ಧಾರವಾಡ, (ಜನವರಿ 21): ಯುವತಿಯೋರ್ವಳು ಕೆಲಸ ಹುಡುಕಲು ಮನೆಯಿಂದ ಹೋಗಿದ್ದವಳು ಶವವಾಗಿ ಇದ್ದಿದ್ದಾಳೆ. ಪ್ಯಾರಾಮೆಡಿಕಲ್ ಪೂರ್ಣಗೊಳಸಿದ್ದ ಧಾರವಾಡದ (ಧಾರವಾಡ) ಚೌಕ್ ಗಾಂಧಿ ನ ನಿವಾಸಿ 21 ವರ್ಷ ಜಕಿಲಾ ಮುಲ್ಲಾ, ಕೆಲಸ ಹುಡುಕಿದ್ದು ನಿನ್ನೆ(ಜನವರಿ 20) ಮನೆಯಿಂದ ಹೋಗಿದ್ದಳು. ಆದರೆ, ಇಂದು (ಜನವರಿ 21) ಧಾರವಾಡದ ಮನಸೂರು ಗ್ರಾಮದ ಪಕ್ಕ ರಸ್ತೆ ಝಕಿಲ ಮುಲ್ಲಾ ಮೃತದೇಹವಿದೆ. ಯುವತಿ ಬಾಯಲ್ಲಿ ರಕ್ತ ಬಂದಿದ್ದು, ಆಕೆಯ ವೇಲ್ ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಸಂಶಯ ಹುಟ್ಟಿಕೊಂಡಿದೆ. ಇನ್ನು ಈ ಘಟನೆಯಿಂದ ಧಾರವಾಡ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.
ಧಾರವಾಡದ ಮನಸೂರು ಗ್ರಾಮದ ರಸ್ತೆ ಪಕ್ಕ ಶವವಾಗಿ ಬಿದ್ದಿರುವ ಈ ಚೆಲುವೆ ಜಕಿಲ ಮುಲ್ಲಾ.. 21 ವರ್ಷ ವಯಸ್ಸು.. ಧಾರವಾಡದ ಗಾಂಧಿ ಚೌಕ್ ನ ನಿವಾಸಿ ಆಗಿದ್ದ ಯುವತಿ, ಪ್ಯಾರಾಮೆಡಿಕಲ್ ಪೂರೈಸಿದ್ಳು. ನಿನ್ನೆ ಸಂಜೆ ಲ್ಯಾಬ್ಗಳಲ್ಲಿ ಕೆಲಸ ಹುಡುಕಲೆಂದು ಮನೆಯಿಂದ ಹೊರಟಳು. ಆದರೆ ರಾತ್ರಿಯಾದ್ರೂ ಮನೆಗೆ ಬಂದಿರಲಿಲ್ಲ.. ಮನೆಯವ್ರು ಧಾರವಾಡ ಟೌನ್ ಪೊಲೀಸರಿಗೆ ದೂರು ನೀಡಿದ್ರು. ಇಂದು ಬೆಳಗ್ಗೆ ಝಕಿಯಾ ಶವ ಪತ್ತೆ ಆಗಿದೆ. ಯುವತಿ ಬಾಯಲ್ಲಿ ರಕ್ತ ಬಂದಿದ್ದು, ಆಕೆಯ ವೇಲ್ ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಸಂಶಯ ಎದುರಾಗಿದೆ.
ಇದನ್ನೂ ನೋಡಿ: ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಕೊಲೆ ಮಾಡಿ ಆರೋಪಿಗಳು ಎಸ್ಕೇಪ್?
ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ
ಇನ್ನು ಈ ಬಗ್ಗೆ ಧಾರವಾಡ ಎಸ್ಪಿ ಗುಂಜನ್ ಆರ್ಯ ಹೇಳಿದ್ದಾರೆ, ಝಕಿಯಾ ಎನ್ನುವ ಯುವತಿಯ ಶವ ಇದೆ. ನಿನ್ನೆ ಮಧ್ಯಾಹ್ನ ಊಟ ಮಾಡಿ ಮನೆಯಿಂದ ಹೊರಹೋಗಿದ್ದಳು. ನಮಗೆ ಇಂದು ಮುಂಜಾನೆ ಶವ ಬಿದ್ದಿರುವ ಬಗ್ಗೆ ಮಾಹಿತಿ ಬಂದಿತ್ತು. ಕತ್ತು ಹಿಸುಕಿ ಎಂದು ನಮಗೆ ಮಾಹಿತಿ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದೇನೆ. ಸುಕೋ ಟೀಂ ಪರಿಶೀಲನೆ ನಡೆಸಿದ್ದು, ಮೆಡಿಕಲ್ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ. ಕುಟುಂಬದವರಿಗೆ ನಿನ್ನೆ ರಾತ್ರಿ ಮೆಸೆಜ್ ಕೂಡ ಮಾಡಿದ್ದಾಳೆ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಧಾರವಾಡದ ಸಾಧನಕೇರಿಯ ಯುವಕನನ್ನ ಝಕಿಯಾ ಇಷ್ಟಪಟ್ಟಿದ್ದು, ಮದ್ವೆಗೂ ಮನೆಯವರು ಒಪ್ಪಿದ್ದರು. ಹೀಗಾಗಿ ಮುಂದಿನ ತಿಂಗಳ ನಿಶ್ಚಿತಾರ್ಥಕ್ಕೆ ತೀರ್ಮಾನಿಸಿದ್ದರು. ಆದರೆ, ಇದೀಗ ಚೆಲುವೆಯ ಹತ್ಯೆ, ಹತ್ತಾರು ಪ್ರಶ್ನೆ ಹುಟ್ಟುಹಾಕಿದೆ. ಸದ್ಯ ಕೊಲೆಗಾರರ ಪತ್ತೆಗೆ ಮುಂದಾಗಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ ಹಿಂದೆ ಬಿದ್ದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:00 pm, ಬುಧವಾರ, 21 ಜನವರಿ 26