ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ

ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ


ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ

ಜಾಗತಿಕವಾಗಿ ವಿವಿಧ ದೇಶಗಳನ್ನು ವಿವಿಧ ರೀತಿಯಲ್ಲಿ ಅಳೆಯಲು ಬೇರೆ ಬೇರೆ ಸೂಚ್ಯಂಕಗಳಿವೆ. ಎಲ್ಲವನ್ನೂ ರಚಿಸುವ ಏಜೆನ್ಸಿಗಳೆಲ್ಲವೂ ಪಾಶ್ಚಿಮಾತ್ಯರದ್ದೇ ಆಗಿವೆ. ಬಡತನ, ಪ್ರಜಾತಂತ್ರ, ಸಾಮಾಜಿಕ ಭದ್ರತೆ, ಭ್ರೂಣಹತ್ಯೆ, ಅಲ್ಪಸಂಖ್ಯಾತ ರಕ್ಷಣೆ ಇತ್ಯಾದಿ ನಾನಾ ವಿಷಯಗಳಿಗೆ ಗ್ಲೋಬಲ್ ಇಂಡೆಕ್ಸ್‌ಗಳಿವೆ. ಇವುಗಳಲ್ಲಿ ಭಾರತಕ್ಕೆ ಸಿಗುವ ಸ್ಥಾನಮಾನ ಅಷ್ಟಕಷ್ಟೇ. ಭಾರತದಲ್ಲಿ ಪ್ರಜಾತಂತ್ರಾತ್ಮಕ ವ್ಯವಸ್ಥೆ ಶಿಥಿಲವಾಗಿದೆ ಎಂದು ಕೆಲವು ಏಜೆನ್ಸಿಗಳು ವರದಿ ಮಾಡಿದೆ. ಯಾವ ಸ್ಥಳ ಅಥವಾ ಅಳತೆಗೋಲು ಇಟ್ಟುಕೊಂಡು ದೇಶದ ಪರಿಸ್ಥಿತಿಯನ್ನು ಅಂದಾಜಿಸುವುದು ಸಂಶಯಕ್ಕೆ ಎಡೆ ಮಾಡುವಂತಿದೆ. ಇಂತಹ ವಿಸ್ತಾರವಾದ, ದೇಶದ ಅಂಕಿ ಅಂಶಗಳು ಭಾರತ ಪಡೆಯುವುದು ಸರಳವಲ್ಲ. ಹೀಗಾಗಿ, ಹೆಚ್ಚಿನ ಸೂಚ್ಯಂಕಗಳಲ್ಲಿ ಭಾರತದ ಬಗ್ಗೆ ಮಾಡುವ ಅಂದಾಜು ಸತ್ಯಕ್ಕೆ ದೂರವೇ ಇರುತ್ತದೆ.

ಇಷ್ಟು ವರ್ಷ ಈ ಗ್ಲೋಬಲ್ ಏಜೆನ್ಸಿಗಳ ಶ್ರೇಯಾಂಕ ಕ್ರಮವನ್ನು ಭಾರತ ಸಹಿಸಿಕೊಂಡಿದ್ದು ಹೌದು. ಈಗ ಅದನ್ನು ಪ್ರಶ್ನಿಸಲು ಆರಂಭಿಸಿದೆ. ಆಡಳಿತ, ಪ್ರಜಾಪ್ರಭುತ್ವ, ರಾಷ್ಟ್ರೀಯ ಜವಾಬ್ದಾರಿಗಳನ್ನು ಜಾಗತಿಕವಾಗಿ ಅಳೆಯುವ ಮಾದರಿಗಳ ಬಗ್ಗೆಯೇ ಭಾರತ ಧ್ವನಿ ಪ್ರಾರಂಭವಾಗಿದೆ.

ಇದರ ಒಂದು ಪರಿಣಾಮವೇ ರೆಸ್ಪಾನ್ಸಿಬಲ್ ನೇಷನ್ಸ್ ಇಂಡೆಕ್ಸ್ ಅಥವಾ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ (RNI- ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ). ಪೂರ್ವಗ್ರಹದಿಂದ ಕೂಡಿದ, ಮತ್ತು ಬಾಹ್ಯ ಪ್ರಭಾವಿತ ಗ್ಲೋಬಲ್ ರ್ಯಾಂಕಿಂಗ್‌ಗಳಿಗೆ ಪರ್ಯಾಯವಾಗಿ ರೆಸ್ಪಾನ್ಸಿಬಲ್ ನೇಷನ್ಸ್ ಇಂಡೆಕ್ಸ್ ಅಥವಾ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕದಲ್ಲಿ ಪಾರದರ್ಶಕವಾದ ಮತ್ತು ದತ್ತಾಂಶ ಆಧಾರಿತ ವ್ಯವಸ್ಥೆ ಇದೆ.

ಈ ಬದಲಾವಣೆಗೆ ಬೌದ್ಧಿಕ ತಳಹದಿ ನಿರ್ಮಾಣವಾಗಿದ್ದು 2022ರಲ್ಲಿ. ಆರ್ಥಿಕ ಸ್ಥಿತಿಯನ್ನು ಸಂಜೀವ್ ಸನ್ಯಾಲ್ ಅವರು ಭಾರತದಂತಹ ದೇಶಗಳ ಮೌಲ್ಯಮಾಪನ ಮಾಡುವ ಜಾಗತಿಕ ಸೂಚ್ಯಂಕಗಳ ವಿಶ್ವಾಸಾರ್ಹತೆ ಹಾಗೂ ಕ್ರಮಬದ್ಧತೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುವುದರೊಂದಿಗೆ ಪರ್ಯಾಯ ಸಿಸ್ಟಂ ರಚನೆಯನ್ನು ಪ್ರಾರಂಭಿಸಿದರು.

ಈ ಹಲವು ಸೂಚ್ಯಂಕಗಳು ಅಸ್ಪಷ್ಟ ಪ್ರಶ್ನೆಗಳಿಂದ ಕೂಡಿದ, ಪೂರ್ವಗ್ರಹ ಪೀಡಿತ ಮಾಧ್ಯಮ ದೃಷ್ಟಿಕೋನಗಳನ್ನು ಹೊಂದಿರುವ ಮತ್ತು ಪಾರದರ್ಶಕವಲ್ಲದ ಸಣ್ಣ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. 2014ರ ನಂತರದ ಭಾರತದ ಬಗ್ಗೆ ಈ ಸೂಚ್ಯಂಕಗಳು ಕಳಪೆ ಸ್ಥಾನ ಕೊಡುತ್ತಲೇ ಬಂದಿವೆ. ಮತದಾನ ಪ್ರಮಾಣ, ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳಂತಹ ಸಾಕ್ಷ್ಯಗಳು ಈ ಸಮೀಕ್ಷೆಗಳಲ್ಲಿ ಉಪೇಕ್ಷಿಸಲಾಗಿರುವುದು ಕಂಡು ಬರುತ್ತದೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನದ ದೇಶಗಳು ಹೇಗೆ?

ಸಂಜೀವ್ ಸಾನ್ಯಾಲ್ ಅವರು ಈ ವೈರುಧ್ಯವನ್ನು ಎತ್ತಿ ತೋರಿಸಲು ಪ್ರಾರಂಭಿಸಿದರು. ಈ ರ್ಯಾಂಕಿಂಗ್‌ಗಳಲ್ಲಿ ಕಾಣುವ ಅತಾರ್ಕಿಕ ಹೋಲಿಕೆಗಳನ್ನು ಬೆತ್ತಲು ಪ್ರಾರಂಭಿಸಿದರು. ಬಹಳ ದುರ್ಬಲ ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ಸಣ್ಣ ದೇಶದಿಂದ ಕಳಪೆ ಸ್ಥಾನವನ್ನು ಭಾರತಕ್ಕೆ ನೀಡಲಾಗುತ್ತಿರುವ ಪ್ರಶ್ನೆಯನ್ನು ಮಾಡಿದರು.

ಈ ರೀತಿಯ ಕಳಪೆ ಮೌಲ್ಯಮಾಪನದಿಂದ ಏನು ಸಮಸ್ಯೆ?

ಗ್ಲೋಬಲ್ ರ್ಯಾಂಕಿಂಗ್‌ಗಳಲ್ಲಿ ದೇಶಗಳ ಬಗ್ಗೆ ಮಾಡಲಾಗುವ ಮೌಲ್ಯಮಾಪನದಿಂದ ಹಾನಿ ಆಗೋದಿಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಸಂಜೀವ್ ಸಾನ್ಯಾಲ್ ಅವರು ಈ ರೀತಿಯ ರ್ಯಾಂಕಿಂಗ್‌ಗಳು ಬೇರೆ ಬೇರೆ ರೀತಿಯಲ್ಲಿ ದೇಶಕ್ಕೆ ಪರೋಕ್ಷವಾಗಿ ಹಾನಿಯನ್ನು ವಿವರಿಸುತ್ತಾರೆ. ಆರ್ಥಿಕತೆ ಹಾಗೂ ಘನತೆಗೆ ಹಾನಿ ಉಂಟು ಮಾಡಬಹುದಾದಂತಹ ವಿಶ್ವ ಬ್ಯಾಂಕ್ ಸೂಚಕಗಳು, ಸಾವರಿನ್ ಭಾರತದ ಕ್ರೆಡಿಟ್ ರೇಟಿಂಗ್‌ಗಳು, ಇಎಸ್‌ಜಿ ಹೂಡಿಕೆ ನಿರ್ಧಾರಗಳು, ಜಾಗತಿಕ ಮಾಧ್ಯಮ ದೃಷ್ಟಿಕೋನ ಇತ್ಯಾದಿಗಳ ಮೇಲೆ ಇವುಗಳು ಪ್ರಭಾವ ಬೀರುವ ಸಾಧ್ಯತೆ ಇರುವುದನ್ನು ಸಾನಲ್ ಗುರುತಿಸಿದ್ದಾರೆ.

ಅಸಮರ್ಪಕ ರ್ಯಾಂಕಿಂಗ್‌ಗಳನ್ನು ಬಾರಿ ಬಾರಿ ಪ್ರಶ್ನಿಸುವುದರ ಬದಲು ಭಾರತವೇ ಸ್ವಂತವಾಗಿ ರೂಪಿಸಿದ ಪಾರದರ್ಶಕವಾದ, ದತ್ತಾಂಶ ಆಧಾರಿತ ಸೂಚ್ಯಂಕಗಳನ್ನು ರೂಪಿಸಿ, ಆ ಮೂಲಕ ಜಾಗತಿಕ ಮೌಲ್ಯಮಾಪನದಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯವನ್ನು ಮೆಟ್ಟಿ ನಿಲ್ಲುವುದು ಅವಶ್ಯ ಎನಿಸಿತು.

ಈ ಒಂದು ಐಡಿಯಾಗೆ ನಿರ್ದಿಷ್ಟ ಸ್ವರೂಪ ಸಿಕ್ಕಿದ್ದು 2026ರ ಜನವರಿ 19ರಂದು. ಅಂದು ಭಾರತದಿಂದ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ ಬಿಡುಗಡೆ ಆಯಿತು. ಭಾರತ ಹಾಗೂ ತೃತೀಯ ಜಗತ್ತಿನ ನೇತೃತ್ವದಲ್ಲಿ ರೂಪುಗೊಂಡ ಮೊದಲ ಗ್ಲೋಬಲ್ ಇಂಡೆಕ್ಸ್ ಇದೆ.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಉದ್ಘಾಟನೆ

ಜೆಎನ್ಯು ಯುನಿವರ್ಸಿಟಿ, ಐಐಎಂ ಮುಂಬೈ, ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ಜೊತೆಯಲ್ಲಿ ವರ್ಲ್ಡ್ ಇಂಟೆಲೆಕ್ಚುವಲ್ ಫೌಂಡೇಶನ್ ಈ ಸೂಚ್ಯಂಕ ರೂಪಿಸಲು ಶ್ರಮ ಹಾಕಿದೆ. 2026 ರ ಜನವರಿ 19 ರಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯಲ್ಲಿ ಇದನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: G-RAM-G: ಜಿ ರಾಮ್ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ

ಭಾರತದ ಶೈಕ್ಷಣಿಕ ಸಂಸ್ಥೆಗಳ ಆತ್ಮವಿಶ್ವಾಸ

ರೆಸ್ಪಾನ್ಸಿಬಿಲಿಟಿ ನೇಷನ್ಸ್ ಇಂಡೆಕ್ಸ್ ಮೂಲಕ ಭಾರತವು ಪಾಶ್ಚಿಮಾತ್ಯ ನಿಯಂತ್ರಿತ ರ್ಯಾಂಕಿಂಗ್‌ಗೆ ಸವಾಲೊಡ್ಡುವಂತಿದೆ. ಭಾರತದ ಶೈಕ್ಷಣಿಕ ಮತ್ತು ನೀತಿ ಸಂಸ್ಥೆಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ ಮತ್ತು ಜಾಗತಿಕವಾಗಿ ಮಾದರಿ ನಿರ್ಮಿಸುತ್ತಿದೆ.

ಜಾಗತಿಕವಾಗಿ ಈ ಸೂಚ್ಯಂಕವು ಪ್ರಸ್ತುತ ಎನಿಸುತ್ತದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ, ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ಈ ಸೂಚ್ಯಂಕವು ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಉತ್ತಮ ಪರ್ಯಾಯ ಎಂದನಿಸುತ್ತದೆ.

ಮುಖ್ಯವಾದ ಸಂಗತಿ ಎಂದರೆ, ಈ ಪರಿವರ್ತನೆಯು ಸಂಘರ್ಷದಿಂದ ಕೂಡಿಲ್ಲ. ಪರ್ಯಾಯಗಳನ್ನು ನೀಡುವ ಮೂಲಕ ಭಾರತವು ಪಾಶ್ಚಿಮಾತ್ಯ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬರುತ್ತಿದೆ. ಸಮತೋಲಿತವಾದ ಜಾಗತಿಕ ಕ್ರಮಾಂಕಕ್ಕೆ ಕೊಡುಗೆ ನೀಡುತ್ತಾ ಬರುತ್ತಿದೆ. ರಾಜತಾಂತ್ರಿಕವಾಗಿ ಹೇಳುವುದಾದರೆ, ಈ ಸೂಚ್ಯಂಕವು ತನ್ನ ಸ್ಟ್ರಕ್ಚರ್ಡ್ ಡಾಟಾ ಮೂಲಕ ಹೂಡಿಕೆ ಹರಿವು, ಕ್ರೆಡಿಟ್ ರೇಟಿಂಗ್, ಇಎಸ್ ಜಿ ಸ್ಕೋರ್, ಮಾಧ್ಯಮ ದೃಷ್ಟಿಕೋನದ ಮೇಲೆ ಪ್ರಭಾವ ಬೀರಬಲ್ಲದು.

ಜವಾಬ್ದಾರಿಯು ರಾಷ್ಟ್ರಗಳ ಸೂಚ್ಯಂಕ ರೂಪಿಸುವ ಮೂಲಕ ಭಾರತವು ಗ್ಲೋಬಲ್ ಸೌತ್ ಅಥವಾ ಅಭಿವೃದ್ಧಿಶೀಲ ದೇಶಗಳ ನಾಯಕತ್ವವನ್ನು ಸ್ವಾಭಾವಿಕವಾಗಿ ಪಡೆಯುವಂತೆ ಮಾಡುತ್ತದೆ. ನ್ಯಾಯಯುತ ಜವಾಬ್ದಾರಿ ಮತ್ತು ಸಮಗ್ರ ಅಭಿವೃದ್ಧಿ ಸೇರಿದಂತೆ ಜಿ20 ರಲ್ಲಿ ಭಾರತದ ಆದ್ಯತೆಗಳಿಗೆ ಈ ಸೂಚ್ಯಂಕ ತಾಳೆ.

ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳು…

ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ, ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕವು ಏನು ಪರಿವರ್ತನೆ ತಂದಿದೆ ಎಂಬುದು ಕಂಡುಬರುತ್ತದೆ. ಈ ಮುಂಚೆ ಭಾರತವು ಇತರರಿಂದ ಮೌಲ್ಯಮಾಪನ ಪಡೆಯುತ್ತಿತ್ತು. ಈಗ ಜಾಗತಿಕ ಪ್ರಮಾಣಗಳು ಹೇಗಿರಬೇಕೆಂದು ವ್ಯಾಖ್ಯಾನಿಸಲು ಭಾರತ ಸಹಾಯ ಮಾಡುತ್ತಿದೆ. ಆ ಮಟ್ಟಿಗೆ ಪರಿವರ್ತನೆ ಕಂಡುಬರುತ್ತದೆ. ಜ್ಞಾನ ಒಂದೇ ಗುಂಪಿಗೆ ಸೀಮಿತವಲ್ಲ ಎಂದು ಭಾರತ ತೋರಿಸಿದೆ.

ಈ ರೆಸ್ಪಾನ್ಸಿಬಲ್ ನೇಷನ್ಸ್ ಇಂಡೆಕ್ಸ್‌ನಿಂದ ಪ್ರೇರಿತವಾಗಿ, ಭಾರತದ ನಾಯಕತ್ವದಲ್ಲಿ ಮತ್ತಷ್ಟು ಗ್ಲೋಬಲ್ ಇಂಡೆಕ್ಸ್‌ಗಳು ಕಂಡುಬರುತ್ತವೆ. ಡಿಜಿಟಲ್ ಗವರ್ನೆನ್ಸ್, ಇನ್‌ಪ್ರಾಸ್ಟ್ರಕ್ಚರ್ ಸಸ್ಟೈನಬಿಲಿಟಿ, ಇನ್ನೋವೇಶನ್ ಇತ್ಯಾದಿ ಕ್ಷೇತ್ರಗಳಲ್ಲಿ ಪಾಶ್ಚಿಮಾತ್ಯರ ಕಣ್ಣಿಗೆ ನಿಲುಕದ ವೈವಿಧ್ಯತೆಯ ಶಕ್ತಿಯನ್ನು ಬಿಂಬಿಸುವ ಬೇರೆ ಬೇರೆ ಗ್ಲೋಬಲ್ ಇಂಡೆಕ್ಸ್‌ಗಳನ್ನು ಭಾರತದಿಂದ ಬರಬಹುದು.

ಕೊನೆಯದಾಗಿ ಹೇಳುವುದಾದರೆ ಈ ಸೂಚ್ಯಂಕವು ಸಾಂಕೇತಿಕವಾಗಿ ಸೀಮಿತವಾಗಿರುವುದಿಲ್ಲ. ದೀರ್ಘಕಾಲದ ವಿಮರ್ಶೆಯನ್ನು ಜಾಗತಿಕ ಚರ್ಚೆಗಳಿಗೆ ನೀಡಬಲ್ಲ ಸಾಂಸ್ಥಿಕ ರಚನೆಯಾಗಿ ಭಾರತ ಪರಿವರ್ತನೆ ಮಾಡಿರುವುದನ್ನು ಗಮನಿಸಬಹುದು. ಭಾರತವು ಸೂಚ್ಯಂಕಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ನಿಯಮಗಳ ರಚನೆಯ ಕೈಂಕರ್ಯವನ್ನು ಪ್ರಾರಂಭಿಸಿದೆ. ನೈತಿಕತೆ, ಸುಸ್ಥಿರತೆ ಮತ್ತು ಸಮಾನತೆಯ ತಳಹದಿಯಲ್ಲಿ ಜಾಗತಿಕ ಆಡಳಿತದಲ್ಲಿ ಭಾರತವು ಅಜೆಂಡಾ ರೂಪಿಸಲು ಪ್ರಾರಂಭಿಸಿದೆ. ಇದು ಭಾರತದ ಸಾಫ್ಟ್ ಪವರ್ನ ಅನಾವರಣ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *