Headlines

Bigg Boss 12 ಝೂನಲ್ಲಿದ್ರೆ ಎಲ್ಲರೂ ಯಾವ ಪ್ರಾಣಿ ಆಗಿರ್ತಿದ್ರು? ನೆಚ್ಚಿನ ಸ್ಪರ್ಧಿಗಳ ಹುಡುಕಿದ ನೆಟ್ಟಿಗರು!

Bigg Boss 12 ಝೂನಲ್ಲಿದ್ರೆ ಎಲ್ಲರೂ ಯಾವ ಪ್ರಾಣಿ ಆಗಿರ್ತಿದ್ರು? ನೆಚ್ಚಿನ ಸ್ಪರ್ಧಿಗಳ ಹುಡುಕಿದ ನೆಟ್ಟಿಗರು!

Bigg Boss 12 ಝೂನಲ್ಲಿದ್ರೆ ಎಲ್ಲರೂ ಯಾವ ಪ್ರಾಣಿ ಆಗಿರ್ತಿದ್ರು? ನೆಚ್ಚಿನ ಸ್ಪರ್ಧಿಗಳ ಹುಡುಕಿದ ನೆಟ್ಟಿಗರು!

ಬಿಗ್​ಬಾಸ್​ 12ರ ಸ್ಪರ್ಧಿಗಳನ್ನು ಪ್ರಾಣಿಗಳಿಗೆ ಹೋಲಿಸಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದು ವೈರಲ್ ಆಗಿದೆ. ಈ ಕಲ್ಪನೆಯ ಪ್ರಕಾರ, ಕಿಚ್ಚ ಸುದೀಪ್ ಸಿಂಹವಾದರೆ, ವಿನ್ನರ್ ಗಿಲ್ಲಿ ನಟ ಹುಲಿಯಾಗಿದ್ದಾರೆ. ಆದರೆ, ಅಶ್ವಿನಿ ಗೌಡ ಅವರ ಬಗ್ಗೆ ಹೆಚ್ಚು ಚರ್ಚಿಸಲಾಗುತ್ತಿದೆ.

ಬಿಗ್​ಬಾಸ್​ 12 (Bigg Boss 12) ಮುಗಿದು ಹೋದರೂ ಇಂದಿಗೂ ಅದರ ಗುಂಗಿನಿಂದ ಹಲವರು ಹೊರಬಂದಿಲ್ಲ. ಕುತೂಹಲದ ಪೋಸ್ಟ್​ಗಳನ್ನು ಶೇರ್​ ಮಾಡುತ್ತಲೇ ಇದ್ದಾರೆ. ಕೆಲವರು ತಮ್ಮ ನೆಚ್ಚಿನ ಸ್ಪರ್ಧಿಗಳ ತುಣುಕುಗಳನ್ನು ಶೇರ್​ ಮಾಡುತ್ತಿದ್ದರೆ, ಮತ್ತೆ ಕೆಲವರು ವಿಡಿಯೋಗಳನ್ನು ಶೇರ್​ ಮಾಡಿ ತಮಗೆ ಆಗದವರ ಟ್ರೋಲ್​ ಮಾಡುತ್ತಿದ್ದಾರೆ.

ಆದರೆ ಇವೆಲ್ಲಕ್ಕಿಂತಲೂ ಭಿನ್ನವಾಗಿ itsdhanush_s ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಡಿಫರೆಂಟ್​ ಪೋಸ್ಟ್​ ಶೇರ್​ ಮಾಡಲಾಗಿದೆ. ಒಂದು ವೇಳೆ ಬಿಗ್​ಬಾಸ್​ ಸೀಸನ್​ 12 ಝೂನಲ್ಲಿ ಇದ್ದರೆ, ಈ ಬಾರಿ ಇದ್ದ ಸ್ಪರ್ಧಿಗಳೆಲ್ಲಾ ಯಾವ ಪ್ರಾಣಿ ಆಗಿರುತ್ತಿದ್ದರು ಎನ್ನುವ ಬಗ್ಗೆ ತಮ್ಮ ಅನಿಸಿಕೆಯನ್ನು ಅವರು ತಿಳಿಸಿದ್ದಾರೆ. ಒಂದೊಂದು ಸ್ಪರ್ಧಿಯ ಹಿಂದೆ, ತಮ್ಮ ಕಲ್ಪನೆಯ ಪ್ರಾಣಿಗಳ ಚಿತ್ರವನ್ನು ಅವರು ಶೇರ್​ ಮಾಡಿದ್ದಾರೆ. ಆದರೆ ಬಹುತೇಕ ಕಮೆಂಟಿಗರು ಕಣ್ಣು ಮಾತ್ರ ಅಶ್ವಿನಿ ಗೌಡ ಅವರತ್ತ ನೆಟ್ಟಿರುವುದು ಮಾತ್ರ ವಿಶೇಷವಾಗಿದೆ.

ಇವರ ಪ್ರಕಾರ, ಚಂದ್ರಪ್ರಭ ನೀರು ಕುದುರೆ, ಡಾಗ್​ ಸತೀಶ್​ ನಾಯಿ, ಕಾವ್ಯಾ ಆಡು ಅಂತೆ.

itsdhanush_s ಅವರ ಕಲ್ಪನೆಯಲ್ಲಿ, ಜಾಹ್ನವಿ ಸರ್ಪ, ಸೂರಜ್​ ಸಿಂಗ್​ ಕಪ್ಪು ಚಿರತೆ (ಜಾಗ್ವಾರ್​), ಧನುಷ್​ ಚಿರತೆಯಂತೆ!

ಈ ಪೋಸ್ಟ್​ನಲ್ಲಿ ಕರಿಬಸಪ್ಪ ಅವರ ಹಿಂದೆ ಗೋರಿಲ್ಲ, ಕಾಕ್ರೋಚ್​ ಸುಧಿ ಹಿಂದೆ ಕತ್ತೆ ಕಿರುಬ, ಸ್ಪಂದನಾ ಸೋಮಣ್ಣ. ಹಿಂದೆ ಸೋಮಾರಿ ಕರಡಿ ಫೋಟೋ ಹಾಕಲಾಗಿದೆ.

ಇನ್ನು ರಾಶಿಕಾ ಶೆಟ್ಟಿಯನ್ನು ಜಿರಾಫೆಗೆ ಹೋಲಿಸಿದ್ದರೆ, ರಕ್ಷಿತಾ ಶೆಟ್ಟಿ ಅವರನ್ನು ಕೋತಿಗೂ ಮ್ಯೂಟೆಂಟ್​ ರಘು ಅವರನ್ನು ಆನೆಗೂ ಹೋಲಿಸಲಾಗಿದೆ. ಧ್ರುವಂತ್​ ಅವರನ್ನು ತೋಳಕ್ಕೆ ಹೋಲಿಕೆ ಮಾಡಲಾಗಿದೆ.

ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆಯೂ ಅಸಮಾಧಾನವನ್ನು ಹೊರಹಾಕುತ್ತಿರುವ ಅಶ್ವಿನಿ ಗೌಡ ಅವರನ್ನು ಊಸರವಳ್ಳಿಗೆ ಹೋಲಿಕೆ ಮಾಡಲಾಗಿದ್ದು, ವಿನ್ನರ್​ ಗಿಲ್ಲಿ ನಟ (Bigg Boss Winner Gilli Nata) ಅವರನ್ನು ಹುಲಿಗೂ ಹಾಗೂ ಕೊನೆಯದಾಗಿ ಕಿಚ್ಚ ಸುದೀಪ್​ ಸಿಂಹಕ್ಕೂ ಹೋಲಿಕೆ ಮಾಡಲಾಗಿದೆ.

Source link

Leave a Reply

Your email address will not be published. Required fields are marked *