ಉಡುಪಿ, ಜನವರಿ 20: ಶ್ರೀಕೃಷ್ಣ ಮಠದಲ್ಲಿ ಶೀರೂರು ಪರ್ಯಾಯ ಪ್ರಾರಂಭದಿಂದ ಮಠಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರಸಂಹಿತೆ ಜಾರಿಯಲ್ಲಿದೆ. ಪುರುಷರು ಅಂಗ ಬನಿಯನ್ ಧರಿಸಿ ಮಠ ಪ್ರವೇಶಿಸಿದ್ದಾರೆ ಮತ್ತು ಬರ್ಮುಡಾ ಸೇರಿ ಬಿಗಿ ಉಡುಪುಗಳಿಗೆ ಅವಕಾಶವಿಲ್ಲ. ಮಹಿಳೆಯರು ವೆಸ್ಟರ್ನ್ ಬಟ್ಟೆಗಳ ಬದಲಿಗೆ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಬರುವಂತೆ ಮಠದ ಆಡಳಿತ ಮಂಡಳಿ ಮನವಿ ಮಾಡಿದೆ. ಪರ್ಯಾಯ ಶೀರೂರು ಸ್ವಾಮೀಜಿಗಳ ಸೂಚನೆ ನಿನ್ನೆಯಿಂದಲೇ ದೇಗುಲದಲ್ಲಿ ನೂತನ ವಸ್ತ್ರಸಂಹಿತೆ ಜಾರಿಯಲ್ಲಿದೆ. ಈ ಹಿಂದೆ ಮಹಾಪೂಜೆ ನಂತರ ಪುರುಷರು ಅಂಗಿ ಮತ್ತು ಬನಿಯನ್ ಧರಿಸಿಯೇ ದೇವರ ದರ್ಶನ ಮಾಡಬಹುದಿತ್ತು. ಆದರೆ ಇನ್ನು ಮುಂದೆ ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿರಲಿದೆ. ರಾತ್ರಿಯವರೆಗೂ ವಿವಿಧ ಬಗೆಯ ಪೂಜೆಗಳು ನಡೆಯುವ ಕಾರಣ ಪೂರ್ತಿ ದಿನಕ್ಕೂ ವಸ್ತ್ರ ಸಂಹಿತೆ ಜಾರಿ ಮಾಡಿರೋದಾಗಿ ತಿಳಿಸಲಾಗಿದೆ.
ಯಾವ್ಯಾವ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದೆ?
ಕೊಲ್ಲೂರು, ಧರ್ಮಸ್ಥಳ, ಮುರುಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಹಲವು ಪ್ರಮುಖ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದೆ. ಇನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲ ದೇವಾಲಯಗಳಲ್ಲಿ ಸರ್ಕಾರವು ಅಧಿಕೃತವಾಗಿ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಿಲ್ಲ ಸ್ಥಳೀಯ ದೇವಾಲಯಗಳ ಆಡಳಿತ ಮಂಡಳಿಗಳು ಮತ್ತು ಭಕ್ತರ ಮಂಡಳಿಗಳು ಧಾರ್ಮಿಕ ಪಾವಿತ್ರ್ಯತೆಗಾಗಿ ಈ ನಿಯಮಗಳನ್ನು ಜಾರಿಗೊಳಿಸಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.