Karna Serial: ಮಗು ನನ್ನದೇ ಎಂದಾಯ್ತು ಕರ್ಣ- ಪ್ಲ್ಯಾನ್​ ಸಕ್ಸಸ್​ ಖುಷಿಯಲ್ಲಿ ರಮೇಶ್! ನಿಧಿ ಮಾಡಿದ್ದೇನು?

Karna Serial: ಮಗು ನನ್ನದೇ ಎಂದಾಯ್ತು ಕರ್ಣ- ಪ್ಲ್ಯಾನ್​ ಸಕ್ಸಸ್​ ಖುಷಿಯಲ್ಲಿ ರಮೇಶ್! ನಿಧಿ ಮಾಡಿದ್ದೇನು?

Karna Serial: ಮಗು ನನ್ನದೇ ಎಂದಾಯ್ತು ಕರ್ಣ- ಪ್ಲ್ಯಾನ್​ ಸಕ್ಸಸ್​ ಖುಷಿಯಲ್ಲಿ ರಮೇಶ್! ನಿಧಿ ಮಾಡಿದ್ದೇನು?
ರಮೇಶ್‌ನ ಕುತಂತ್ರದಿಂದ ತೇಜಸ್, ನಿತ್ಯಾಳೊಂದಿಗಿನ ಮದುವೆಯನ್ನು ಮುರಿದುಕೊಳ್ಳುತ್ತಾನೆ. ಕುಡಿದು ಬಂದ ತೇಜಸ್ ನಿತ್ಯಾ ಮತ್ತು ಮಗುವಿನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ, ಕರ್ಣನು ಆ ಮಗು ತನ್ನದೆಂದು ಹೇಳಿ ನಿತ್ಯಾಳ ಮಾನ ಕಾಪಾಡುತ್ತಾನೆ. ಈ ಪ್ಲ್ಯಾನ್ ಸಕ್ಸಸ್ ಆದ ಖುಷಿಯಲ್ಲಿ ರಮೇಶ್ ಬೀಗುತ್ತಾನೆ.
ಕರ್ಣ ಸೀರಿಯಲ್​ (Karna Serial)ನಲ್ಲಿ ಇದೀಗ ವಿಲನ್​ ರಮೇಶ್​ ಕುತಂತ್ರದಿಂದ ನಿತ್ಯಾಳ ಬಗ್ಗೆ ತೇಜಸ್ ತಪ್ಪು ತಿಳಿದುಕೊಂಡು ಮದುವೆ ಮುರಿದಿದ್ದಾನೆ. ಕರ್ಣ ಮತ್ತು ನಿತ್ಯಾಳಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ.

ಅದೇ ಇನ್ನೊಂದೆಡೆ, ನಿತ್ಯಾ ಮತ್ತು ತೇಜಸ್​ ಮದುವೆ ಮಾಡಿಸಿ, ತನ್ನ ಮತ್ತು ನಿಧಿ ಲವ್​ಸ್ಟೋರಿ ಹೇಳಲು ಫಂಕ್ಷನ್ ಅರೇಂಜ್​ ಮಾಡಿದ್ದ ಕರ್ಣ. ಆದರೆ, ಮದುವೆ ಮುರಿದು ಬಿದ್ದಿದ್ದರಿಂದ ನಿತ್ಯಾ ಇರೋ ವಿಷಯವನ್ನು ತಿಳಿಸಲು ತಾನು ಪ್ರೆಗ್ನೆಂಟ್​ ಎಂದು ಎಲ್ಲರ ಎದುರೇ ಹೇಳಿದಳು.

ಮುಂದೆ ಹೇಳುವಷ್ಟರಲ್ಲಿಯೇ, ಅಲ್ಲಿಗೆ ಕುಡಿದು ಬಂದ ತೇಜಸ್​ ಈ ಮಗು ಕರ್ಣನದ್ದು ಎಂದು ಮಗು, ನಿತ್ಯಾ ಮತ್ತು ಕರ್ಣನ ಬಗ್ಗೆ ಕುಡಿದ ಅಮಲಿನಲ್ಲಿ ಇಲ್ಲಸಲ್ಲದ್ದನ್ನು ಮಾತನಾಡಿದ.

ಮಗುವಿನ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದನ್ನು ಕೇಳಿದ ಕರ್ಣ, ಈ ಮಗು ನನ್ನದೇ, ಅದರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ರೆ ಸರಿ ಇರಲಿಲ್ಲ ಎಂದು ತೇಜಸ್​ನನ್ನು ಹೊರಕ್ಕೆ ಕಳುಹಿಸಿದ.

ದುಃಖದಲ್ಲಿರುವ ನಿತ್ಯಾಳಿಗೆ ಕರ್ಣ-ನಿಧಿ ಸಮಾಧಾನ ಮಾಡಿದ್ದಾರೆ. ನಿಮ್ಮ ಎಲ್ಲಾ ವಿಚಾರದಲ್ಲಿಯೂ ನಾನು ಜೊತೆಯಲ್ಲಿ ಇದ್ದೇನೆ, ನಿನ್ನೆ ಮಾಡಿದ್ದು ಸರಿ ಇದೆ ಎಂದು ಕರ್ಣನ ಸಾಥ್​ ನೀಡಿದ್ದಾಳೆ ನಿಧಿ.

ಅದೇ ಇನ್ನೊಂದೆಡೆ, ಪ್ಲ್ಯಾನ್​​ ಸಕ್ಸಸ್​ ಆದ ಖುಷಿಯಲ್ಲಿ ಕರ್ಣನನ್ನು ತಬ್ಬಿಕೊಂಡ ರಮೇಶ್​ ಅಪ್ಪ ಆಗ್ತಿರೋದಕ್ಕೆ ಕಂಗ್ರಾಟ್ಸ್​ ಹೇಳಿ ಹೊಟ್ಟೆ ಉರಿಸಿದ್ದಾನೆ. ಅಷ್ಟಕ್ಕೂ ರಮೇಶ್​ ಬಣ್ಣ ಇದಾಗಲೇ ಕರ್ಣನ ಮುಂದೆ ಬಯಲಾಗಿದೆ. ಮುಂದೇನಾಗುತ್ತೋ ನೋಡಬೇಕಿದೆ. ​

Source link

Leave a Reply

Your email address will not be published. Required fields are marked *