‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ವಿನ್ನರ್ ಆಗಿ ಹೊರ ಹೊಮ್ಮಿರೋ ಗಿಲ್ಲಿ ನಟ ಅವರು ಇತ್ತೀಚೆಗೆ ತಮ್ಮ ಹುಟ್ಟೂರಲ್ಲಿ ದೊಡ್ಡದಾದ ರ್ಯಾಲಿ ಮಾಡಿದರು. ಆ ಬಳಿಕ ಅವರು ಮರಳಿ ಬೆಂಗಳೂರಿಗೆ ಬಂದಿದ್ದರು. ಈಗ ಅವರು ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಇಬ್ಬರೂ ಗಿಲ್ಲಿ ಬದುಕಿಗೆ ದಾರಿ ದೀಪ ಆದವರು. ಹೀಗಾಗಿ, ಅವರನ್ನು ಗಿಲ್ಲಿ ಭೇಟಿ ಮಾಡಲಾಗಿದೆ.
ಗಿಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಮೊದಲೇ ಪರಿಚಯ. ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯ ಮೇಲೆ ಶಿವರಾಜ್ ಕುಮಾರ್ ಜಡ್ಜ್ ಸ್ಥಾನದಲ್ಲಿ ಒಬ್ಬರು. ಸ್ಪರ್ಧಿಯಾಗಿ ತೆರಳಿದ್ದ ಗಿಲ್ಲಿ ಅವರು ಎಲ್ಲರನ್ನೂ ರಂಜಿಸಿದ್ದರು. ಆಗಲೇ ಶಿವರಾಜ್ ಕುಮಾರ್ ಗೆ ಗಿಲ್ಲಿ ಇಷ್ಟ ಆಗಿದ್ದರು. ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಶಿವಣ್ಣ ಶುಭ ಹಾರೈಸಿದ್ದರು. ಗಿಲ್ಲಿನೇ ಗೆಲ್ಲೋದು ಎಂದು ಹೇಳಿದ್ದರು. ಹೊರ ಬಂದ ಬಳಿಕ ಗಿಲ್ಲಿಗೆ ಈ ವಿಷಯ ಗೊತ್ತಾಗಿದೆ. ಹೀಗಾಗಿ, ತಕ್ಷಣವೇ ಶಿವಣ್ಣ ಹಾಗೂ ಗೀತಕ್ಕನ ಭೇಟಿ ಮಾಡಲಾಗಿದೆ.
ಸುದೀಪ್ ಅವರನ್ನೂ ಗಿಲ್ಲಿ ಭೇಟಿ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲ ವಿಷಯಗಳನ್ನು ಸುದೀಪ್ ಮನಬಿಚ್ಚಿ ಮಾತನಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಗಿಲ್ಲಿ ಹೋಗಿ ಸುದೀಪ್ ಭೇಟಿ ಮಾಡಿದ್ದಾರೆ. ಗಿಲ್ಲಿ ಅಭಿಮಾನಿಗಳು ಸುದೀಪ್ ಅವರ ಬಗ್ಗೆ ಈ ಮೊದಲು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಸೀಸನ್ ಚಪ್ಪಾಳೆ. ಈ ವಿಷಯದಲ್ಲಿ ಅವರು ಅಭಿಮಾನಿಗಳ ಪರವಾಗಿ ಸುದೀಪ್ ಬಳಿ ಕ್ಷಮೆ ಕೇಳಬಹುದಿತ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಮಗೆ ಬಂದರೂ ಮನೆಗೆ ಹೋಗದೇ ವಾಪಸ್ ಬೆಂಗಳೂರಿಗೆ ತೆರಳಿದ ಗಿಲ್ಲಿ ನಟ
ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಮನಸ್ಫೂರ್ತಿಯಾಗಿ ಹಾರೈಸಿದ್ದಾರೆ. ಈ ಹಾರಿಕೆಯಿಂದ ಅವರು ತುಂಬಾ ಖುಷಿಪಟ್ಟಿದ್ದಾರೆ. ಇನ್ನಷ್ಟು ಸಿನಿಮಾ ಆಫರ್‌ಗಳು ಅವರನ್ನು ಹುಡುಕಿಕೊಂಡು ಬರೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.