ಗಿಲ್ಲಿನ ಗಗನಾ ಅವಾಯ್ಡ್ ಮಾಡಿದ್ದು ಯಾಕೆ? ಕಾವ್ಯಾ ಹೇಳೋದು ಕೇಳಿ..

ಗಿಲ್ಲಿನ ಗಗನಾ ಅವಾಯ್ಡ್ ಮಾಡಿದ್ದು ಯಾಕೆ? ಕಾವ್ಯಾ ಹೇಳೋದು ಕೇಳಿ..


‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಆಗಿದ್ದಾರೆ ಗಿಲ್ಲಿ ನಟ (ಗಿಲ್ಲಿ ನಟ) ಅವರ ಬಗ್ಗೆ ಎಲ್ಲ ಕಡೆ ಚರ್ಚೆ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯ ಶೈವ (ಕಾವ್ಯ ಶೈವ) ಅವರು ಕ್ಲೋಸ್ ಆಗಿದ್ದರು. ಅದರಿಂದ ಕಾವ್ಯಾ ಅವರಿಗೆ ಹಲವು ಬಾರಿ ಕಿರಿಕಿರಿ ಆಗಿದ್ದು ಕೂಡ ಉಂಟು. ಯಾವಾಗಲೂ ಗಿಲ್ಲಿ ತಮಾಷೆ ಮಾಡುತ್ತಾರೆ. ಆದರೆ ಅದು ಕೆಲವೊಮ್ಮೆ ಅತಿಯಾಗುತ್ತದೆ. ಕಾವ್ಯಾ ಟ್ರೋಲ್ ಆಗುವ ಸನ್ನಿವೇಶ ಕೂಡ ಎದುರಾಗುತ್ತದೆ. ಈ ಮೊದಲು ಗಿಲ್ಲಿ ಜೊತೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಗಗನಾ (ಗಗನ ಭಾರಿ) ಅವರನ್ನೂ ಜನರು ಟ್ರೋಲ್ ಮಾಡಿದರು. ಆ ಈಗ ಕಾವ್ಯಾ ಶೈವ ಅವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಇದರ ಬಗ್ಗೆ ನಾನು ಮತ್ತು ಗಿಲ್ಲಿ ಬಿಗ್ ಬಾಸ್ ಮನೆಯೊಳಗೆ ಮಾತನಾಡಿದ್ದೆವು. ಅದು ಪ್ರಸಾರವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಾಯಶಃ ಗಗನಾ ಈಗ ಗಿಲ್ಲಿಯನ್ನು ಯಾಕೆ ಅವಾಯ್ಡ್ ಮಾಡಬಹುದಾ? ಒಂದು ಸ್ನೇಹ ಜನರಿಗೆ ಇಷ್ಟವಾಗುತ್ತದೆ. ಅದು ಬೇರೆ ರೀತಿ ಬಿಂಬಿತ ಆಗುತ್ತಿದೆ ಎಂದಾಗ ಹುಡುಗಿಯಾಗಿ ಗಗನಾ ತನ್ನ ನಿರ್ಧಾರ ತೆಗೆದುಕೊಂಡಿದ್ದಾಳೆ ಅಂತ ಹೇಳಲು ನಾನು ಇಷ್ಟಪಡುತ್ತೇನೆ’ ಕಾವ್ಯಾ ಶೈವ.

‘ಹಾಗಂತ, ನನಗೆ ನೀವು ಪದೇ ಪದೇ ಏನೋ ಹೇಳಿದರೆ ನಾನು ಅವಾಯ್ಡ್ ಮಾಡುತ್ತೇನೆ ಅಂತೇನಿಲ್ಲ. ನಾನು ಗಿಲ್ಲಿ ನಂಬರ್ ಬ್ಲಾಕ್ ಮಾಡುತ್ತೇನೆ ಅಂತ ಹೇಳಿದ್ದು ಕೂಡ ಜನರು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಸ್ನೇಹದಲ್ಲಿ ನಾವು ಜಗಳ ಆಡುತ್ತೀದ್ವಿ, ಇಷ್ಟಪಡುತ್ತೀದ್ವಿ. ರೇಗಿಸಿದರೆ ಬ್ಲಾಕ್ ಮಾಡುತ್ತೇನೆ ಎಂದು ನಾನು ಯಾವ ಉದ್ದೇಶದಿಂದ ಹೇಳಿದ್ದೇನೆ ಅಂತ ನಿಮಗೆ ಗೊತ್ತಿದೆ. ಅದನ್ನು ನೀವು ಸೀರಿಯಸ್ ಆಗಿ ತೆಗೆದುಕೊಂಡರೆ, ಅದಕ್ಕೆ ನಾನು ಏನು ಹೇಳಬೇಕು ಎಂಬುದು ಗೊತ್ತಿಲ್ಲ’ ಎಂಬ ಕಾವ್ಯಾ.

‘ನಮ್ಮ ಸ್ನೇಹ ಬಿಗ್ ಬಾಸ್ ಮನೆ ಒಳಗೆ ಹೇಗೆ ಇತ್ತೋ ಹೊರಗೆ ಕೂಡ ಹಾಗೆಯೇ ಮುಂದುವರಿಯುತ್ತದೆ. ಆ ಸ್ನೇಹ ಮುರಿಯಲು ನನಗೆ ಸೂಕ್ತ ಕಾರಣಗಳು ಇಲ್ಲ. ನಾನು ಏನು ಮಾಡಿದರೂ ತಪ್ಪಾಗಿ ಕಾಣಿಸುತ್ತಿದೆ. ನಾನು ಗರಗಸದ ರೀತಿ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಆದರೂ ಪರವಾಗಿಲ್ಲ. ನೆಗೆಟಿವ್ ಆಗುತ್ತದೆ ಎಂಬ ಕಾರಣಕ್ಕೆ ನಾನು ಏನನ್ನೂ ಬದಲಾಯಿಸಿಕೊಳ್ಳುವುದಿಲ್ಲ’ ಎಂದು ಕಾವ್ಯಾ ಶೈವ ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು

ಗಿಲ್ಲಿ ನಟ, ಕಾವ್ಯಾ ಶೈವ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮತ್ತು ಮ್ಯೂಟೆಂಟ್ ರಘು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ತಲುಪಿದ್ದರು. ಕಾವ್ಯಾ ಮತ್ತು ಗಿಲ್ಲಿ ಅವರು ಫಿನಾಲೆ ತನಕ ಯಾವುದೇ ಕಿರಿಕ್ ಇಲ್ಲದೇ ಸ್ನೇಹ ಮುಂದುವರಿಸಿದ್ದನ್ನು ಕಂಡು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ. ನಿಜ ಜೀವನದಲ್ಲಿಯೂ ಕಾವ್ಯ-ಗಿಲ್ಲಿ ಜೋಡಿ ಆಗಲಿ ಎಂಬ ಆಸೆ ಅನೇಕ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *