Headlines

Chanakya Niti: ಈ ಭಯವನ್ನು ತೆಗೆದುಹಾಕಿದರೆ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ

Chanakya Niti: ಈ ಭಯವನ್ನು ತೆಗೆದುಹಾಕಿದರೆ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ


ಯಶಸ್ಸನ್ನು (ಯಶಸ್ಸು) ಸಾಧಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ ತಮ್ಮ ತಪ್ಪುಗಳಿಂದ ಅನೇಕರಿಗೆ ತಾವು ಅಂದುಕೊಂಡಷ್ಟು ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ ಜೊತೆಗೆ ತಾವು ಅಂದುಕೊಂಡ ಕೆಲಸವನ್ನು ಸಹ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ನಮ್ಮಲ್ಲಿರುವ ಭಯವು ಸಹ ಒಂದು ಮುಖ್ಯ ಕಾರಣ. ಯಶಸ್ಸನ್ನು ಸಾಧಿಸಲು ಬಯಸುವವರು ಆ ಭಯವನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಯಶಸ್ಸಿಗೆ ತೊಡಕಾಗುವ ಆ ಭಯದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಯಶಸ್ಸು ಬಯಸುವವರು ಈ ನಾಲ್ಕು ವಿಷಯಗಳಿಗೆ ಹೆದರಬಾರದು:

ಸತ್ಯ ಹೇಳಲು ಭಯಪಡಬಾರದು: ಜನರು ತಮ್ಮ ತಪ್ಪುಗಳನ್ನು ಮರೆಮಾಡಲು ಸುಳ್ಳು ಹೇಳುತ್ತಾರೆ ಆದರೆ ತಪ್ಪುಗಳು ನಡೆದಾಗ ಅದರ ಬಗ್ಗೆ ಸತ್ಯ ಹೇಳಲು ಭಯಪಡುತ್ತಾರೆ. ಆದರೆ ಸತ್ಯ ಹೇಳಲು ಯಾವುದೇ ರೀತಿಯ ಭಯಪಡಬಾರದು ಎನ್ನುತ್ತಾರೆ ಚಾಣಕ್ಯ. ಸತ್ಯ ಹೇಳುವುದು ಒಬ್ಬ ವ್ಯಕ್ತಿಯ ದೊಡ್ಡ ಶಕ್ತಿ. ಸತ್ಯ ಹೇಳುವುದರಿಂದ, ಒಬ್ಬ ಎಲ್ಲರ ವಿಶ್ವಾಸವನ್ನು ಗಳಿಸುತ್ತಾನೆ, ಸಮಾಜದಲ್ಲಿ ಉತ್ತಮ ಇಮೇಜ್ ಅನ್ನು ಸೃಷ್ಟಿಸುತ್ತಾನೆ ಮತ್ತು ಪ್ರಗತಿ ಸಾಧಿಸುತ್ತಾನೆ. ಯಾವುದೇ ಸತ್ಯ ಹೇಳಲು ಹಿಂಜರಿಕೆ ಬೇಡ.

ಕಠಿಣ ಪರಿಶ್ರಮ ಪಡಲು ಭಯಬೇಡ: ಜನರು ಕಠಿಣ ಪರಿಶ್ರಮ ಬೇಡ ಸುಲಭವಾಗಿ ಯಶಸ್ಸು ಸಿಗಬೇಕೆಂದು ಬಯಸುತ್ತಾರೆ. ಕಠಿಣ ಪರಿಶ್ರಮವಿಲ್ಲದೆ, ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸಲಾಗುವುದಿಲ್ಲ. ಕಠಿಣ ಪರಿಶ್ರಮಕ್ಕೆ ಭಯಪಡಬಾರದು. ನೀವು ಜೀವನದಲ್ಲಿ ಯಶಸ್ವಿಯಾಗಲು, ಕಷ್ಟಪಟ್ಟು ಕೆಲಸ ಮಾಡಿ. ಕಠಿಣ ಪರಿಶ್ರಮವು ವ್ಯಕ್ತಿಯನ್ನು ಬಲಪಡಿಸುತ್ತದೆ ಮತ್ತು ಆತನನ್ನು ಯಶಸ್ವಿಗೊಳಿಸುತ್ತದೆ.

ಇದನ್ನೂ ಓದಿ: ಮಾನಸಿಕವಾಗಿ ಬಲಿಷ್ಠರಾಗಲು ಚಾಣಕ್ಯರು ಹೇಳಿರುವ ತತ್ವಗಳನ್ನು ಪಾಲಿಸಿ

ಬದಲಾವಣೆಗಳಿಗೆ ಹೆದರಬಾರದು: ಒಬ್ಬ ವ್ಯಕ್ತಿ ಜೀವನದಲ್ಲಿ ಬದಲಾವಣೆಯನ್ನು ಸ್ವೀಕರಿಸಬೇಕು. ಬದಲಾವಣೆಗೆ ಹೆದರುವವರು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜೀವನದಲ್ಲಿ ಬರುವ ಬದಲಾವಣೆಗಳನ್ನು ಸ್ವೀಕರಿಸಿ. ಬದಲಾವಣೆಯೊಂದಿಗೆ ಹೊಸ ಜೀವನವನ್ನು ನಡೆಸಬೇಕು, ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎನ್ನುತ್ತಾರೆ ಚಾಣಕ್ಯ.

ಹೋರಾಟಗಳಿಗೆ ಭಯ ಬೇಡ: ಜೀವನವೇ ಒಂದು ಹೋರಾಟ ಇದ್ದಂತೆ. ಜೀವನದಲ್ಲಿ ಬರುವಂತಹ ಹೋರಾಟಗಳು ವ್ಯಕ್ತಿಯನ್ನು ಬಲಿಷ್ಠನನ್ನಾಗಿ ಮಾಡುತ್ತದೆ, ಆ ಹೋರಾಟಗಳು ತಾಳ್ಮೆ ಮತ್ತು ಜೀವನ ಪಾಠವನ್ನು ಕಲಿಸುತ್ತದೆ. ಜೀವನದಲ್ಲಿನ ಹೋರಾಟಗಳು ನಮಗೆ ಮುಂದುವರಿಯುವುದು ಹೇಗೆ ಕಲಿಸುತ್ತದೆ ಚಾಣಕ್ಯ. ಅದೇ ಜೀವನದಲ್ಲಿ ಎದುರಾಗುವ ಹೋರಾಟಗಳಿಗೆ ಹೆದರುವವರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *