Headlines

‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’; ಗಿಲ್ಲಿ ಗೆಲುವಿಗೆ ಮನಸಾರೆ ಹಾರೈಸಿದ ಕಾವ್ಯಾ

‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’; ಗಿಲ್ಲಿ ಗೆಲುವಿಗೆ ಮನಸಾರೆ ಹಾರೈಸಿದ ಕಾವ್ಯಾ


ಬಿಗ್ ಬಾಸ್ ಅಲ್ಲಿರುವಾಗ ಕಾವ್ಯ ಶೈವ ಹಾಗೂ ಗಿಲ್ಲಿ ನಟನ (ಗಿಲ್ಲಿ ನಾಟಾ) ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಇಬ್ಬರೂ ಸೇರಿ ಸ್ಪರ್ಧೆ ಮಾಡಿದರು. ಕಾವ್ಯ ಪರವಾಗಿ ಗಿಲ್ಲಿ ಸದಾ ನಿಲ್ಲುವಂತೆ. ಕಾವ್ಯ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದರೂ ಗಿಲ್ಲಿ ಕೇಳಿಸಿಕೊಳ್ಳುತ್ತಾರೆ. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಕಾವ್ಯ ಅವರು ಗಿಲ್ಲಿಗೆ ಮನಸಾರೆ ವಿಶ್ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಸುದೀಪ್ ಅವರು ಗಿಲ್ಲಿ ಕೈ ಎತ್ತಿದ ಫೋಟೋ ಹಾಗೂ ಗಿಲ್ಲಿ ಪಕ್ಕದಲ್ಲಿ ಕುಳಿತ ಫೋಟೋಗಳನ್ನು ಕಾವ್ಯ ಹಂಚಿಕೊಂಡಿದ್ದಾರೆ. ‘ಬಡವರ ಮಕ್ಕಳು ಬೆಳಗಬೇಕು ಕಣ್ರಯ್ಯ’ ಎಂಬ ಕ್ಯಾಪ್ಶನ್ ಮೂಲಕ ಪೋಸ್ಟ್ ಮಾಡಿದ್ದಾರೆ. ‘ಹೇ, ಗಿಲ್ಲಿ ಕಂಗ್ರಾಜ್ಯುಲೇಷನ್ ಕಣೋ. ನೀನು ಇದಕ್ಕೆ ಅರ್ಹ’ ಎಂದು ಕಾವ್ಯ ಬರೆದಿದ್ದಾರೆ.

‘ಜೀರೋದಿಂದ ಹೀರೋ ಆದೆ. ಇನ್ನೂ ದೂರ ಸಾಗಬೇಕಿದೆ. ಆದಷ್ಟು ಬೇಗ ಆಯಕ್ಷನ್- ಕಟ್ ಹೇಳೋ ಹಾಗಾಗಲಿ. ತುಂಬಾ ಒಳ್ಳೇದಾಗ್ಲಿ’ ಎಂದು ಕಾವ್ಯಾ ಅವರು ಗಿಲ್ಲಿಗೆ ಮನಸಾರೆ ಹಾರೈಸಿದ್ದಾರೆ.

ಬಿಗ್ ಬಾಸ್ ಮನೆಯ ಒಳಗೆ ಹೋಗುವಾಗ ಕಾವ್ಯಾ ಹಾಗೂ ಗಿಲ್ಲಿ ಜಂಟಿಯಾಗಿ ತೆರಳಿದ್ದರು. ಅಲ್ಲಿಂದ ಅವರ ಪ್ರಯಾಣ ಶುರುವಾಯಿತು. ಜಂಟಿ ಆಟ ಮುಗಿದ ಬಳಿಕವೂ ಕಾವ್ಯಾ ಹಾಗೂ ಗಿಲ್ಲಿ ಒಟ್ಟಿಗೇ ಇರುವಂತೆ. ನಮ್ಮ ಮಧ್ಯೆ ಇರೋದು ಶುದ್ಧ ಗೆಳೆತನ ಎಂದು ಅವರು ಆಗಾಗ ಸ್ಪಷ್ಟನೆ ಕೊಡುತ್ತಲೇ ಇದ್ದರು.

ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಹೆಚ್ಚುವರಿಯಾಗಿ ಸಿಕ್ತು 20 ಲಕ್ಷ ರೂಪಾಯಿ?

ಇನ್ನು, ಇಬ್ಬರ ಆಪ್ತತೆಯ ಕಾರಣಕ್ಕೆ ಇವರ ಮದುವೆ ವಿಷಯ ಚರ್ಚೆ ಆಗುತ್ತಿದೆ. ಇದಕ್ಕೆ ಉತ್ತರಿಸಿದ ಗಿಲ್ಲಿ ತಂದೆ ತಾಯಿ, ‘ಗಿಲ್ಲಿಗೆ ಯಾರು ಇಷ್ಟವೋ ಅವರ ಜೊತೆ ಮದುವೆ ಮಾಡಿ ಕೊಡ್ತೀವಿ’ ಎಂದು ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *