ದುಬೈ: ಫೆಬ್ರವರಿ 07ರಿಂದ ಆರಂಭವಾಗಬೇಕಿರುವ ಐಸಿಸಿ ಟಿ20 ವಿಶ್ವಕಪ್ ಬಗ್ಗೆ ವಿವಾದ ಮುಂದುವರೆದಿದ್ದು, ಬಾಂಗ್ಲಾದೇಶ ಪಟ್ಟು ಸಡಿಲಿಸಿಲ್ಲ. ಆದರೆ ಇದೀಗ ಬಾಂಗ್ಲಾದೇಶ ಮ್ಯಾಚ್ ಬೇರೆಡೆಗೆ ಶಿಫ್ಟ್ ಮಾಡಬೇಕೇ-ಬೇಡವೇ ಎನ್ನುವ ಬಗ್ಗೆ ನಡೆಸಿದ ಮತ ಚಲಾವಣೆಯಲ್ಲಿ ಬಾಂಗ್ಲಾದೇಶಕ್ಕೆ ಮುಖಭಂಗವಾಗಿದೆ.

ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲೇ ಆಡಲು ಬಾಂಗ್ಲಾದೇಶಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ನಿರ್ದೇಶಿಸಿದೆ. ಹೀಗಿದ್ದು ಬಾಂಗ್ಲಾದೇಶ ತಾನು ಭಾರತಕ್ಕೆ ಬರಲ್ಲ ಎಂದು ಮೊಂಡುವಾದ ಮುಂದುವರೆಸಿದೆ.

ಇದರ ಬಗ್ಗೆ ಐಸಿಸಿ ತನ್ನ ಸದಸ್ಯ ದೇಶಗಳಿಂದ ಮತದಾನ ನಡೆಸಿದ್ದು, 16ರ ಪೈಕಿ 14 ಸದಸ್ಯ ದೇಶಗಳು ಬಾಂಗ್ಲಾ ಕೋರಿಕೆ ವಿರುದ್ಧ ಮತ ಚಲಾಯಿಸಿದೆ.

ಬಾಂಗ್ಲಾ ಪರವಾಗಿ ಭಾರತದ ಬದ್ದ ಎದುರಾಳಿ ಪಾಕಿಸ್ತಾನ ಮಾತ್ರ ಮತ ಚಲಾಯಿಸಿದೆ ಎಂದು ಐಸಿಸಿ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

ಭದ್ರತೆ ಸಮಸ್ಯೆ ಕಾರಣ ಹೇಳಿ ಭಾರತದಿಂದ ತನ್ನ ಪಂದ್ಯಗಳನ್ನು ಬೇರೆಡೆ ಸ್ಥಳಾಂತರಿಸಲು ಬಾಂಗ್ಲಾ ಬೇಡಿಕೆ ಇಟ್ಟಿದೆ. ಆದರೆ ಐಸಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ.

ಭಾರತದಲ್ಲೇ ಆಡಲು ನಿರ್ದೇಶಿಸಿದೆ. ಇದರ ಬಗ್ಗೆ ಅಂತಿಮ ನಿರ್ಧಾರ ತಿಳಿಸಲು ಬುಧವಾರ ಕೊನೆ ದಿನವಾಗಿತ್ತು. ಆದರೆ ಗಡುವು ಒಂದು ದಿನ ವಿಸ್ತರಿಸಲಾಗಿದ್ದು, ಗುರುವಾರ ಬಾಂಗ್ಲಾ ನಿರ್ಧಾರ ತಿಳಿಸಲಿದೆ.

ಒಂದು ವೇಳೆ ಇಂದು ಕೂಡಾ ಬಾಂಗ್ಲಾದೇಶ ಅದೇ ಪಟ್ಟು ಹಿಡಿದರೇ, ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗಿಟ್ಟು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Source link
ಬಾಂಗ್ಲಾದ ಮ್ಯಾಚ್ ಸ್ಥಳಾಂತರ ಬೇಡಿಕೆ ವಿರುದ್ಧ 14 ದೇಶಗಳಿಂದ ಮತ; ಆದ್ರೆ ಅದೊಂದು ದೇಶ ಮಾತ್ರ ಬಾಂಗ್ಲಾ ಪರ ಮತ!