ಅರಿಶಿನ (Turmeric) ಅಥವಾ ಅರಿಸಿನ ಅನ್ನೋದು ಒಂದು ಮಸಾಲೆ ಪದಾರ್ಥ ಎನ್ನಬಹುದು. ಆದರೆ, ಇದನ್ನು ಕೇವಲ ಮಸಾಲಾ ಪದಾರ್ಥ ಎಂಬಂತೆ ನೋಡಲಾಗದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮಾತ್ರವಲ್ಲ, ಇದರಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಈ ಸ್ಟೋರಿ ನೋಡಿ..

ಅರಿಸಿನವನ್ನು ಕೇವಲ ಮಸಾಲಾ ಪದಾರ್ಥ ಎಂದು ಭಾವಿಸಬೇಡಿ.. ಇದು ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನೂ ವಹಿಸುತ್ತದೆ.

ಅರಿಶಿನ ಗಿಡ ಸಾಮಾನ್ಯವಾಗಿ ಎಲ್ಲಾ ಕಡೆ ಬೆಳೆಯುತ್ತದೆ. ಒಮ್ಮೆ ಬೆಳೆಯಲು ಸಾಧ್ಯವಿಲ್ಲ ಎಂದಾದರೆ ಅಂಗಡಿಯಿಂದ ತಂದ ಶುದ್ಧ ಅರಿಸಿನವನ್ನು ಬಳಸಿ..

ಅರಿಶಿನವನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುವ ಪದ್ಧತಿ ಭಾರತದಲ್ಲಿ ಇದೆ. ಆದರೆ, ಅದನ್ನು ಆರೋಗ್ಯವರ್ಧಕವಾಗಿಯೂ ಬಳಸಬಹುದು.

ಆಯುರ್ವೇದದಲ್ಲಿ ಅರಿಸಿನದ ಬಳಕೆ ಹೆಚ್ಚಾಗಿಯೇ ಇದೆ. ರಾತರಿ ಮಲಗುವಾಗ ಹಾಲಿಗೆ ಸ್ವಲ್ಪ ಅರಿಶಿನವನ್ನು ಸೇರಿಸಿ ಕುಡಿದರೆ ಅದು ಉತ್ಕರ್ಷಣ ನಿರೋಧಕವಾಗಿಯೂ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇದೆ.

ಅಷ್ಟೇ ಅಲ್ಲ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಸಿನದ ಉಂಡೆ ಅಥವಾ ಬಿಸಿನೀರಿಗೆ ಸ್ವಲ್ಪ ಅರಿಶಿವನ್ನು ಸೇರಿಸಿ ಕುಡಿದರೆ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಆಗುತ್ತದೆ ಎಂಬುದು ಹೊಸ ಸಂಗತಿಯೇನೂ ಅಲ್ಲ.

ಅನಾರೋಗ್ಯ ಸಮಸ್ಯೆ ಇದ್ದರೆ ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು ಅರಿಶಿನವನ್ನು ಬಳಸಿ..

Source link
ಅರಿಶಿನ ಮಸಾಲಾ ಪದಾರ್ಥ ಮಾತ್ರವಲ್ಲ, ಜೀವಸಂಜೀವಿನಿಯೂ ಹೌದು.. ಹೀಗೆ ಬಳಸಿ, ಚಮತ್ಕಾರ ನೋಡಿ..!