ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ನಾಳೆಯಿಂದ (ಜ.21) ಶುರುವಾಗಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಕಿವೀಸ್ ಪಡೆಗೆ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮೈಕೆಲ್ ಬ್ರೇಸ್ ಇಡೀ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಇಂದೋರ್‌ನಲ್ಲಿ ಭಾರತದ ವಿರುದ್ಧ ಮೂರನೇ ಏಕದಿನ ಪ್ರದರ್ಶನ ಕಂಡಿದ್ದ ಮೈಕೆಲ್ ಬ್ರೇಸ್‌ವೆಲ್ ಕಾಲು ನೋವಿಗೆ ತುತ್ತಾಗಿದ್ದರು. ಇದೀಗ ಈ ಗಾಯದ ಸಂಪೂರ್ಣ ಕಾರಣದಿಂದ ಹೊರಗುಳಿಯಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಮೈಕೆಲ್ ಬ್ರೇಸ್ವೆಲ್ ಅಲಭ್ಯತೆಯು ನ್ಯೂಝಿಲೆಂಡ್ ಪಾಲಿಗೆ ಹಿನ್ನಡೆಯಾಗುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದ ಬ್ರೇಸ್ವೆಲ್.
ಭಾರತೀಯ ಬ್ಯಾಟರ್‌ಗಳ ವಿರುದ್ಧ ರಣತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದ ಬ್ರೆಸ್ವೆಲ್ ಟಿ20 ಸರಣಿಯಲ್ಲಿ ನ್ಯೂಝಿಲೆಂಡ್ ಪಾಲಿಗೆ ಅನಿವಾರ್ಯವಾಗಿತ್ತು. ಆದರೀಗ ಸರಣಿ ಆರಂಭಕ್ಕೆ ದಿನಗಳಿರುವಾಗ ಅವರು ಐದೂ ಮ್ಯಾಚ್‌ಗಳಿಂದಲೂ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮೈಕೆಲ್ ಬ್ರೇಸ್ವೆಲ್ ಹೊರಗುಳಿದರೆ ನ್ಯೂಝಿಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಹೇಮ್ಸ್ ನೀಶಮ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ ನೀಶಮ್ ಕೂಡ ಆಲ್ ರೌಂಡರ್ ಆಟಗಾರ. ಅದರಲ್ಲೂ ಅನುಭವಿ ಆಟಗಾರ. ಹೀಗಾಗಿ ಮೊದಲ ಟಿ20 ಬ್ರೇಸ್ ವೆಲ್ ಬದಲಿಗೆ ಜೇಮ್ಸ್ ನೀಶಮ್ ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.