Headlines

ಶಿವಣ್ಣನ ಭೇಟಿಯಾಗಿ ಆಶೀರ್ವಾದ ಪಡೆದ ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ

ಶಿವಣ್ಣನ ಭೇಟಿಯಾಗಿ ಆಶೀರ್ವಾದ ಪಡೆದ ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ

ಶಿವಣ್ಣನ ಭೇಟಿಯಾಗಿ ಆಶೀರ್ವಾದ ಪಡೆದ ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ

Gilli Nata: ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ, ತಮ್ಮ ಊರಿನಲ್ಲಿ ನಡೆಸಿದ ವಿಜಯ ಯಾತ್ರೆಯ ಬಳಿಕ, ನೇರ ಬೆಂಗಳೂರಿಗೆ ಬಂದು, ತಮಗೆ ಹರಸಿ ಹಾರೈಸಿದ್ದ ನೆಚ್ಚಿನ ನಟ ಶಿವರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಬಂದಿದ್ದಾರೆ.

ಕಳೆದ ಮೂರು ತಿಂಗಳಿಂದ ಭರ್ಜರಿ ಮನರಂಜನೆ ನೀಡಿದ್ದ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ವೀಕ್ಷಕರು ಬಯಸಿದಂತೆ ತಮ್ಮ ಕಾಮಿಡಿಯಿಂದಲೇ ಮನರಂಜಿಸಿದ ಗಿಲ್ಲಿ ನಟ ವಿನ್ನರ್ ಪಟ್ಟ ಗೆದ್ದುಕೊಂಡಿದ್ದಾರೆ. ಇದೀಗ ಶಿವಣ್ಣರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಬಂದಿದ್ದಾರೆ.

ಗಿಲ್ಲಿ ನಟ ಬರೋಬ್ಬರಿ 40 ಕೋಟಿಗೂ ಅಧಿಕ ವೋಟ್ ಗಳ ಮೂಲಕ ಬಿಗ್ ಬಾಸ್ ಕನ್ನಡದ ಈ ಬಾರಿಯ ವಿನ್ನರ್ ಆಗಿ ಗೆದ್ದು ಬೀಗಿದ್ದರು. ಬಳಿಕ ಹುಟ್ಟೂರಿನಲ್ಲಿ ಅಭೂತಪೂರ್ವವಾದ ವಿಜಯಯಾತ್ರೆ ಕೂಡ ನಡೆದಿತ್ತು. ಗಿಲ್ಲಿ ನಟನ ಮನರಂಜನೆಯ ಮತ್ತೊಬ್ಬ ಅಭಿಮಾನಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಕೂಡ ಈ ಹಿಂದೆ ಮಾತನಾಡಿ, ಈ ಬಾರಿ ಬಿಗ್ ಬಾಸ್ ಗೆಲ್ಲೋದು ಗಿಲ್ಲೀನೇ ಎಂದು ಹೇಳಿದ್ದರು.

ಇದೀಗ ಊರಿನಿಂದ ಮರಳಿರುವ ಗಿಲ್ಲಿ ನಟ ಬೆಂಗಳೂರಿಗೆ ತೆರಳಿ ನಾಗಾವರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಮನೆಗೆ ತೆರಳಿ ಶಿವಣ್ಣ ಹಾಗೂ ಗೀತಕ್ಕಾ ಜೊತೆ ಕುಳಿತು ಮಾತನಾಡಿ, ಅವರ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶಿವಣ್ಣ ಜೊತೆಗೆ ಮಾತುಕತೆ ನಡೆಸಿ, ಕೇಕ್ ಕತ್ತರಿಸಿ, ಶಿವಣ್ಣನಿಗೆ ತಿನ್ನಿಸಿದ ಗಿಲ್ಲಿ, ಅಲಿ ಸ್ವಲ್ಪ ಸಮಯ ಇದ್ದು, ಶಿವಣ್ಣ- ಗೀತಕ್ಕಾ ಆಶೀರ್ವಾದ ಪಡೆದು ಅಲ್ಲಿಂದ ಹೊರಟಿದ್ದಾರೆ.

ಶಿವರಾಜ್​​ಕುಮಾರ್ ಅವರದ್ದು ಹಾಗೂ ಗಿಲ್ಲಿಯದ್ದು ರಿಯಾಲಿಟಿ ಶೋನಿಂದಲೇ ಪರಿಚಯ. ಮೊದಲೇ ಪರಿಚಯ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಹಿಂದಿನ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋದಲ್ಲಿ ಶಿವರಾಜ್​​ಕುಮಾರ್ ಜಡ್ಜ್ ಆಗಿದ್ದರು. ಸ್ಪರ್ಧಿಯಾಗಿದ್ದ ಗಿಲ್ಲಿ , ತಮ್ಮ ಪ್ರಾಪರ್ಟಿ ಕಾಮಿಡಿ ಮೂಲಕ ಎಲ್ಲರನ್ನೂ ನಗಿಸಿದ್ದರು. ಆ ಕಾರ್ಯಕ್ರಮದಿಂದಾಗಿ ಶಿವಣ್ಣನಿಗೂ ಸಹ ಗಿಲ್ಲಿ ಎಂದರೆ ಅಭಿಮಾನ. ಹಾಗಾಗಿಯೇ ಗಿಲ್ಲಿಗೆ ಈ ಹಿಂದೆಯೇ ಶುಭ ಹಾರೈಸಿದ್ದರು.

ಇನ್ನು ಗಿಲ್ಲಿ ನಟ ಶಿವರಾಜಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಬಿಗ್ ಬಾಸ್ ಗೆ ತೆರಳುವ ಮುನ್ನವೇ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದ್ದು, ಮಲ್ಟಿ ಸ್ಟಾರ್ ಗಳು ನಟಿಸುತ್ತಿರುವ ಸಿನಿಮಾ ಇದಾಗಿದೆ. ಇನ್ನು ಬಿಗ್ ಬಾಸ್ ವಿಜೇತರಾದ ಬಳಿಕ ಗಿಲ್ಲಿಗೆ ಮತ್ತಷ್ಟು ಅವಕಾಶಗಳು ಹುಡುಕಿ ಬರುವ ಸಾಧ್ಯತೆ ಕೂಡ ಇದೆ. ಗಿಲ್ಲಿ-ಶಿವಣ್ಣ ಭೇಟಿ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *