Headlines

ಹಾಲಿವುಡ್ ಸ್ಟಾರ್ ನಟನಿಗೆ ಭಾರತದ ಈ ನಿರ್ದೇಶಕನೊಟ್ಟಿಗೆ ಕೆಲಸ ಮಾಡುವ ಆಸೆ

ಹಾಲಿವುಡ್ ಸ್ಟಾರ್ ನಟನಿಗೆ ಭಾರತದ ಈ ನಿರ್ದೇಶಕನೊಟ್ಟಿಗೆ ಕೆಲಸ ಮಾಡುವ ಆಸೆ


ಭಾರತೀಯ ಚಿತ್ರರಂಗವನ್ನು (Indian Cinea) ಪಾಶ್ಚಿಮಾತ್ಯರು ಅಸಡ್ಡೆಯಿಂದ ನೋಡುವ ಕಾಲವೊಂದಿತ್ತು. ಭಾರತೀಯ ಸಿನಿಮಾಗಳೆಂದರೆ ಹಾಡು-ನೃತ್ಯ, ನಾಯಕರ ಅತಿಯಾದ ವೈಭವೀಕರ, ಮೆಲೊ ಡ್ರಾಮಾ, ಕಳಪೆ ಪ್ರೊಡಕ್ಷನ್ ಗುಣಮಟ್ಟ ಇಂಥಹವೇ ಎಂದು ಪಾಶ್ಚಾತ್ಯರು ನಂಬಿದ್ದರು. ಆದರೆ ನಿಧಾನಕ್ಕೆ ಅದು ಬದಲಾಯ್ತು. ಈಗ ಪರಿಸ್ಥಿತಿ ಎಂದರೆ ಹಾಲಿವುಡ್ ಭಾರಿ ದೊಡ್ಡ ಸ್ಟಾರ್ ನಟರು ಸಹ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ, ಅದೇ ಭಾರತದ ನಿರ್ದಿಷ್ಟ ನಿರ್ದೇಶಕನ ಜೊತೆ ಕೆಲಸ ಮಾಡುವುದು ನನ್ನ ಕನಸು’ ಎಂದು ಈಗ ಹಾಲಿವುಡ್ನ ಸ್ಟಾರ್ ನಟರು ಹೇಗಿದ್ದಾರೆಂದು ಹೇಳಲಾಗಿದೆ.

‘ಅವೇಂಜರ್ಸ್’ ಸಿನಿಮಾ ಯಾರಿಗೆ ಗೊತ್ತಿಲ್ಲ. ‘ಅವೇಂಜರ್ಸ್’ ಸರಣಿಯ ಮೊದಲ ಸಿನಿಮಾದಲ್ಲಿ ಅದ್ಭುತ ವಿಲನ್ ಲೋಕಿ ಸಹ ಸಿನಿಮಾ ಪ್ರದರ್ಶನಕ್ಕೆ ಬಲು ಪರಿಚಿತ ಪಾತ್ರ. ಆ ಪಾತ್ರ ಅದೆಷ್ಟು ಹಿಟ್ ಆಯ್ತೆಂದರೆ ಅದರ ಪ್ರತ್ಯೇಕ ವೆಬ್ ಸರಣಿಯನ್ನು ಸಹ ಮಾಡಲಾಗಿದೆ. ‘ಅವೇಂಜರ್ಸ್’ನ ಲೋಕಿ ಪಾತ್ರದಲ್ಲಿ ನಟಿಸಿರುವ ಕಲಾವಿದ ಟಾಮ್ ಹಿಡಲ್ ಸ್ಟನ್ ಹಾಲಿವುಡ್ನ ಜನಪ್ರಿಯ ನಟರಲ್ಲಿ ಒಬ್ಬರು. ಟಾಮ್ ಹಿಡಲ್ ಸ್ಟನ್ ಭಾರತದ ನಿರ್ದೇಶಕರೊಬ್ಬರಿಗೆ ಕೆಲಸ ಮಾಡುವ ಆಸೆಯಿದೆಯಂತೆ.

ಭಾರತ ಚಿತ್ರರಂಗದ ಪ್ರಸ್ತುತ ನಂಬರ್ 1 ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರೊಟ್ಟಿಗೆ ಕೆಲಸ ಮಾಡುವ ಕನಸು ಟಾಮ್ ಹಿಡಲ್ ಸ್ಟನ್ ಅವರದ್ದಂತೆ. ಟಾಮ್, ರಾಜಮೌಳಿಯನ್ನು ‘ಎಕ್ಸಲೆಂಟ್’ ಎಂದು ಕರೆದಿರುವ ಜೊತೆಗೆ ತಮಗೆ ಭಾರತೀಯ ಸಿನಿಮಾ ನಿರ್ದೇಶಕರು ರಾಜಮೌಳಿ ಅವರ ಬಳಿ ಕೆಲಸ ಮಾಡುವ ಆಸೆಯಿದೆ. ಟಾಮ್ ಹಿಡಲ್ ಸ್ಟನ್ ಅವರ ಬಲು ಜನಪ್ರಿಯ ವೆಬ್ ಸರಣಿ ‘ದಿ ನೈಟ್ ಮ್ಯಾನೇಜರ್’ನ ಎರಡನೇ ಸರಣಿ ಬಿಡುಗಡೆ ಆಗಲಿದೆ, ಅದರ ಪ್ರಚಾರದಲ್ಲಿ ಟಾಮ್ ಹಿಡಲ್ ಸ್ಟನ್ ಅವರು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್

ಇನ್ನು ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹರಿದಾಡುತ್ತಿರುವ ಸುದ್ದಿಯ ಪ್ರಕಾರ ‘ವಾರಣಾಸಿ’ ಸಿನಿಮಾದಲ್ಲಿ ಖ್ಯಾತ ಹಾಲಿವುಡ್ ನಟ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದ್ಯಾರು ಎಂಬುದು ಇನ್ನೂ ಖಾತ್ರಿ ಆಗಿಲ್ಲ. ‘ವಾರಣಾಸಿ’ ಸಿನಿಮಾದಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸಿದ್ದು ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್. ಸಿನಿಮಾಕ್ಕಾಗಿ ಹಲವು ಹಾಲಿವುಡ್ ತಂತ್ರಜ್ಞರು, ಸ್ಟುಡಿಯೋಗಳು ಕೆಲಸ ಮಾಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *