Headlines

BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಹಣ ಪೀಕುತ್ತಿದ್ದ ನಾಲ್ವರು ಕಂಡಕ್ಟರ್ ಸಸ್ಪೆಂಡ್

BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಹಣ ಪೀಕುತ್ತಿದ್ದ ನಾಲ್ವರು ಕಂಡಕ್ಟರ್ ಸಸ್ಪೆಂಡ್


ಬೆಂಗಳೂರು, (ಜನವರಿ 20): ಚಿಲ್ಲರೆ ಸಮಸ್ಯೆ ದೂರವಿರಲು ಅನುಕೂಲವಾಗಲಿ ಬಿಎಂಟಿಸಿ ಕೂಡ ಬಸ್ಸುಗಳಲ್ಲಿ (BMTC ಬಸ್) ಕ್ಯೂರ್ ಕೋಡ್ ಅಳವಡಿಸಲಾಗಿದೆ. ಆದರೆ, ಇದು ಪ್ರಯಾಣಿಕರಿಗೆ ಉಪಯೋಗವಾದ್ರೆ, ಕಂಡಕ್ಟರ್‌ಗಳು ಮಾತ್ರ ದುರುಪಯೋಗಕ್ಕಾಗಿ ಬಳಸುತ್ತಿದ್ದಾರೆ. ಹೌದು.. ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ನಿಗಮ ಯುಪಿಐ ಸ್ಕ್ಯಾನರ್‌ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್‌ಗಳು ಬಿಎಂಟಿಸಿ ಬಸ್‌ನಲ್ಲಿರುವ ಯುಪಿಐ ಸ್ಕ್ಯಾನರ್‌ಗಳನ್ನು ಕಿತ್ತು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ಗಳನ್ನು ಹಾಕಿ ತಮ್ಮ ಬ್ಯಾಂಕ್ ಅಕೌಂಟ್‌ಗೆ ಲಕ್ಷಾಂತರ ರೂಪಾಯಿ ಹಣ ಹಾಕುತ್ತಿದ್ದಾರೆ. ಈ ಬಗ್ಗೆ ಟಿವಿ9 ವರದಿ ಬಿತ್ತರಿಸಿದ ಬೆನ್ನಲ್ಲೇ ಬಿಎಂಟಿಸಿ ಸಂಸ್ಥೆ ನಡೆಸಿದ ತನಿಖೆಯಲ್ಲಿ ಕಂಡಕ್ಟರ್ ಗಳ ಕಳ್ಳಾಟ ಬಯಲಿಗೆ ಬಂದಿದ್ದು, ಈ ಸಂಬಂಧ ನಾಲ್ವರು ಕಂಡಕ್ಟರ್ ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಮಂಚೇಗೌಡ, ಸುಪ್ರೀತ, ಅಶ್ವಕ್ ಖಾನ್, ಸುರೇಶ್ ಅಮಾನತುಗೊಂಡ ನಿರ್ವಾಹಕರು.

ಮಂಚ, ಸುಪ್ರೀತ, ಅಶ್ವಕ್ ಖಾನ್, ಎನ್ನುವವರು ಕನ್ನಡ ಬಾರದವರಿಗೆ ಶಕ್ತಿ ಯೋಜನೆ ಉಚಿತ ಟಿಕೆಟ್ ನೀಡಿ ತಮ್ಮ ಮೊಬೈಲ್ ಯುಪಿೇಗೌಡ ಸ್ಕ್ಯಾನರ್ ನೀಡಿ ಹಣ ಪೀಕಿದ್ದಾರೆ. ಶಕ್ತಿ ಯೋಜನೆಯ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಟಿಕೆಟ್ ಎಂದು ಪ್ರಿಂಟ್ ಮಾಡಲಾಗಿದೆ. ಇಂಗ್ಲಿಷ್ ನಲ್ಲಿ ಉಚಿತ ಟಿಕೆಟ್ ಎಂದು ಪ್ರಿಂಟ್ ಮಾಡಿಲ್ಲ, ಇದನ್ನು ಕನ್ನಡ ಬಾರದ ನಾರ್ಥ್ ಇಂಡಿಯನ್ಸ್, ಸೌತ್ ಇಂಡಿಯನ್ಸ್ ಗೆ ಶಕ್ತಿ ಯೋಜನೆ ಉಚಿತ ಟಿಕೆಟ್ ನೀಡಿ ಹಣ ತಮ್ಮ ವೈಯಕ್ತಿಕ ಖಾತೆಗೆ ಹಾಕಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಅಕೌಂಟ್ ಪರಿಶೀಲನೆ ವೇಳೆ ನಾಲ್ವರು ಕಂಡಕ್ಟರ್‌ಗಳು ಸೇರಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಹಣ ಪ್ರಯಾಣಿಕರಿಂದ ಹಾಕಿರುವುದು ತನಿಖೆಯಿಂದ ಬಯಲಿಗೆ ಬಂದಿದೆ.

ಇದನ್ನೂ ಓದಿ: BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಂಡಕ್ಟರ್‌ಗಳು: ತನಿಖೆ ವೇಳೆ ಕಳ್ಳಾಟ ಬಯಲು

ಯಾರ ಖಾತೆಗೆ ಎಷ್ಟೆಷ್ಟು ಹಣ

ಡಿಪೋ 3ರ ಕಂಡಕ್ಟರ್ ಮಂಚೇಗೌಡ ಖಾತೆಗೆ 51 ಸಾವಿರ ಜಮಾ ಆದರೆ, ಡಿಪೋ 11ರ ಕಂಡಕ್ಟರ್ ಸುಪ್ರೀತ ಖಾತೆಗೆ 30 ಸಾವಿರ ರೂ, ಡಿಪೋ 14ರ ಕಂಡಕ್ಟರ್ ಅಶ್ವಕ್ ಖಾನ್ ಖಾತೆಗೆ 3 ಸಾವಿರ ಹಾಗೂ ಡಿಪೋ 51ರ ಕಂಡಕ್ಟರ್ ಸುರೇಶ್ ಖಾತೆಗೆ 45 ಸಾವಿರ ರೂ ಜಮೆ ಆಗಿದೆ.

ಖಾತೆಗೆ ಹೇಗೆ ಹಣ ಹಾಕಿಸಿಕೊಳ್ಳುತ್ತಿದ್ರು?

ಈ ಕಿಲಾಡಿ ಕಂಡಕ್ಟರ್‌ಗಳು ಡಿಪೋದಿಂದ ಬಸ್‌ಗಳು ಹೊರಗೆ ಬರ್ತಿದ್ದಂತೆ, ಬಸ್‌ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕೇಟ್‌ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರಂತೆ. ಈ ಬಗ್ಗೆ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯುರಿಟಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್ ಗಳು ಸಿಕ್ಕಿಬಿದ್ದಿದ್ದರು. ಈ ಟಿವಿ9 ಈ ಬಗ್ಗೆ ಸುದ್ದಿ ಪ್ರಸಾರ ಮಾಡಲು ಬಿಎಂಟಿಸಿ ಎಂಡಿ, ಜನ ಕಂಡಕ್ಟರ್‌ಗಳನ್ನು ನಾಲ್ಕು ಆದೇಶಗಳನ್ನು ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *