BBK 12: ಗಿಲ್ಲಿ ವಿನ್​ ಆಗಿರೋ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ರಕ್ಷಿತಾ ಶೆಟ್ಟಿ! ಶಾಕ್​ ಕೊಟ್ಟ ಮಂಗಳೂರು ಪುಟ್ಟಿ

BBK 12: ಗಿಲ್ಲಿ ವಿನ್​ ಆಗಿರೋ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ರಕ್ಷಿತಾ ಶೆಟ್ಟಿ! ಶಾಕ್​ ಕೊಟ್ಟ ಮಂಗಳೂರು ಪುಟ್ಟಿ

BBK 12: ಗಿಲ್ಲಿ ವಿನ್​ ಆಗಿರೋ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ರಕ್ಷಿತಾ ಶೆಟ್ಟಿ! ಶಾಕ್​ ಕೊಟ್ಟ ಮಂಗಳೂರು ಪುಟ್ಟಿ

ಬಿಗ್​ಬಾಸ್​ 12ರ ವಿನ್ನರ್ ಗಿಲ್ಲಿ ನಟನ ಗೆಲುವಿನ ಬಗ್ಗೆ ಸ್ಪರ್ಧಿ ರಕ್ಷಿತಾ ಶೆಟ್ಟಿ ಮಾತನಾಡಿದ್ದಾರೆ. ಗಿಲ್ಲಿ ನಟನ  ಗೆಲುವು ಸಾಧಿಸಿದ್ದು ಹೇಗೆ ಎನ್ನುವ ಮೂಲಕ ಉಳಿದ ಸ್ಪರ್ಧಿಗಳಿಗೆ ಶಾಕ್​  ಕೊಟ್ಟಿದ್ದಾರೆ. ಮಂಗಳೂರು ಪುಟ್ಟಿ ಹೇಳಿದ್ದೇನು?

ಭಾರಿ ಕುತೂಹಲ ಕೆರಳಿಸಿದ್ದ, ಜೊತೆಗೆ ಬಿಗ್​ಬಾಸ್​​ ಪ್ರೇಮಿಗಳಲ್ಲಿ ಅಷ್ಟೇ ಹುಚ್ಚು ಹುಟ್ಟಿಸಿದ್ದು ಈ ಬಾರಿಯ ಸೀಸನ್​ (Bigg Boss 12). ಒಂದು ಹಂತದಲ್ಲಿ ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿಯೇ ಇದು ನಡೆದದ್ದು ಕೂಡ ವಿಶೇಷವೇ. ಕೆಲವು ರಾಜಕೀಯ ವ್ಯಕ್ತಿಗಳೂ ಅಖಾಡಕ್ಕೆ ಇಳಿದು ಸ್ಪರ್ಧಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿದ್ದುದು ಈ ಬಾರಿಯ ವಿಶೇಷ

ಅದೇನೇ ಆದರೂ, ಕೋಟ್ಯಂತರ ಮಂದಿಯ ಹೃದಯ ಗೆದ್ದ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇದಾಗಲೇ ಗಿಲ್ಲಿ ನಟ ಬಡವನ ಸೋಗಿನಲ್ಲಿ ಗೆದ್ದಿರುವುದಾಗಿ ಅಶ್ವಿನಿ ಗೌಡ ಅವರು ಹೇಳಿಕೆ ನೀಡಿದ್ದಾರೆ.

ಇದೀಗ ರಕ್ಷಿತಾ ಶೆಟ್ಟಿ ತಮ್ಮ ಬಿಗ್​ಬಾಸ್​​ ಪಯಣದ ಕುರಿತು ಮಾತನಾಡುತ್ತಾ, ಗಿಲ್ಲಿ ನಟನ ಬಗ್ಗೆ ವಿವರಿಸಿದ್ದಾರೆ. ಒಂದು ಹಂತದಲ್ಲಿ ರಕ್ಷಿತಾಗೆ ಗಿಲ್ಲಿಯ ಮೇಲೆ ಲವ್​ ಶುರುವಾಗಿತ್ತು ಎನ್ನುವ ಮಾತು ಕೂಡ ಕೇಳಿಬಂದಿತ್ತು. ಆದರೆ, ಇವೆಲ್ಲಾ ಆ ಕ್ಷಣದ ಮಾತುಗಳಷ್ಟೇ ವಿನಾ ಇನ್ನೇನೂ ಇಲ್ಲ.

ಆದರೆ, ಇದೀಗ ರಕ್ಷಿತಾ ಅವರು, ಗಿಲ್ಲಿ ನಟ ವಿನ್​ ಆಗಿರುವುದು ಏಕೆ ಎನ್ನುವ ಬಗ್ಗೆ ಉಳಿದ ಸ್ಪರ್ಧಿಗಳಿಗಿಂತ ಭಿನ್ನ ಹೇಳಿಕೆ ನೀಡಿದ್ದಾರೆ. ನಾವೆಲ್ಲರೂ ಒಂದು ರೀತಿಯಲ್ಲಿ ವಿನ್ನರ್​ಗಳೇ. ಇಲ್ಲಿ 1,2,3,4ನೇ ಸ್ಥಾನ ಎನ್ನೋದು ಲೆಕ್ಕ ಮಾತ್ರ ಎನ್ನುವ ಮೂಲಕ ಎಲ್ಲರೂ ಗೆದ್ದಿರುವ ಸ್ಪರ್ಧಿಗಳೇ ಎಂದಿದ್ದಾರೆ.

ಬಳಿಕ ಅವರು ಗಿಲ್ಲಿ ನಟನ (Bigg Boss 12 winner) ಬಗ್ಗೆ ಮಾತನಾಡುತ್ತಾ, ಯಾರನ್ನು ಬೇಕಾದರೂ ಅಳಿಸುವುದು ಸುಲಭ. ಆದರೆ ನಗಿಸುವುದು ತುಂಬಾ ಕಷ್ಟ. ನಾನು ಬಿಗ್​ಬಾಸ್​​ ಮನೆಯಲ್ಲಿ 97% ಖುಷಿಯಾಗಿರುವುದಕ್ಕೆ ಕಾರಣ ಗಿಲ್ಲಿ ಅವರ ಹಾಸ್ಯದ ಪ್ರವೃತ್ತಿ. ಅಂಥ ಟ್ಯಾಲೆಂಟ್​ ಅವರಲ್ಲಿ ಇದೆ. ಅವರು ವಿನ್​ ಆಗಲೇಬೇಕಿತ್ತು. ಏಕೆಂದರೆ, ಇಡೀ ಬಿಗ್ಬಾಸ್​ ಮನೆಯನ್ನು ಅವರು ಅಷ್ಟು ಚೆನ್ನಾಗಿ ನೋಡಿಕೊಂಡರು ಎಂದು ಹೇಳುವ ಮೂಲಕ, ಗಿಲ್ಲಿ ನಟ ಗೆಲುವು ಸಾಧಿಸಿರುವುದಕ್ಕೆ ಉಳಿದ ಸ್ಪರ್ಧಿಗಳಿಗಿಂತ ಭಿನ್ನವಾಗಿ ಸ್ಟೇಟ್​ಮೆಂಟ್​ ಕೊಟ್ಟು ಭೇಷ್​ ಎನ್ನಿಸಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *