Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 20ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 20ರ ದಿನಭವಿಷ್ಯ


ಜನ್ಮಸಂಖ್ಯೆ ೭, ೮, ೯ರ ದಿನಭವಿಷ್ಯವನ್ನು ನೀಡುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 20ರ ಮಂಗವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಶುಭ ಕಾರ್ಯ- ಸಮಾರಂಭ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು. ಹಣ ಕಾಸಿನ ವಿಚಾರದಲ್ಲಿ ಇಲ್ಲಿಯವರೆಗೆ ಕಾಡುತ್ತಿದ್ದ ಒತ್ತಡಗಳು ಏನಾದರೂ ಇದ್ದಲ್ಲಿ ಅವು ನಿವಾರಣೆ ಮಾಡಿಕೊಳ್ಳುವ ಮಾರ್ಗ ಉಪಾಯಗಳು ಗೋಚರಿಸುತ್ತವೆ. ನಿಮ್ಮಂತೆಯೇ ಆಲೋಚನೆ ಮಾಡುವ ವ್ಯಕ್ತಿಗಳ ಭೇಟಿಯಿಂದ ಒಂದು ಹೊಸ ವಿಶ್ವಾಸ ಮೂಡಲಿದೆ. ವಿರಾಮದ ಸಲುವಾಗಿ ಪ್ರವಾಸ ಹೋಗಬೇಕು ಅಂದುಕೊಂಡವರಿಗೆ ಕೆಲಸ- ಜವಾಬ್ದಾರಿಗಳ ಕಾರಣಕ್ಕೆ ಸದ್ಯಕ್ಕೆ ಇದು ಸಾಧ್ಯವಿಲ್ಲ ಎಂದೆನಿಸಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಜಿಮ್- ಯೋಗ- ಪ್ರಾಣಾಯಾಮ, ಸೈಕ್ಲಿಂಗ್ ಇಂಥ ಅಭ್ಯಾಸಗಳನ್ನು ಸ್ವೀಕರಿಸಿದವರಿಗೆ ಕೆಲವು ಸಮಯದಿಂದ ದೂರವಿರಲೇಬೇಕಾದ ಅನಿವಾರ್ಯ ಎದುರಾಗುತ್ತದೆ. ಕೆಲವು ಮುಖ್ಯವಾಗಿ ಕಾಲ ಬೇರೆ ಪ್ರದೇಶಕ್ಕೆ ಉದ್ಯೋಗ ಅಥವಾ ವೃತ್ತಿ ನಿಮಿತ್ತವಾಗಿ ತೆರಳಬೇಕಾದ ಸೂಚನೆ ಅಥವಾ ಸುಳಿವು ದೊರೆಯಲಿದೆ. ನೀವು ತುಂಬಾ ಉತ್ಸಾಹ ತೋರಿದರೂ ನಂತರದಲ್ಲಿ ಒಪ್ಪಿಕೊಳ್ಳುವಂಥ ಕೆಲಸ- ಕಾರ್ಯಗಳು ಒತ್ತಡವಾಗಿ ಪರಿಣಮಿಸುತ್ತದೆ. ಹಾಲು- ತುಪ್ಪ ಇಂಥ ಡೇರಿ ಪದಾರ್ಥಗಳನ್ನು ಸೇವಿಸುವಾಗ ಎಚ್ಚರಿಕೆಯಿರಲಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇತರರ ವಸ್ತುಗಳನ್ನು ಅಪೇಕ್ಷಿಸುವುದೋ ಅಥವಾ ಅದನ್ನು ನಿಮಗೆ ನೀಡುವಂತೆ ಒತ್ತಾಯ ಮಾಡುವುದೋ ಯಾವ ಕಾರಣಕ್ಕೂ ಈ ದಿನ ಬೇಡ. ನಿಮಗೆ ಎಷ್ಟು ಆಪ್ತರು ಅಂತಾದರೂ ಸಲುಗೆ ಬೇಡ. ಇನ್ನು ನಿಮ್ಮ ಉಳಿತಾಯ- ಹೂಡಿಕೆ ಮೊತ್ತ ಎಷ್ಟಿದೆ ಎಂಬುದರ ಜೊತೆಗೆ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಉದ್ಯೋಗ ತಮಾಷೆಗೆ ಆರಂಭಿಸಿದ ಮಾತುಕತೆ ಗಂಭೀರ ಸ್ವರೂಪದಲ್ಲಿ, ಇತರರಿಗೆ ಬೇಸರ ಉಂಟು ಮಾಡಬಹುದು. ಆದ್ದರಿಂದ ಮಿತಿಯನ್ನು ಅರಿತು ಮಾತುಗಳನ್ನು ಆಡಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *