ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ ಸೀಸನ್ 12) ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಜೊತೆ ಕಾವ್ಯಾ ಶೈವ ಅವರು ತುಂಬ ಕ್ಲೋಸ್ ಆಗಿದ್ದರು. ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಕಾವ್ಯ ಶೈವ (ಕಾವ್ಯ ಶೈವ) ಅವರು 3ನೇ ರನ್ನರ್ ಅಪ್ ಆಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಗಿಲ್ಲಿ (ಗಿಲ್ಲಿ ನಾಟಾ) ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಕಾವ್ಯಕ್ಕೆ ಖುಷಿ ಆಗಿದೆ. ‘ಗಿಲ್ಲಿ ಗೆದ್ದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಆ ಗೆಲುವಿಗೆ ಅವನು ಅರ್ಹ. ಇಷ್ಟು ಜನರ ಪ್ರೀತಿ ಗಳಿಸಿದ್ದಕ್ಕೆ ಫ್ರೆಂಡ್ ಆಗಿ ನನಗೆ ಅವನ ಬಗ್ಗೆ ಬಹಳ ಹೆಮ್ಮೆ ಇದೆ. ಅವನ ಜೊತೆ ಇನ್ನೂ ಮಾತಾಡೋಕೆ ಆಗಿಲ್ಲ. ಮಾತನಾಡಬೇಕು’ ಎಂದು ಕಾವ್ಯಾ ಶೈವ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.