Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 20ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 20ರ ದಿನಭವಿಷ್ಯ


ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 20ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸ್ವೀಕರಿಸದಂತೆ ವಿಚಾರಕ್ಕೋ ಅಥವಾ ಪಾರ್ಕಿಂಗ್ ಕಾರಣಕ್ಕೋ ನೆರೆಮನೆಯವರು- ಅಪರಿಚಿತರ ಜೊತೆಗೆ ಜೋರು ಮಾತುಕತೆ, ವಾದ- ವಾಗ್ವಾದ ಆಗುವ ಯೋಗ ಈ ದಿನ ಇದೆ. ಸಮಸ್ಯೆಯ ಆಧಾರದ ಅರಿವಿಲ್ಲದೆ ನೀವು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ವಿಷಯಗಳು, ಸಾರ್ವಜನಿಕ ವೇದಿಕೆಯಲ್ಲಿ ನೀವಾಡುವ ಮಾತುಗಳ ಮೇಲೆ ನಿಗಾ ಇರಿಸಿಕೊಳ್ಳಬೇಕು. ನಿಮ್ಮಲ್ಲಿ ಕೆಲವು ದೊಡ್ಡ ಹುದ್ದೆಗೆ ನೇಮಕ ಆಗುವ ಬಗ್ಗೆ ಮಾಹಿತಿ ದೊರೆಯುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಖ್ಯಾತಿ, ಜನಪ್ರಿಯತೆ ಹೆಚ್ಚಾಗುವ ದಿನ ಇದಾಗಿದೆ. ಉದ್ಯೋಗ- ವೃತ್ತಿ- ಹೀಗೆ ನೀವು ಯಾವುದೇ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಣೆ ಮಾಡುತ್ತಾ ಇದ್ದರೆ ಆದಾಯ ಮತ್ತು ಆದಾಯ ಎರಡೂ ಇರಬಹುದು. ನಿಮ್ಮಲ್ಲಿ ಕೆಲವು ದುಬಾರಿ ಗ್ಯಾಜೆಟ್ ಖರೀದಿ ಮಾಡುವ ಯೋಗ ಈ ದಿನ ಇದೆ. ಸಣ್ಣದಾಗಿ ಅಥವಾ ಮನೆಯಿಂದ ಮಾಡಬೇಕು ಅಂದುಕೊಳ್ಳುತ್ತಾ ಇದ್ದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವುದಕ್ಕೆ ತೀರ್ಮಾನ ಮಾಡುತ್ತೀರಿ. ನಿಮಗೆ ಬರಬೇಕಾದ ಸಾಲ ಬಾಕಿಯನ್ನು ವಸೂಲಿ ಮಾಡಬಹುದು.

ಇದನ್ನೂ ಓದಿ: ಜನವರಿ ತಿಂಗಳ ಮೂರನೇ ವಾರ ನಿಮ್ಮ ರಾಶಿಗನುಗುಣವಾಗಿ ಭವಿಷ್ಯ ತಿಳಿಯಿರಿ

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕಲಾವಿದರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಬಹುದು. ಅಥವಾ ನಿಮಗೆ ಸನ್ಮಾನ, ಗೌರವ ದೊರೆಯುವ ಬಗ್ಗೆ ಮಾಹಿತಿ ಸಹ ಸಿಗಬಹುದು. ನಿಮ್ಮಲ್ಲಿ ಯಾರು ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾರೆ ಅಂತಹವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯುವ ಅವಕಾಶವಿದೆ. ಕುಟುಂಬ ಸದಸ್ಯರ ಒತ್ತಾಯದ ದೂರ ಪ್ರಯಾಣಕ್ಕೆ ನಿಮ್ಮಲ್ಲಿ ಕೆಲವರು ಸಿದ್ಧತೆ ಮಾಡಿಕೊಳ್ಳುತ್ತಾರೆ.

ಲೇಖನ- ಸ್ವಾತಿ ಎನ್.ಕೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *