Video: ಊಟ, ನಿದ್ರೆ ಬಿಟ್ಟು ಮಾಲೀಕರ ಶವದ ಬಳಿ ಕುಳಿತ ಶ್ವಾನ, ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ

Video: ಊಟ, ನಿದ್ರೆ ಬಿಟ್ಟು ಮಾಲೀಕರ ಶವದ ಬಳಿ ಕುಳಿತ ಶ್ವಾನ, ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ


ಶಿವಪುರಿ, ಜನವರಿ 22: ನಿಯತ್ತು ಅಂದ್ರೆ ಇದು, ಮೂರು ಹೊತ್ತು ಊಟ ಹಾಕಿರುವ ಋಣ, ಮಾಲೀಕ ಸತ್ತರೂ ಒಂದಿಂಚು ಕದಲದೆ ಕುಳಿತಲ್ಲೇ ಕುಳಿತು ಮೌನವಾಗಿ ರೋದಿಸುತ್ತಿದ್ದ ಘಟನೆ ಶಿವಪುರಿಯಲ್ಲಿ ನಡೆದಿದೆ. ಸಾಕು ನಾಯಿ ಒಂದು ರಾತ್ರಿಯಿಡೀ ತನ್ನ ದೇಹದ ಪಕ್ಕದಲ್ಲಿ ಕುಳಿತುಕೊಂಡಿತ್ತು ಅಲ್ಲಿಂದ ಹೋಗಲು ನಿರಾಕರಿಸಿತ್ತು.

ನಂತರ ಬೆಳಿಗ್ಗೆ, ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಕೂಡ ನಾಯಿ ಶವದ ಪಕ್ಕದಲ್ಲೇ ಇತ್ತು. ನಾಯಿ ವಾಹನವನ್ನು ನೇರವಾಗಿ 4 ಕಿಲೋಮೀಟರ್ ಬೆನ್ನಟ್ಟಿತ್ತು. ಮರಣೋತ್ತರ ಪರೀಕ್ಷೆ ವೇಳೆಯೂ ಕೂಡ ನಾಯಿ ಅಲ್ಲಿಯೇ ಇತ್ತು. ಏನೂ ತಿನ್ನಲಿಲ್ಲ, ಏನೂ ಕುಡಿಯಲೂ ಇಲ್ಲ. ನಿಸ್ವಾರ್ಥ ಪ್ರೀತಿಗೆ ಇದೆ ಸಾಕ್ಷಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *