ಬಿಗ್ಬಾಸ್ ಮನೆಯಲ್ಲಿ ತಮ್ಮ ನಿರಂತರ ಕಚ್ಚಾಟದಿಂದಲೇ ಗಮನ ಸೆಳೆದಿದ್ದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್, ಇದೀಗ ತಮ್ಮ ಜಗಳದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನಮ್ಮಿಬ್ಬರದ್ದೂ ಒಂದೇ ರಾಶಿ, ಒಂದೇ ನಕ್ಷತ್ರ ಆಗಿದ್ದರಿಂದಲೇ ಅಷ್ಟು ಜಗಳವಾಡುತ್ತಿದ್ದೆವು ಎಂದಿದ್ದಾರೆ.

ಬಿಗ್ಬಾಸ್ ಮನೆಯಲ್ಲಿ ಭಾರಿ ಕಚ್ಚಾಟ, ಕಾದಾಟದ ನಡುವೆಯೂ ಜನರಿಗೆ ಎಂಟರ್ಟೈನ್ಮೆಂಟ್ ಸಿಕ್ಕಿದ್ದು ಎಂದರೆ ಅದು ರಕ್ಷಿತಾ ಶೆಟ್ಟಿ ಮಾಡುವ ಜಗಳದಿಂದ. ಕನ್ನಡ ಮಿಶ್ರಿತ ಎಲ್ಲಾ ಭಾಷೆಗಳನ್ನು ರಕ್ಷಿತಾ ಹೇಳುವುದೇ ಕ್ಯೂಟ್ ಆಗಿ ವೀಕ್ಷಕರಿಗೆ ಕಾಣಿಸುತ್ತಿತ್ತು. ಆದ್ದರಿಂದ ಅದು ಜಗಳಕ್ಕಿಂತಲೂ ಹೆಚ್ಚಾಗಿ ನಗು ತರಿಸುವಂತಿತ್ತು.

ಅದರಲ್ಲಿಯೂ ಅವರು ಮತ್ತು ಧ್ರುವಂತ್ ಸ್ವಲ್ಪ ಹೆಚ್ಚಾಗಿಯೇ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇಂಥ ಜೋಡಿಯನ್ನು ಬಿಗ್ಬಾಸ್ ಉದ್ದೇಶಪೂರ್ವಕವಾಗಿ ಕೆಲವು ದಿನ ಸೀಕ್ರೆಟ್ ಕೋಣೆಯಲ್ಲಿ ಕೂಡಿ ಹಾಕಿತ್ತು.

ಆಗ ಇವರಿಬ್ಬರ ಕಚ್ಚಾಟ ನೋಡುವುದು ವೀಕ್ಷಕರಿಗೆ ಬಲು ಸೊಗಸಾಗಿತ್ತು. ಇಂಥ ವ್ಯಕ್ತಿ ಜೊತೆ ಇನ್ನೆಷ್ಟು ದಿನ ನಾನು ಇಲ್ಲಿ ಇರಬೇಕೋ ಎಂದು ರಕ್ಷಿತಾ ಶೆಟ್ಟಿ (Bigg Boss Rakshita Shetty) ಗೊಣಗಿದ್ದರು. ಇದನ್ನು ಕೇಳಿ ಧ್ರುವಂತ್ ಕೂಡ ಕೆಂಡಾಮಂಡಲ ಆಗಿದ್ದರು.

ಅದೇನೇ ಆದರೂ ಅದೊಂದು ಸ್ಪರ್ಧೆ ಅಷ್ಟೇ. ಎಲ್ಲರಿಗೂ ತಾವು ಗೆಲ್ಲಬೇಕು ಎನ್ನುವ ಹಂಬಲ ಇರುವ ಕಾರಣ, ಈ ರೀತಿಯ ಕಚ್ಚಾಟ, ಗಲಾಟೆ ಎಲ್ಲವೂ ಸಹಜ ಎನ್ನಿ.

ಆದರೆ, ಇದೀಗ ಧ್ರುವಂತ್ ಜೊತೆಗಿನ ಕಿತ್ತಾಟದ ಬಗ್ಗೆ ರಕ್ಷಿತಾ ಶೆಟ್ಟಿ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಅದೇನೆಂದರೆ, ನಮ್ಮಿಬ್ಬರನ್ನೂ ಒಂದೇ ರಾಶಿ, ಒಂದೇ ನಕ್ಷತ್ರ. ಅದು ಮಿಥುನ ರಾಶಿ, ಆರಿದ್ರಾ ನಕ್ಷತ್ರ ಅದಕ್ಕಾಗಿ ಹಾಗೆ ಜಗಳ ಆಡ್ತಿದ್ವಿ. ಏನೂ ಮಾಡಲು ಆಗ್ತಿರಲಿಲ್ಲ ಎಂದಿದ್ದಾರೆ.

Source link
ರಾಶಿ, ನಕ್ಷತ್ರ ನೋಡದೆ Bigg Boss ಕೂಡಿ ಹಾಕಿದ್ರು, ಇನ್ನೇನ್ ಮಾಡೋಕಾಗತ್ತೆ? ಧ್ರುವಂತ್ ಜೊತೆ ಜಗಳದ ಬಗ್ಗೆ ರಕ್ಷಿತಾ