ಡಾಲರ್ ಎದುರು ರುಪಾಯಿ ಮೌಲ್ಯ 91.70ಕ್ಕೆ ಕುಸಿತ; ಇದೇ ಟ್ರೆಂಡ್ ಇದ್ದರೆ 93ಕ್ಕೆ ಇಳಿಯಬಹುದು ಎಂದ ತಜ್ಞರು

ಡಾಲರ್ ಎದುರು ರುಪಾಯಿ ಮೌಲ್ಯ 91.70ಕ್ಕೆ ಕುಸಿತ; ಇದೇ ಟ್ರೆಂಡ್ ಇದ್ದರೆ 93ಕ್ಕೆ ಇಳಿಯಬಹುದು ಎಂದ ತಜ್ಞರು


ಜನವರಿ 21: ರುಪಾಯಿ ಕರೆನ್ಸಿಯ ದುರ್ಬಲ ಪ್ರದರ್ಶನ (ಡಾಲರ್ ವಿರುದ್ಧ ರೂಪಾಯಿ) ಭಾರತದಲ್ಲಿ ಮುಂದುವರಿದಿದೆ. ಬೇರೆ ಬೇರೆ ಕಾರಣಗಳಿಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದೆ. ನಿನ್ನೆ 90.98 ಇದ್ದ ರೂಪಾಯಿ ಮೌಲ್ಯ ಇವತ್ತು 91 ದಾಟಿ ಹೋಗಿದೆ. ಬುಧವಾರ ಒಂದು ಹಂತದಲ್ಲಿ 76 ಪೈಸೆ ಕುಸಿತಗೊಂಡು 91.74ಕ್ಕೆ ಹೋಗಿದ್ದ ರೂಪಾಯಿ, ಅಂತಿಮವಾಗಿ 91.70ಕ್ಕೆ ನಿಂತಿದೆ. ಇದು ಡಾಲರ್ ಎದುರು ರುಪಾಯಿಯ ಸಾರ್ವಜನಿಕ ಕನಿಷ್ಠ ಮೌಲ್ಯ ಎನಿಸಿದೆ.

ಡಾಲರ್ ಎದುರು ರುಪಾಯಿ ದುರ್ಬಲ ಪ್ರದರ್ಶನಕ್ಕೆ ಕಾರಣಗಳು..

ವಿದೇಶೀ ಹೂಡಿಕೆಗಳು ಹೊರಹೋಗುವುದು ಮುಂದುವರಿಯುತ್ತಲೇ ಇದೆ; ಆಮದು ಅವಶ್ಯಕತೆ ಹೆಚ್ಚುತ್ತಿದೆ; ಡಾಲರ್ ಕರೆನ್ಸಿ ಪ್ರಬಲವಾಗುತ್ತಿದೆ. ರುಪಾಯಿ ಮೌಲ್ಯ ಕುಸಿಯಲು ಕಾರಣವಾಗಿರುವ ಅಂಶಗಳಲ್ಲಿ ಈ ಮೂರು ಇವೆ. ಅಮೆರಿಕದ ಟ್ಯಾರಿಫ್ ಬೆದರಿಕೆಯೂ ಹೂಡಿಕೆಗಳು ಹೊರಹರಿವಿಗೆ ಕಾರಣವಾಗಿರಬಹುದು.

ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಡಿಸೆಂಬರ್‌ನಲ್ಲಿ ಕನಿಷ್ಠ ಮಟ್ಟಕ್ಕೆ ಹೋಗಿತ್ತು. ಜನವರಿಯಲ್ಲಿ ಚೇತರಿಸಿಕೊಂಡಿತ್ತು. ಆದರೆ, ಕಳೆದ ಐದಾರು ಸೆಷನ್‌ಗಳಿಂದ ರುಪಾಯಿ ಸತತವಾಗಿ ಹಿನ್ನಡೆ ಕಾಣುತ್ತಿದೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನದ ದೇಶಗಳು ಹೇಗೆ?

ಡಾಲರ್ ಎದುರು 93ಕ್ಕೆ ಕುಸಿಯುತ್ತಾ ರುಪಾಯಿ?

ಈಗಿರುವ ಒತ್ತಡಗಳು ಹೀಗೇ ಮುಂದುವರಿದಲ್ಲಿ ರುಪಾಯಿ ಮೌಲ್ಯವು 92.5 ರಿಂದ 93 ರಷ್ಟು ಕಡಿಮೆಯಾಗಬಹುದು ಎಂದು ಎಎನ್‌ಝಡ್ ರಿಸರ್ಚ್‌ನ ಧೀರಜ್ ನಿಮ್ ಹೇಳುತ್ತಾರೆ. ಆದರೆ, ಜಿಡಿ ಕಾರ್ಪಿ ಗುಣಮಟ್ಟದ ವೃದ್ಧಿಸಿದರೆ, ಎಫ್‌ಡಿಐ ಒಳಹರಿವು ಹೆಚ್ಚಾದರೆ ರುಪಾಯಿ ಕರೆನ್ಸಿ ಮತ್ತೆ ಬಲಗೊಳ್ಳಬಹುದು ಅವರ ಅನಿಸಿಕೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *