Gold Rate Today Bangalore: ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬೆಳ್ಳಿಯೂ ಬೆಂಕಿ

Gold Rate Today Bangalore: ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬೆಳ್ಳಿಯೂ ಬೆಂಕಿ


ಬೆಂಗಳೂರು, ಜನವರಿ 21: ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿದೆ. ಒಂದೇ ದಿನ ಚಿನ್ನದ ಬೆಲೆ (ಚಿನ್ನದ ದರ) ಬರೋಬ್ಬರಿ 690 ರೂ ಹೆಚ್ಚಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 7,000 ರೂಗಳ ಬೆಲೆ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 14,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆಯೂ 15,000 ರೂ ಗಡಿ ದಾಟಿದೆ. ಕಳೆದ ಮೂರು ದಿನದಲ್ಲಿ ಗ್ರಾಮಕ್ಕೆ 1,000 ರೂನಷ್ಟು ಬೆಲೆ ಏರಿಕೆಯಾಗಿದೆ. ಭಾರತದಲ್ಲಿ, ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ಹೆಚ್ಚಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯ ಹೈಜಂಪ್ ಮುಂದುವರಿದಿದೆ. ಬುಧವಾರದ ಬೆಲೆ 10 ರೂ ಹೆಚ್ಚಿದೆ. ಮೂರು ದಿನಗಳಲ್ಲಿ ಬರೋಬ್ಬರಿ 30 ರೂ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,41,900 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,54,800 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 32,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,41,900 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 32,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 34,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 21ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,480 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,190 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,611 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,480 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,190 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 14,190 ರೂ
  • ಬೆಲೆ: 14,250 ರೂ
  • ಮುಂಬೈ: 14,190 ರೂ
  • ದೆಹಲಿ: 14,205 ರೂ
  • ಕೋಲ್ಕತಾ: 14,190 ರೂ
  • ಕೇರಳ: 14,190 ರೂ
  • ಅಹ್ಮದಾಬಾದ್: 14,195 ರೂ
  • ಜೈಪುರ: 14,205 ರೂ
  • ಲಕ್ನೋ: 14,205 ರೂ
  • ಭುವನೇಶ್ವರ್: 14,190 ರೂ

ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್‌ಗಳ ನಡುವೆ ಏನು ವ್ಯತ್ಯಾಸ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 610 ರಿಂಗಿಟ್ (13,740 ರೂಪಾಯಿ)
  • ದುಬೈ: 529 ಡಿರಾಮ್ (13,156 ರೂಪಾಯಿ)
  • ಅಮೆರಿಕ: 147.50 ಡಾಲರ್ (13,476 ರೂಪಾಯಿ)
  • ಸಿಂಗಾಪುರ: 192.80 ಸಿಂಗಾಪುರ ಡಾಲರ್ (13,719 ರೂಪಾಯಿ)
  • ಕತಾರ್: 525 ಕತಾರಿ ರಿಯಾಲ್ (13,160 ರೂ)
  • ಸೌದಿ ಅರೇಬಿಯಾ: 536 ಸೌದಿ ರಿಯಾಲ್ (13,059 ರೂಪಾಯಿ)
  • ಓಮನ್: 56 ಒಮಾನಿ ರಿಯಾಲ್ (13,290 ರೂಪಾಯಿ)
  • ಕುವೇತ್: 43.28 ಕುವೇತಿ ದಿನಾರ್ (12,935 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 325 ರೂ
  • ಬೆಲೆ: 340 ರೂ
  • ಮುಂಬೈ: 325 ರೂ
  • ದೆಹಲಿ: 325 ರೂ
  • ಕೋಲ್ಕತಾ: 325 ರೂ
  • ಕೇರಳ: 340 ರೂ
  • ಅಹ್ಮದಾಬಾದ್: 325 ರೂ
  • ಜೈಪುರ: 325 ರೂ
  • ಲಕ್ನೋ: 325 ರೂ
  • ಭುವನೇಶ್ವರ್: 340 ರೂ
  • ಪುಣೆ: 325

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *