಿತಿ ಇಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸಾವಿಗೂ ಮುನ್ನ ಅವಳನ್ನ ಆ ಹುಡುಗ ಏನು ಮಾಡಿದ್ದಾನೆ, ಎಲ್ಲಿಗೆ ಕರೆದುಕೊಂಡು ಹೋಗಿ ಹಾಳು ಮಾಡಿದ್ದಾನೆ ಎಂದು ಗೊತ್ತಾಗಬೇಕು. ನನ್ನ ಮಗಳು ಸಾವಿಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿಲ್ಲ. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಆಗಬೇಕು ಎಂದು ಡಿಸಿ ಮತ್ತು ಎಸಿಗೆ ಮನವಿ ಸಲ್ಲಿಸಿದ್ದಾರೆ ಎಂದು ರೀನಾ ಡಿಸೋಜಾ ಹೇಳಿದ್ದಾರೆ.
ಪ್ರಕರಣ ಖಂಡಿಸಿ ನಾಳೆ ಪ್ರತಿಭಟನೆ
ಕಾರವಾರ ಕ್ರಿಶ್ಚಿಯನ್ ಫೋರಂ ಅಧ್ಯಕ್ಷ ಲಿಯೋ ಲೂಯಿಸ್ ಮಾತನಾಡಿ, ಪ್ರಕರಣವನ್ನು ಖಂಡಿಸಿ ನಾಳೆ (ಜ.20) ಕಾರವಾರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ರಿಶೇಲ ಸಾವಿಗೆ ನ್ಯಾಯ ಕೋರಿ ಕ್ರಿಶ್ಚಿಯನ್ ಸಂಘಟನೆಯಿಂದ ಕಾರವಾರ ನಗರದ ಮಿತ್ರ ಸಮಾಜ ಸರ್ಕಲ್ ನಿಂದ ಡಿಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ: ಜೆಡಿಎಸ್ ಮುಖಂಡ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಪ್ರಕರಣ : 2 ಗ್ರಾಮಗಳ ಮಧ್ಯೆ ಮೂಡಿದ ವೈಮನಸ್ಸು
ಮೊದಲ ಮರಣ ವರದಿ ನೊಡಿದಾಗ ತಪ್ಪು ಕಂಡುಬರುತ್ತದೆ. ಬಹಳ ಬೇಜವಾಬ್ದಾರಿಯಿಂದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕೆಲವು ವಿಚಾರದ ಬಗ್ಗೆ ವೈದ್ಯರನ್ನ ಪ್ರಶ್ನಿಸಿದಾಗ ಪೊಲೀಸ್ ಹಿರಿಯ ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿಲ್ಲ ಅಂತ ಹೇಳಿದ್ದಾರೆ. ಈಗ ಪಿಎಸ್ಐ ನನ್ನ ಸಸ್ಪೆಂಡ್ ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಕಾಣದ ಕೈಗಳಿವೆ. ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ವೈದ್ಯಕೀಯ ಸಿಬ್ಬಂದಿಗೂ ಶಿಕ್ಷೆ ಆಗಬೇಕು. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಿ ಯುವತಿಯ ಸಾವಿಗೆ ನ್ಯಾಯ ಒದಗಿಸಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 4:21 pm, ಸೋಮ, 19 ಜನವರಿ 26