ಮೈಸೂರು, ಜನವರಿ 20: ಉದಯಗಿರಿಯಲ್ಲಿ ಕಳೆದ ವರ್ಷ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಅಷ್ಟೇ ಅಲ್ಲದೆ ಎರಡು ದಿನಗಳ ಹಿಂದೆ ಯುವಕರು ಮಚ್ಚು, ಲಾಂಗು ಹಿಡಿದು ನಿಲ್ಲಿಸಿದ ವೀಡಿಯೋ ಸಹ ಭಾರಿ ಸುದ್ದಿ ಮಾಡಿತ್ತು. ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮೊದಲೇ ಮತ್ತೊಂದು ಭೀಕರ ಘಟನೆ ಉದಯಗಿರಿಯಲ್ಲಿ (ಉದಯಗಿರಿ) ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನೊಬ್ಬನ ಕೊಲೆ, ಮತ್ತೊಮ್ಮೆ ಮೈಸೂರಿನಲ್ಲಿ ಹಲ್ ಚಲ್ ಎಬ್ಬಿಸಿದೆ.
ಇತ್ತೀಚೆಗಷ್ಟೇ ಮಚ್ಚು ಹಿಡಿದಿದ್ದ ಯುವಕ
ಮೈಸೂರಿನ ಅಬುಜರ್ ಸಮೀಪದ ಪಾರ್ಕ್‌ನಲ್ಲಿ ಉದಯಗಿರಿಯ ಶಕಿಬುಲ್ ರೆಹಮಾನ್ ಅಲಿಯಾಸ್ ಟಿಪ್ಪು, ಇಮ್ರಾನ್, ಆಸೀಫ್, ಅಜಾಂ, ಅಜೀಜ್ ಎಂಬವರ ನಡುವೆ ಕ್ರಿಕೆಟ್ ಆಟದ ವಿಚಾರವಾಗಿ ಮಾರಾಮಾರಿ ನಡೆದಿದ್ದು, ಲಾಂಗು ಮಚ್ಚುಗಳನ್ನು ಹಿಡಿದು ಸಾರ್ವಜನಿಕವಾಗಿ ನಡೆದ ಘಟನೆ ಭಾನುವಾರ ನಡೆಯಿತು. ಇದರ ದೃಶ್ಯಾವಳಿಗಳು ಎಲ್ಲೆಡೆ ಹರಿದಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿತ್ತು. ಈ ಭೀಕರತೆಯ ಸದ್ದು ಅಡಗುವ ಮುನ್ನವೇ ಇದೇ ಉದಯಗಿರಿಯಲ್ಲಿ ಯುವನೋರ್ವನ ಚಾಕು ಇರಿದು ಹತ್ಯೆಮಾಡಲಾಗಿದೆ.
ಫೈನಾನ್ಸ್ ವಿಷಯಕ್ಕೆ ನಡೆದ ಕೊಲೆ
ಗೌಸಿಯಾ ನಗರದ ನಿವಾಸಿ ಶಹಬಾಜ್ (26) ಮೃತ ದುರ್ದೈವಿ. ನಗರದ ಬೀದಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಜುಬೇರ್ ಎಂಬಾತನೇ ಸೇರಿ ಈ ಕೃತ್ಯ ನಡೆಸಿದ ಆರೋಪ ಕೇಳಿಬಂದಿದೆ. ಪ್ರಾಥಮಿಕವಾಗಿ ಸಿಕ್ಕ ಮಾಹಿತಿಯ ಪ್ರಕಾರ ಸಣ್ಣಪುಟ್ಟ ವಿಷಯಕ್ಕೆ ಯುವಕರ ನಡುವೆ ನಡೆದ ಗಲಾಟೆ ಕೊಲೆಯಾಗಿ ಪರಿಣಮಿಸಿದೆ.
ಕೊಲೆಯಾದ ಯುವಕ ಶಹಬಾಜ್ ವೆಲ್ ಶಾಪಿಂಗ್ ಹೊಂದಿದ್ದು, ಫೈನಾನ್ಸ್ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಏರಿಯಾದಲ್ಲಿ ನಡೆಯುತ್ತಿದ್ದ ಫೈನಾನ್ಸ್ ಹಾವಳಿಗೆ ಒಳಗಾಗಿದ್ದವರಿಂದ ಪೊಲೀಸ್ ಠಾಣೆಗೆ ಶಹಬಾಸ್ ಕಂಪ್ಲೇಂಟ್ ಕೊಡಿಸಿದ್ದ. ಈ ಕಾರಣಕ್ಕಾಗಿಯೇ ನಾಲ್ಕು ತಿಂಗಳ ಹಿಂದೆ ಆರೋಪಿ ತನ್ನನ್ನು ಶಹಬಾಜ್ ಅಂಗಡಿ ಮುಂದೆ ಬಂದು ಗಲಾಟೆ ಮಾಡಿದ್ದ. ಇದೀಗ ನಿನ್ನೆ (ಜನವರಿ 19) ರಾತ್ರಿ 1 ಗಂಟೆ ವೇಳೆ ಅಂಗಡಿ ಮುಚ್ಚಿ ಕುಳಿತಿದ್ದ ಶಬಾಜ್ ಮೇಲೆ ಏಕಾಏಕಿ ದಾಳಿ ನಡೆದಿದ್ದು, ಆರೋಪಿಗಳ ತಲೆ, ಎದೆ, ಕತ್ತು, ಹೊಟ್ಟೆಗೆ ಮತ್ತೊಮ್ಮೆ ಚುಚ್ಚಿ ಹಲ್ಲೆ ಮಾಡಲಾಗಿದೆ.
ಇದನ್ನು ಓದಿ ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಝಳಪಿಸಿದ ಲಾಂಗ್, ಮಚ್ಚುಗಳು: ಭಯಾನಕ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ
ಸ್ಥಳೀಯರು ತಕ್ಷಣ ಶಹಬಾಜ್ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೊಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಈ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.