ನಿರ್ಮಾಣ ಮಾಡಿದ ಪ್ಯಾರಾಗೋಲಾ
ಉತ್ತರ ಕನ್ನಡ, ಜನವರಿ 21: ಮೋಜು ಮಸ್ತಿ, ಪಾರ್ಟಿ ಮಾಡಿದರು ಅರಣ್ಯ ಅಧಿಕಾರಿಗಳು ಮರಗಳ ಮಾರಣ ಹೋಮ ಮಾಡಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ಯಾರಾಗೋಲಾ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗುಂದ ಅರಣ್ಯ ವಲಯದಲ್ಲಿ ಪ್ಯಾರಾಗೋಲಾ ನಿರ್ಮಿಸಲಾಗುತ್ತಿದೆ, ಅರಣ್ಯ ಸಂಪತ್ತನ್ನು ಉಳಿಸಲು ಬೇಕಿದ್ದ ಅಧಿಕಾರಿಗಳು ಕಾಡು ನಾಶ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ದಟ್ಟ ಅರಣ್ಯ ಎರಡರಿಂದ ಮೂರು ಮರಗಳ ಕಟಾವು ಶಂಕೆ ಮಧ್ಯದಲ್ಲಿದ್ದು, ಅಕ್ಕ ಪಕ್ಕದ ಬೃಹತ್ ಗಾತ್ರದ ಮರಗಳ ಕೊಂಬೆ ಕೊಡಲಿ ಪೆಟ್ಟು ನೀಡಿದೆ.
ಹುಲಿ ಸಂರಕ್ಷಿತ ಪ್ರದೇಶಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಬರುತ್ತವೆ. ಈ ಕಾಯ್ದೆಯ ಪ್ರಕಾರ ಒಂದೇ ಒಂದು ಮರ ಕಡಿಯುವುದಕ್ಕೂ, ಯಾವುದೇ ಅರಣ್ಯ ಸಂಪನ್ಮೂಲ ಬಳಸುವುದಕ್ಕೂ ನಿಷೇಧವಿದೆ. ಇಂತಹ ಅಕ್ರಮಗಳನ್ನು ತಡೆಯುವ ಸಲುವಾಗಿ ಅರಣ್ಯ ಇಲಾಖೆಯು ಸಂರಕ್ಷಿತ ಸ್ಥಳಗಳಲ್ಲಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಥಾಪಿಸಿ, ದಿನದ 24 ಗಂಟೆ ಗಸ್ತು ವ್ಯವಸ್ಥೆ ನಡೆಸುತ್ತಿದೆ. ಹೀಗಿರುವಾಗ ಗುಂಡ ಅರಣ್ಯ ವಲಯದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕೇಂದ್ರ ವಲಯದಲ್ಲಿರುವ ಚಪೇರಾ ಕಳ್ಳಬೇಟೆ ತಡೆ ಶಿಬಿರದ ಬಳಿ ಈ ಪ್ಯಾರಾಗೋಲಾ ನಿರ್ಮಾಣಗೊಂಡಿದೆ.
ಇದನ್ನೂ ಓದಿ: ಕಿತ್ತಳೆ ಮಾರ್ಗಕ್ಕಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಮುಂದಾದ BMRCL; ಸಿಡಿದೆದ್ದ ಪರಿಸರ ಪ್ರೇಮಿಗಳು
ಸಂಪೂರ್ಣವಾಗಿ ಟೀಕ್ ಮರ ಬಳಸಿ ಪ್ಯಾರಾಗೋಲಾ ನಿರ್ಮಿಸಲಾಗಿದೆ, ಹುಲಿ ಸಂರಕ್ಷಿತ ಪ್ರದೇಶದೊಳಗೆ ಪರ್ಗೋಲಾ ಏಕೆ ಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಇಲ್ಲಿ ಮನರಂಜನೆಗೆ ಯಾವುದೇ ಅವಕಾಶವಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬರು ಒಂದಿಷ್ಟು ಕಟ್ಟಿಗೆ ಕೊಂಡೊಯ್ದರೂ ಕಿರುಕುಳ ನೀಡುವ ಅರಣ್ಯ ಅಧಿಕಾರಿಗಳು, ಮರಗಳನ್ನು ಕಡಿದು ಪ್ಯಾರಾಗೋಲಾ ನಿರ್ಮಿಸಿದ್ದಾರೆ ಏಕೆ? ಎಂಬ ಮಾತುಗಳು ಪರಿಸರ ಪ್ರೇಮಿಗಳಿಂದ ಕೇಳಿಬಂದಿವೆ. ಈ ಕುರಿತು ಹೇಳಿಕೆ ನೀಡಿದ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಸ್‌ಎಫ್) ಪ್ರಶಾಂತ್ ಕುಮಾರ್, ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಇನ್ನು ಸ್ಥಳಕ್ಕೆ ಭೇಟಿಕೊಟ್ಟು ವರದಿ ನೀಡುವಂತೆ ಡಿಸಿಎಫ್‌ಗೆ ಸಿಸಿಎಫ್ ಸೂಚನೆ ಕೂಡ ನೀಡಿರುವ ಹಿನ್ನೆಲೆ ಪ್ರಕರಣ ಮಹತ್ವದ್ದಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.