ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ (ರಣವೀರ್ ಸಿಂಗ್), ‘ಧುರಂಧರ’ ಸಿನಿಮಾ ಮೂಲಕ ಭಾರಿ ಯಶಸ್ಸು ಗಳಿಸಿದ್ದಾರೆ. ಈ ಹಿಂದಿನ ತಮ್ಮ ಸೋಲುಗಳಿಗೆಲ್ಲ ಮುಯ್ಯಿ ತೀರಿಸಿಕೊಂಡಿದ್ದಾರೆ ‘ಧುರಂಧರ’ ಸಿನಿಮಾ ಮೂಲಕ. ‘ಧುರಂಧರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬರುತ್ತಿದ್ದರೂ ಸಿನಿಮಾದ ಕಲೆಕ್ಷನ್ ಇಳಿಕೆ ಆಗಿಲ್ಲ. ‘ಧುರಂಧರ’ ಸಿನಿಮಾದ ಎರಡನೇ ಭಾಗವೂ ಬಿಡುಗಡೆಯ ಘೋಷಣೆ ಮಾಡುವುದಾಗಿ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಆದರೆ ರಣ್ವೀರ್ ಸಿಂಗ್ ‘ಧುರಂಧರ’ ಅಂಥಾ ದೊಡ್ಡ ಹಿಟ್ ಸಿನಿಮಾ ಕೊಟ್ಟ ಬಳಿಕ ಹಾರರ್ ಸಿನಿಮಾಕ್ಕೆ ಕೈಹಾಕಿದ್ದಾರೆ.
ರಣವೀರ್ ಸಿಂಗ್, ವ್ಯಾಂಪೈರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಮಲೆಯಾಳಂನಲ್ಲಿ ಹಿಟ್ ಆಗಿರುವ ‘ಲೋಕಃ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಇದು ವ್ಯಾಂಪೈರ್ ಸಿನಿಮಾವೇ ಆಗಿದೆ. ‘ಲೋಕ’ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದರು. ಇದೀಗ ಅದೇ ಕಲ್ಯಾಣಿ ಪ್ರಿಯದರ್ಶನ್ ಅವರು ರಣ್ವೀರ್ ಸಿಂಗ್ ನಟಿಸಲಿರುವ ಹೊಸ ವ್ಯಾಂಪೈರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಸಿನಿಮಾದ ನಿರ್ದೇಶನ ಮಾಡಲಿರುವುದು ಕಲ್ಯಾಣಿ ಪ್ರಿಯದರ್ಶನ್ ಅವರ ತಂದೆ, ಲಿಜೆಂಡರಿ ನಿರ್ದೇಶಕ ಪ್ರಿಯದರ್ಶನ್.
ಇದನ್ನೂ ಓದಿ:ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಜೊತೆ ಶ್ರೀಲೀಲಾ, ಆದರೆ ಸಿನಿಮಾಕ್ಕಾಗಿ ಅಲ್ಲ
ಪ್ರಿಯದರ್ಶನ್ ಅವರು ‘ಪ್ರಲಯ’ ಹೆಸರಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ, ಈ ಸಿನಿಮಾ ವ್ಯಾಂಪೈರ್‌ಗಳ ಕಥೆಯನ್ನು ಒಳಗೊಂಡಿದೆ. ಇದೇ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಸಹ ನಟಿಸಲಿದ್ದಾರೆ. ಪ್ರಿಯದರ್ಶನ್ ಅವರ ಪುತ್ರಿ ಕಲ್ಯಾಣಿ ಪ್ರಿಯದರ್ಶಿನಿ ಸಿನಿಮಾದ ನಾಯಕಿ. ಕಲ್ಯಾಣಿ ಅವರು ಇಲ್ಲಿಯೂ ಸಹ ವ್ಯಾಂಪೈರ್ ಪಾತ್ರದಲ್ಲಿ ನಟಿಸಲಿದ್ದಾರೆ. ‘ಲೋಕಃ’ ಸಿನಿಮಾದಲ್ಲಿಯೂ ಅವರು ವ್ಯಾಂಪೈರ್ ಪಾತ್ರದಲ್ಲಿ ನಟಿಸಿದ್ದರು.
ರಣ್ವೀರ್ ಸಿಂಗ್ ಪಾಲಿಗೆ ಇದು ಮೊದಲ ಹಾರರ್ ಸಿನಿಮಾ ಆಗಲಿದೆ. ಬಾಲಿವುಡ್ ನಲ್ಲಿ ಇತ್ತೀಚೆಗೆ ಒಂದರ ಹಿಂದೆ ಒಂದರಂತೆ ಹಾರರ್ ಸಿನಿಮಾಗಳು ಬಿಡುಗಡೆ ಆಗುತ್ತಿರುವುದು ಹಿಟ್ ಆಗುತ್ತಿದೆ. ಇದೇ ಕಾರಣಕ್ಕೆ ಇದೀಗ ರಣ್ವೀರ್ ಸಿಂಗ್ ಅವರು ಹಾರರ್ ಸಿನಿಮಾ ಮೇಲೆ ಕಣ್ಣು ಹಾಕಿದ್ದಾರೆ. ‘ಧುರಂಧರ 2′ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಪ್ರಳಯ್’ ಸಿನಿಮಾದ ಚಿತ್ರೀಕರಣದಲ್ಲಿ ರಣವೀರ್ ಸಿಂಗ್ ತೊಡಗಿಸಿಕೊಳ್ಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ