ನವೆಂಬರ್ 19: 2 ಗಂಟೆಗಳ ಭಾರತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಇಐ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (ಪಿಎಂ ಮೋದಿ) ಮರದ ಕೆತ್ತನೆಯ ಉಯ್ಯಾಲೆ ಮತ್ತು ಪಶ್ಮಿನಾ ಶಾಲೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷ ನಹ್ಯಾನ್ ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಂಡರು. ಬಳಿಕ ಅವರು ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದರು. ತಮ್ಮ ಅತಿ ಸಣ್ಣ ಭೇಟಿಯನ್ನು ಮುಗಿಸಿಕೊಂಡು ವಾಪಾಸ್ ಹೊರಟ ಯುಎಇ ಅಧ್ಯಕ್ಷರಿಗೆ ವಿಶೇಷವಾದ ಉಡುಗೊರೆಯನ್ನು ನೀಡಲಾಯಿತು.
ಗುಜರಾತಿನ ಕರಕುಶಲಕರ್ಮಿಗಳು ಕೆತ್ತಿದ ಮರದ ಉಯ್ಯಾಲೆಯನ್ನು ಯುಎಇ ಅಧ್ಯಕ್ಷರಿಗೆ ನೀಡಲಾಯಿತು. ಅದನ್ನು ಹೂವಿನ ಮತ್ತು ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಕೈಯಿಂದ ಕೆತ್ತಲಾಗಿದೆ. ಗುಜರಾತಿ ಸಂಸ್ಕೃತಿಯಲ್ಲಿ ತಲೆಮಾರುಗಳಾದ್ಯಂತ ಒಗ್ಗಟ್ಟು ಮತ್ತು ಬಾಂಧವ್ಯವನ್ನು ಪ್ರತಿನಿಧಿಸುವ ಈ ಉಯ್ಯಾಲೆಯ ಜೊತೆಗೆ ಕಾಶ್ಮೀರದ ಪಶ್ಮಿನಾ ಶಾಲೆಯನ್ನು ಸಹ ಉಡುಗೊರೆಯಾಗಿ ನೀಡಲಾಯಿತು. ಈ ಶಾಲನ್ನು ತುಂಬಾ ಉತ್ತಮವಾದ ಉಣ್ಣೆಯನ್ನು ಬಳಸಿ ಕೈಯಿಂದ ನೇಯವಾಗಿದ್ದರೆ, ಇದು ಮೃದು ಮತ್ತು ಬೆಚ್ಚಗಿರುತ್ತದೆ ಇದನ್ನು ತೆಲಂಗಾಣದಲ್ಲಿ ತಯಾರಿಸಲಾದ ಅಲಂಕಾರಿಕ ಬೆಳ್ಳಿ ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ. ಇದು ಭಾರತದ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ