Daily Devotional: ಸಾವಿನ ಮನೆಯಲ್ಲಿ ಬಿಳಿ ವಸ್ತ್ರವನ್ನು ಯಾಕೆ ಧರಿಸುವದು?

Daily Devotional: ಸಾವಿನ ಮನೆಯಲ್ಲಿ ಬಿಳಿ ವಸ್ತ್ರವನ್ನು ಯಾಕೆ ಧರಿಸುವದು?


ಮರಣದ ನಂತರ ಹಿಂದೂ ಸಂಪ್ರದಾಯ ಬಿಳಿ ವಸ್ತ್ರ ಧರಿಸುವುದು ಇದೆ. ಬಿಳಿಯ ಬಣ್ಣವು ಶಾಂತಿ, ಶುದ್ಧತೆ, ಮೌನ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಭಗವದ್ಗೀತೆಯ ಪ್ರಕಾರ ಜನನ-ಮರಣಗಳು ಜೀವನದ ಸಹಜ ಭಾಗ. ಅಂತಹ ಜನರು ಬಿಳಿ ವಸ್ತ್ರಗಳನ್ನು ಧರಿಸಿ, ಒಡವೆಗಳನ್ನು ತ್ಯಜಿಸಿ, ಮೌನವನ್ನು ಪಾಲಿಸುವುದು ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ. ಇದು ಮೃತರ ಆತ್ಮಕ್ಕೆ ಮೋಕ್ಷವನ್ನು ಕರುಣಿಸಲು ಹಾಗೂ ಕುಟುಂಬದಲ್ಲಿ ಶಾಂತಿ ನೆಲೆಸಲು ಸಹಾಯ ಮಾಡುತ್ತದೆ. ಬಿಳಿ ವಸ್ತ್ರವು ವಾತಾವರಣವನ್ನು ಶುದ್ಧವಾಗಿರಿಸಲು ಸಹಕಾರಿ ಎಂದು ನಂಬಲಾಗಿದೆ. ಸಾವಿನ ಮನೆಗೆ ಹೋಗುವಾಗ ಸಾಧ್ಯವಾದಷ್ಟು ಬಿಳಿ ಬಟ್ಟೆ, ಇಲ್ಲದಿದ್ದರೆ ಕನಿಷ್ಠ ಬಿಳಿ ಟವಲ್ ಧರಿಸುವುದರಿಂದ ಮೃತರ ಆತ್ಮಕ್ಕೆ ಶಾಂತಿ ಹಾಗೂ ಬದುಕಿರುವವರಿಗೆ ಶುಭವಾಗುತ್ತದೆ. ಒಡವೆಗಳನ್ನು ಹಾಕಿಕೊಂಡು, ವಿಚಿತ್ರವಾದ ಅಥವಾ ಆಡಂಬರದ ಬಟ್ಟೆಗಳನ್ನು ಧರಿಸಿಕೊಂಡು ಹೋಗುವಾಗ ಬಿಳಿಯ ವಸ್ತ್ರವನ್ನು ಧರಿಸಿ ಸ್ವಲ್ಪ ಹೊತ್ತು ಮೌನವನ್ನು ಪಾಲಿಸಿದಾಗ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದು ಮೃತರ ಆತ್ಮಕ್ಕೆ ಮೋಕ್ಷವನ್ನು ಕರುಣಿಸಲು ಸಹಾಯಕವಾಗಿದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ, ಇದು ಕುಟುಂಬದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಿದೆ. ಹಿಂದೂ ಸಮಾಜದಲ್ಲಿ ಮತ್ತು ಹಿಂದೂ ಧರ್ಮದಲ್ಲಿ ಜ್ಞಾನ ಮತ್ತು ಸದ್ಭಾವನೆಗೆ ಹೆಚ್ಚಿನ ಪ್ರಾಶಸ್ತ್ಯ ಅಗತ್ಯ. ಬಿಳಿ ಬಣ್ಣವು ಇದೆ ಜ್ಯೋತಿ ಮತ್ತು ಸದ್ಭಾವನೆಗೆ ಪ್ರತೀಕವಾಗಿದೆ ಎಂದು ಖ್ಯಾತಿ ಮತ್ತು ವಾಸ್ತು ಸಂಸ್ಥೆ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *