ಜಿಐ ಟ್ಯಾಗ್ ಹೊಂದಿರುವ ಸೀರೆ ಖರೀದಿಗೆ ಸೂರ್ಯೋದಯಕ್ಕೂ ಮುನ್ನ ಮಹಿಳೆಯರ ಸರತಿ ಸಾಲು!
ಬೆಂಗಳೂರು, ಜನವರಿ 21: ಸೀರೆ ಎಂದರೆ ಸಾಕು ಮಹಿಳೆಯರು ಮುಗಿಬೀಳುತ್ತಾರೆ. ಅದೇ ರೀತಿ ಅಪಾರ ಬೇಡಿಕೆಯುಳ್ಳ ಶುದ್ಧ ಮೈಸೂರು ರೇಷ್ಮೆ ಸೀರೆಗಳನ್ನು (ಮೈಸೂರು ಸಿಲ್ಕ್ ಸೀರೆ) ಖರೀದಿಸಲು ನಗರದ ರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (KSIC) ಶೋರೂಮ್‌ಗಳ ಮುಂದೆ ಮಹಿಳೆಯರು ನಿಲ್ಲುತ್ತಿದ್ದಾರೆ. ಶೋ ರೂಮ್ ತೆರೆಯುವ ಸಮಯ 10 ಗಂಟೆಯಾದರೂ ಬೆಳಗಿನ 4 ಗಂಟೆಯಿಂದಲೇ ಹಾಜರಾಗುತ್ತಿರುವ ಮಹಿಳೆಯರು, ಟೋಕನ್ ತೆಗದುಕೊಂಡು ಕಾದು ಕೂರುತ್ತಿದ್ದಾರೆ.
ಬೆಳಗಿನ ಜಾವವೇ ಹೋಗಿ ನಿಂತರೂ ಒಬ್ಬರಿಗೆ ಒಂದೇ ಸೀರೆ?
23,000 ರೂ. 2.5 ಲಕ್ಷ ರೂ.ನವರೆಗೆ ಬೆಲೆ ಹೊಂದಿರುವ ಮೈಸೂರು ರೇಷ್ಮೆ ಸೀರೆಗಳು ದುಬಾರಿಯಾದರೂ ಅವುಗಳ ಗುಣಮಟ್ಟ, ಶುದ್ಧತೆ ಮತ್ತು ಪಾರಂಪರಿಕ ಮೌಲ್ಯಕ್ಕಾಗಿ ಹೆಚ್ಚು ಬೇಡಿಕೆಯಿದೆ. ಜಿಐ ಟ್ಯಾಗ್ (ಭೌಗೋಳಿಕ ಸೂಚಕ ಟ್ಯಾಗ್) ಪಡೆದಿರುವ ಮೈಸೂರು ರೇಷ್ಮೆಯನ್ನು ಏಕೈಕ ಅಧಿಕೃತ ಸಂಸ್ಥೆಯಾದ KSIC ನಲ್ಲಿ 202 ರಲ್ಲಿ ಸರಬರಾಜು ಮಾಡಲಾಗಿಲ್ಲ, 2026 ರಲ್ಲಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತವೆ.
ಸಂಸ್ಥೆಯಲ್ಲಿನ ನಿಪುಣ ನೇಕಾರರು ಮತ್ತು ಕೈಗಾರರ ಸಂಖ್ಯೆ ಕಡಿಮೆ ಇರುವುದರ ಜೊತೆಗೆ ಒಬ್ಬ ನೇಕಾರನಿಗೆ ಕನಿಷ್ಠ ಮೂಲಭೂತ ತರಬೇತಿ 6-7 ತಿಂಗಳು ವ್ಯಯಿಸಬೇಕಾಗುತ್ತಿದೆ. ಇದರಿಂದ ಉತ್ಪಾದನೆಯನ್ನು ತ್ವರಿತವಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಮದುವೆ , ವರಲಕ್ಷ್ಮೀ ಪೂಜೆ , ಗೌರಿ ಗಣೇಶ ಹಬ್ಬ ಮತ್ತು ದೀಪಾವಳಿ ಹಬ್ಬದ ಸೀರೆಗಳ ಬೇಡಿಕೆಯು ಹೆಚ್ಚಾಗಬಹುದು ಶೋರೂಮ್‌ಗಳಲ್ಲಿ ಸೀರೆಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗುತ್ತಿವೆ. ಹೀಗಾಗಿ ಬೆಳಗಿನ ಜಾವವೇ ಶೋ ರೂಮ್ ಮುಂದೆ ಹೋಗಿ ನಿಂತರೂ ಒಬ್ಬ ಗ್ರಾಹಕನಿಗೆ ಒಂದೇ ಸೀರೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ ಮೈಸೂರು ರೇಷ್ಮೆ ಸೀರೆಯ ಇತಿಹಾಸವೇನು? ಮೈಸೂರಿಗೆ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಪರಿಚಯಿಸಿದ್ದು ಯಾರು?
ಈ ಬಗ್ಗೆ ಬೆಂಗಳೂರಿಗರು ತಮ್ಮ ಎಕ್ಸ್ ಖಾತೆಯಲ್ಲಿ ಶೋ ರೂಮ್ ಮುಂದೆ ಮಹಿಳೆಯರ ಸರದಿ ಸಾಲಿನ ದೃಶ್ಯವನ್ನು ಹಂಚಿಕೊಂಡಿದ್ದು, ವೀಡಿಯೋ ಇಲ್ಲಿದೆ.
ಪರಂಪರೆಯ ಸಂಕೇತವಾಗಿರುವ ಮೈಸೂರು ಸಿಲ್ಕ್ ಸ್ಯಾರಿ
KSIC ಸೀರೆಗಳಿಗೆ ವಿಶಿಷ್ಟ ಕೋಡ್ ಮತ್ತು ಹೋಲೋಗ್ರಾಮ್ ಅಳವಡಿಸಲಾಗಿದೆ, ಶೇ100 ಚಿನ್ನದ ಜರಿ ಮಾನ್ಯವಾಗಿದೆ. ಖಾಸಗಿ ಕೃತಕ ವಲಯದಲ್ಲಿ ನಕಲಿ ಹಾಗೂ ರೇಷ್ಮೆ ಮಾರಾಟದ ಆರೋಪಗಳು ಹೆಚ್ಚಾಗುತ್ತಿವೆ, KSIC ಉತ್ಪನ್ನಗಳ ಶುದ್ಧತೆ ಗ್ರಾಹಕರ ಭರವಸೆಯನ್ನು ಇನ್ನೂ ಉಳಿಸಿಕೊಂಡಿದೆ. ಮೈಸೂರು ರೇಷ್ಮೆ ಸೀರೆ ಪ್ರಸ್ತುತ ಮಹಿಳೆಯರ ಮನದಲ್ಲಿ ಪರಂಪರೆಯ ಸಂಕೇತವಾಗಿ ಉಳಿದಿದೆ. ಹೀಗಾಗಿ ಬೆಲೆಯೇ ಇದ್ದರೂ ಸೀರೆಯನ್ನು ಖರೀದಿಸಲು ಮಹಿಳೆಯರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.