ರಾಯಚೂರು, (ಜನವರಿ 20): ಅಕ್ರಮ ಮರಳು ದಂಧೆ (ಅಕ್ರಮ ಮರಳು ಗಣಿಗಾರಿಕೆ)ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ದೇವದುರ್ಗ (ದೇವದುರ್ಗ) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ (ಕರೆಮ್ಮ ನಾಯಕ್) ಮನೆಗೆ ನುಗ್ಗಿ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಶಾಸಕಿ ಕರೆಮ್ಮ ಸೂಚನೆ ನೀಡಿದ್ದರು. ಈ ಸೂಚನೆ ವಾಹನಗಳು, ಅಕ್ರಮ ಮರಳು ದಂಧೆ ಮೇಲೆ ದಾಳಿ ಮಾಡಿದ್ದು, ಜೆ, ಟಿಪ್ಪರ್, ಟ್ರಾಕ್ಟರ್ ಗಳು ಸೇರಿದಂತೆ ಏಳು ಜಪ್ತಿ ಮಾಡಿ ಕೇಸ್ ದಾಖಲಿಸಿದ್ದರು. ಇದರಿಂದ ಆಕ್ರೋಶಗೊಂಡ ದಂಧೆಕೋರರು ಶಾಸಕಿ ಕರೆಮ್ಮ ನಿವಾಸಕ್ಕೆ ನುಗ್ಗಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಂತೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಶಾಸಕಿ ಕರೆಮ್ಮ ಆರೋಪಿಸಿದ್ದು, ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಅಕ್ರಮ ವಿರುದ್ಧ ಸಮರ ಸಾರಿದ್ದಕ್ಕೆ ಬೆದರಿಕೆ
ಕರೆಮ್ಮ ಗೆದ್ದ ಮೇಲಿಂದಲೂ ಸಹ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರುತ್ತಲೇ ಬಂದಿದ್ದಾರೆ. ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಏಳು ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಸಂಬಂಧಿತ ವಾಹನಗಳು ಜನವರಿ 18 ರಂದು ಜೆಸಿಬಿ,ಟಿಪ್ಪರ್ ಗಳು ಸೇರಿ ಏಳು ಜಪ್ತಿ ಮಾಡಲಾಯಿತು. ಈ ಪೈಕಿ ರೊಚ್ಚಿಗೆದ್ದ ದಂಧೆಕೋರರು, ಶಾಸಕಿ ಕರೆಮ್ಮ ಮನೆಗೆ ನುಗ್ಗಿ ಅಕ್ರಮ ಮರಳು ದಂಧೆಗೆ ಕಡಿವಾಣದಂತೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಶಾಸಕಿ ಕರೆಮ್ಮ ಸಹ ರಾಯಚೂರು ಎಸ್ ಪಿ ಅರುಣಾಂಶುಗಿರಿ ಅವರಿಗೆ ದೂರು ನೀಡಿದ್ದು, ಬೆದರಿಕೆ ಹಾಕಿರುವವರು ಹಾಗೂ ಅಕ್ರಮ ಮರಳು ದಂಧೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ: ರಾಯಚೂರು: 2 ಕೋಟಿ ರೂ. ಬಿಲ್ ಪಾವತಿಸಿದ ಸಮಾಜ ಕಲ್ಯಾಣ ಇಲಾಖೆಗೆ ತಕ್ಕ ಶಾಸ್ತಿ
ಶಾಸಕಿ ಕರೆಮ್ಮ ಹೇಳಿದ್ದೇನು?
ಈ ಬಗ್ಗೆ ಟಿವಿ9ಗೆ ಶಾಸಕಿ ಕರೆಮ್ಮ ನಾಯಕ್ ಪ್ರತಿಕ್ರಿಯಿಸಿದ್ದು, ನಿರಂತರವಾಗಿ ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ ಅಕ್ರಮ ಮರಳು ದಂಧೆ ಬಗ್ಗೆ ಕ್ರಮಕೈಗೊಂಡಿದ್ದಾರೆ. ಹೀಗಾಗಿ ನನ್ನ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಈ ನನ್ನ ಬೆಂಬಲಿಗ ದೇವದುರ್ಗ ಠಾಣೆಯಲ್ಲಿ ದೂರು ದಾಖಲಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಶಿವನಗವಡ ನಾಯಕ ಅವರನ್ನು ಕರೆಮ್ಮ ಮಣಿಸಿದ್ದು, ಅಂದಿನಿಂದಲೂ ಇಬ್ಬರ ನಡುವೆಯೂ ಒಂದಲ್ಲ ಒಂದು ಕಾರಣಕ್ಕೆ ರಾಜಕೀಯ ಕಿತ್ತಾಟಗಳು ನಡೆಯುತ್ತಿವೆ. ಮುಖ್ಯವಾಗಿ ಶಿವನಗೌಡ ನಾಯಕ್ ಬೆಂಬಲಿಗರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಸಹ ಯಾವುದೇ ಹಿಂದೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಈ ಬಹಿರಂಗವಾಗಿಯೇ ಆರೋಪಿಸಿದ್ದರು. ಈ ಸಂಬಂಧ ಪ್ರತಿಭಟನೆ ಸಹ ನಡೆಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.