Headlines

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್


ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಲು ವಿಶೇಷ ಪ್ಯಾಕೇಜ್ ಒಂದನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (kstdc) ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಜನರು ಮಂತ್ರಾಲಯಕ್ಕೆ ಹೋಗುವುದು ಹೆಚ್ಚು. ಅದರಲ್ಲೂ ಕರ್ನಾಟಕದ ಜನರಿಗೆ ಇದು ಇನ್ನೂ ವಿಶೇಷವಾಗಿದೆ. ರಾಘವೇಂದ್ರ ಸ್ವಾಮಿ ಕರ್ನಾಟಕದ ಜನರ ಆರಾಧ್ಯ ದೈವ, ಈ ಕ್ಷೇತ್ರ ಆಂಧ್ರ ಗಡಿಯಲ್ಲಿದ್ದರು. ಹೆಚ್ಚು ಜನ ರಾಜ್ಯದಲ್ಲಿಯೇ ಹೋಗುತ್ತಾರೆ. ರಾಯರ ದರ್ಶನಕ್ಕೆ ಪ್ರತಿದಿನ ಜನ ಇರುತ್ತಾರೆ. ಇದೀಗ ಇಲ್ಲಿ ವಿಶೇಷ ಪ್ಯಾಕೇಜ್ ಒಂದನ್ನು kstdc ನೀಡಿದೆ. ಬುದ್ಧವಾರ ಮತ್ತು ಶುಕ್ರವಾರ ಈ ಪ್ಯಾಕೇಜ್ ಇರುತ್ತದೆ. ರಾಘವೇಂದ್ರ ಸ್ವಾಮಿ ಮಠದಲ್ಲಿ. ಇತರ ಸ್ಥಳಗಳಿಗೆ ಯಾರಾದರೂ ಕರೆದುಕೊಂಡು ಹೋಗಬೇಡಿ. ಜತಗೆ ಈ ಎಲ್ಲ ಸೌಲಭ್ಯಗಳಿವೆ.

ಪ್ರಯಾಣದ ವಿವರ:

ರಾಘವೇಂದ್ರ ಸ್ವಾಮಿ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಮೂಲಕ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂತ್ರಾಲಯಕ್ಕೆ ತಲುಪಲಿದೆ. ಇದರೊಂದಿಗೆ ಪಂಚಮುಖಿ ಆಂಜನೇಯ ದೇವಸ್ಥಾನ ಕೂಡ ದರ್ಶನ ಮಾಡಬಹುದು. ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಈ ದಿನದಂದು ಪ್ಯಾಕ್ ಅನ್ನು ಬಿಡುಗಡೆ ಮಾಡಲಾಗಿದೆ.

ದಿನ 1: ರಾತ್ರಿ 8.00 ಗಂಟೆಗೆ ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನ.

ದಿನ 2: ಬೆಳಿಗ್ಗೆ 4.30 – 6.00 ಫ್ರೆಶ್ ಅಪ್

ಬೆಳಿಗ್ಗೆ 6.30 – 10.00 ರಾಘವೇಂದ್ರ ಸ್ವಾಮಿಯ ದರ್ಶನ

ಬೆಳಿಗ್ಗೆ 11.00 – ಮಧ್ಯಾಹ್ನ 12 ಪಂಚಮುಖಿ ಆಂಜನೇಯ ದೇವಸ್ಥಾನ

ಮಧ್ಯಾಹ್ನ 1.00 – 2.00 ದಾರಿಯಲ್ಲಿ ಊಟ

ರಾತ್ರಿ 9.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ

ಇದನ್ನೂ ಓದಿ: KSTDC ನಿಂದ ವಿಶೇಷ ಪ್ಯಾಕೇಜ್: 20% ರಿಯಾಯಿತಿ, ಎಲ್ಲಿಗೆಲ್ಲ ಟೂರ್

ಪ್ಯಾಕೇಜ್ ದರ ಹೇಗೆ?

ಈ ವಿಶೇಷ ಪ್ಯಾಕ್‌ನಲ್ಲಿ ಎಲ್ಲ ಸೌಲಭ್ಯಗಳು ಸೇರಿದಂತೆ ಒಬ್ಬರಿಗೆ 2780 ಇರುತ್ತದೆ. ಜೊತೆಗೆ ಮರುಪಾವತಿ ಸೌಲಭ್ಯ ಕೂಡ ಇದೆ. 48 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ – 10%, 24 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ – 25% ಕಡಿತಗೊಳಿಸಲಾಗಿದೆ. 24 ಗಂಟೆಗಳ ಒಳಗೆ ಟಿಕೆಟ್ ರದ್ದು ಮಾಡಿದರೆ ಯಾವುದೇ ಮರುಪಾವತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೆಬ್ ಸೈಟ್ಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *