ಜನವರಿ 20: ಜಗತ್ತಿನ ಆರ್ಥಿಕತೆಯ ಹಿನ್ನಡೆ ಅನುಭವಿಸುತ್ತಿರುವ ಹೊತ್ತಿನಲ್ಲೂ ಭಾರತವು ತನ್ನ ಬೆಳವಣಿಗೆಯ ವೇಗವನ್ನು ಹೆಚ್ಚಿಸಿದೆ ಎಂದು ಕೇಂದ್ರ ನವೀಕರಣ ಸಚಿವ ಪ್ರಹ್ಲಾದ್ ಜೋಷಿ (ಪ್ರಹ್ಲಾದ್ ಜೋಶಿ) ಹೇಳಿದರು. ಸ್ವಿಟ್ಜರ್ಲ್ಯಾಂಡ್ನ ಡಾವೋಸ್ನಲ್ಲಿ ನಿನ್ನೆಯಿಂದ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ (WEF ಶೃಂಗಸಭೆ 2026, ದಾವೋಸ್) ಪ್ರಹ್ಲಾದ್ ಜೋಷಿ ಮಾತನಾಡುತ್ತಾ, ಭಾರತದ ಆರ್ಥಿಕ ವ್ಯವಸ್ಥೆಯು ಸುದೃಢವಾಗಿರುವುದನ್ನು ಎತ್ತಿತೋರಿಸಿದ್ದಾರೆ.
‘ಜಾಗತಿಕ ಸರಬರಾಜು ಸರಪಳಿಗಳಿಗೆ ಧಕ್ಕೆಯಾದಾಗ ಭಾರತವು ದೂರದೃಷ್ಟಿಯಿಂದ ತನ್ನ ಅಡಿಪಾಯವನ್ನು ಭದ್ರಪಡಿಸುವ ಮೂಲಕ ಮತ್ತು ತನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಆರ್ಥಿಕ ಜೋಕ್ಷಮತೆಯನ್ನು ನಿರ್ಮಿಸಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರೂ ಆದ ಟ್ವಿಟ್ ಮಾಡಿದ್ದಾರೆ.
ಪ್ರಹ್ಲಾದ ಜೋಷಿ ಅವರ ಎಕ್ಸ್ ಪೋಸ್ಟ್
ಜಗತ್ತು ನಿಧಾನಗೊಂಡಾಗ, ಭಾರತವು ವೇಗವಾಯಿತು!
ಜಾಗತಿಕ ಪೂರೈಕೆ ಸರಪಳಿಗಳು ಅಡ್ಡಿಪಡಿಸಿದಾಗ, ಭಾರತವು ತನ್ನ ಅಡಿಪಾಯವನ್ನು ಬಲಪಡಿಸುವ ಮತ್ತು ದೀರ್ಘಾವಧಿಯ ದೃಷ್ಟಿಯೊಂದಿಗೆ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸುವ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಿತು.
ಇಂದು, ಜಾಗತಿಕವಾಗಿ ಭಾರತವು ವಿಶ್ವಾಸಾರ್ಹ ಮತ್ತು ಭವಿಷ್ಯದ-ಸಿದ್ಧ ತಾಣವಾಗಿ ನಿಂತಿದೆ… pic.twitter.com/orcUwk7X1o
– ಪ್ರಲ್ಹಾದ್ ಜೋಶಿ (@JoshiPralhad) ಜನವರಿ 20, 2026
‘ಸರ್ಕಾರದ ಸ್ಥಿರ ನೀತಿ, ಸುಧಾರಣೆಗಳು, ಉತ್ತಮ ಇಕೋಸಿಸ್ಟಂ ನಿರ್ಮಾಣಗೊಂಡಿರುವ ಫಲವಾಗಿ ಭಾರತವು ಜಾಗತಿಕ ಹೂಡಿಕೆಗೆ ವಿಶ್ವಾಸಾರ್ಹ ಸ್ಥಳವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಜಾಗತಿಕ ನಾಯಕನಾಗಿ ಕಾರ್ಯನಿರ್ವಹಿಸುತ್ತಿದೆ. ಹೂಡಿಕೆದಾರರಿಗೆ ಸ್ಥಿರ ಲಾಭ ತರುತ್ತಿದೆ, ದೂರಗಾಮಿ ಬೆಳವಣಿಗೆಗೆ ಸಹಕಾರಿಯಾಗುವ ನಾವೀನತ್ಯೆ, ವಿಸ್ತರಣೆ ಹಾಗೂ ಸುಸ್ಥಿರ ಮೌಲ್ಯ ಸೃಷ್ಟಿಯಾಗುತ್ತಿದೆ’ ಎಂದು ಪ್ರಲ್ಹಾದ್ ಜೋಷಿ ವಿವರಿಸಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಶೇ. 7.3; ಐಎಂಎಫ್ ಮತ್ತು ಮೂಡೀಸ್ ಏಜೆನ್ಸಿ ಅಂದಾಜು
ಜನಸಂಖ್ಯೆ ಶೇ. 17; ಮಾಲಿನ್ಯ ಹೊರಸೂಸುವಿಕೆ ಶೇ. 4 ಮಾತ್ರ
ಡಾವೋಸ್ ಸಮಿಟ್ನಲ್ಲಿ ಮಾತನಾಡುತ್ತಿದ್ದಾಗ ಇಂಧನ ಸಚಿವ ಪ್ರಲ್ಹಾದ್ ಜೋಷಿ ಅವರು ಭಾರತ ಅಭಿವೃದ್ಧಿ ಆರ್ಥಿಕತೆಯನ್ನು ಪರಿಸರ ಮಾಲಿನ್ಯಕ್ಕಾಗಿ ಪಡುತ್ತಿರುವ ಶ್ರಮ ಹಾಗೂ ಆ ಯೋಜನೆ ಮಾಡಿದ ಸಾಧನೆಯನ್ನು ಪ್ರಾರಂಭಿಸಿದರು.
ವಿಶ್ವದ ಶೇ. 17ರಷ್ಟು ಜನಸಂಖ್ಯೆಯನ್ನು ಭಾರತ ಹೊಂದಿದೆ. ಆದರೆ, ಜಾಗತಿಕವಾಗಿ ಹೊರಸೂಸುವ ಮಾಲಿನ್ಯದಲ್ಲಿ ಭಾರತದ ಪಾಲು ಶೇ. 4 ಮಾತ್ರ ಎಂದು ಜೋಷಿ ಹೇಳಿದ್ದಾರೆ.
ಇದನ್ನೂ ಓದಿ: ಡಾವೊಸ್ ಶೃಂಗಸಭೆ 2026: ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ
ಭಾರತದಲ್ಲಿ ಹೂಡಿಕೆಯಲ್ಲಿ ಹೂಡಿಕೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಸಮಿಟ್ನಲ್ಲಿ ಜೋಷಿ ಪ್ರಸ್ತಾಪಿಸಿದ್ದಾರೆ. ಸಚಿವರು ಈ ಸಂದರ್ಭದಲ್ಲಿ ಕೆನಡಾ ಮೂಲದ ಲಾ ಕೇಸ್ಸೆ (La Caisse) ಎಂಬ ಕಂಪನಿಯ ಸಿಐಒ ಮತ್ತು ಸಿಒಒ ಅವರೊಂದಿಗೆ ಹೂಡಿಕೆ ವಿಚಾರವಾಗಿ ಚರ್ಚೆ ಕೂಡ ಇದೆ. 2030ರೊಳಗೆ ಹವಾಮಾನ ಬದಲಾವಣೆಯನ್ನು ಎದುರಿಸಬಲ್ಲ ಕಾರ್ಯಕ್ರಮಗಳಲ್ಲಿ 400 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಈ ಕಂಪನಿ ಬದ್ಧವಾಗಿದೆ. ಈ ಕಾರ್ಯದಲ್ಲಿ ಭಾರತದೊಂದಿಗೆ ಜೊತೆಯಾಗಬೇಕೆಂದು ಜೋಷಿ ಈ ಸಂದರ್ಭದಲ್ಲಿ ಶಿಫಾರಸು ಮಾಡಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ