ಬೆಳಗಾವಿ, ಜನವರಿ 21: ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಇಂದು ಕೈದಿಯಾಗಿದ್ದಾನೆ. ಎಸ್ ಟಿಡಿ ಫೋನ್ ಕಾಲ್ ವಿಚಾರವಾಗಿ ಕೈದಿಗಳ ಮಧ್ಯೆ ಘರ್ಷಣೆ ಶುರುವಾಗಿದೆ. ಅತ್ಯಾಚಾರ ಪ್ರಕರಣದ ಆರೋಪಿ ಮಂಗಳೂರಿನ ಮೂಲದ ಫಯಾನ್, ಬೆಳಗಾವಿ ಮೂಲದ ಮತ್ತಾತ ಅತ್ಯಾಚಾರ ಆರೋಪಿ ಸುರೇಶ್ ಮೇಲೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ದಾನೆ. ಗಾಯಾಳು ಸುರೇಶ್ ಅವರನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ