Headlines

ಒಂದೂ ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್ಸ್‌ ನೋಡಿಲ್ಲ: ಏಕಾಏಕಿ ವಿಡಿಯೋ ಹರಿಬಿಟ್ಟ BBK 12 Winner Gilli Nata | Bigg Boss Kannada Season 12 Show Winner Gilli Nata Shares First Video

ಒಂದೂ ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್ಸ್‌ ನೋಡಿಲ್ಲ: ಏಕಾಏಕಿ ವಿಡಿಯೋ ಹರಿಬಿಟ್ಟ BBK 12 Winner Gilli Nata | Bigg Boss Kannada Season 12 Show Winner Gilli Nata Shares First Video



ಒಂದೂ ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್ಸ್‌ ನೋಡಿಲ್ಲ: ಏಕಾಏಕಿ ವಿಡಿಯೋ ಹರಿಬಿಟ್ಟ BBK 12 Winner Gilli Nata | Bigg Boss Kannada Season 12 Show Winner Gilli Nata Shares First Video

Bigg Boss Kannada Season 12: ಗಿಲ್ಲಿ ನಟ ಅವರು ದೊಡ್ಡ ಮಟ್ಟದಲ್ಲಿ ಜನರ ಮನಸ್ಸು ಗೆದ್ದು, ಬಿಗ್‌ ಬಾಸ್‌ ಕಪ್‌ ಗೆದ್ದರು. ಇವರ ಕ್ರೇಜ್‌ ನೋಡಿ ಎಂಥವರಿಗೂ ಕೂಡ ಶಾಕ್‌ ಆಗಿದ್ದುಂಟು. ಇನ್ನೊಂದು ಕಡೆ ಗಿಲ್ಲಿ ನಟ ಅವರು ವಿಡಿಯೋ ಮಾಡಿ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಗಿಲ್ಲಿ ನಟ ಅವರು ( Bigg Boss Gilli Nata ) ಮಂಡ್ಯದ ಮಳವಳ್ಳಿಯಲ್ಲಿ ತೆರೆದ ವಾಹನ ಜಾಥಾದಲ್ಲಿ ಭಾಗಹಿಸಿದ್ದರು. ಅಲ್ಲಿ ಸೇರಿದ್ದ ಜನರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಗಿ ಬಂತು, ಅಷ್ಟರಮಟ್ಟಿಗೆ ಗಿಲ್ಲಿ ನಟನ ಕ್ರೇಜ್‌ ಇತ್ತು. ಈಗ ಅವರು ವಿಡಿಯೋ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಗಿಲ್ಲಿ ನಟ ಹೇಳಿದ್ದೇನು?

ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ .. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ.. ಕೈ ಮೇಲೆ ಹಚ್ಚೆ ಹಾಕಿಸ್ಕೊಂಡಿದ್ದೀರಾ.. ನಿರಂತರವಾಗಿ ಬೆಂಬಲಿಸಿದ್ದೀರಾ..ಇದುವರೆಗೂ ಬರಿ ರನ್ನರ್ ಅಪ್ ಆಗೇ ಉಳ್ಕೊತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ.. ಮೆರೆಸಿದ್ದೀರಾ..ಈ ಪ್ರೀತಿಗೆ ಏನು ಹೇಳಿದ್ರು, ಎಷ್ಟು ಹೇಳಿದ್ರು ಕಡಿಮೇನೆ!!

ಗಿಲ್ಲಿ ಗೆಲುವಿಗಾಗಿ ವೋಟ್ ಮಾಡಿದವರಿಗೆ, ಹರಕೆ ಹೊತ್ತೋರಿಗೆ, ಅಭಿಮಾನದಿಂದ ಜೊತೆ ನಿಂತೋರಿಗೆ “ರೆಲೆಂಟ್ ಕ್ರಿಯೇಷನ್ಸ್” ಕಡೆಯಿಂದ ದೊಡ್ಡ ನಮಸ್ಕಾರ ಹಾಗೂ ತುಂಬು ಹೃದಯದ ಧನ್ಯವಾದಗಳು !!

ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ , ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು!!

ನಮ್ಮ ಕನ್ನಡಿಗರಿಗೆ, ಕನ್ನಡ ಜನತೆಗೆ ಯಾವ ಥರ ಕೃತಜ್ಞತೆ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ನನಗೆ ಈ ರೀತಿ ಹೊರಗಡೆ ಪ್ರತಿಕ್ರಿಯೆ ಸಿಗ್ತಿದೆ ಎನ್ನೋದು ಗೊತ್ತಿರಲಿಲ್ಲ. ನನಗೆ ನಾನೇ ನಂಬೋಕೆ ಆಗ್ತಿಲ್ಲ. ನನ್ನನ್ನು ಜನರು ಈ ರೀತಿ ಪ್ರೀತಿ ಮಾಡ್ತಾರೆ ಎನ್ನೋದು ಗೊತ್ತಿರಲಿಲ್ಲ. ಯೋಧರು, ಬೇರೆ ರಾಜ್ಯದವರು, ಬೇರೆ ದೇಶದವರು ನನ್ನ ಬಗ್ಗೆ ವಿಡಿಯೋ ಮಾಡಿದ್ದಾರೆ. ರೈತರು ಸಂಕ್ರಾಂತಿ ಹಬ್ಬದ ವೇಳೆ ಕಿಚ್ಚು ಹಾಯಿಸುವಾಗ ಕೂಡ, ಎತ್ತಿನ ಮೇಲೆ ನನ್ನ ಫೋಟೋ ಹಾಕಿದ್ರು.

ಆಟೋ ಡ್ರೈವರ್ಸ್‌ ಕೂಡ ಆಟೋಗಳ ಮೇಲೆ ಸ್ಟಿಕ್ಕರ್ಸ್‌ ಹಾಕಿದ್ದರು. ನನ್ನ ಮುಖದ ಟ್ಯಾಟೂ ಹಾಕಿಸಿಕೊಂಡವರು ಯಾರು ಎನ್ನೋದು ಗೊತ್ತಿಲ್ಲ. ಮೀಡಿಯಾದವರು, ಸೋಶಿಯಲ್‌ ಮೀಡಿಯಾದವರು ಕೂಡ ನನ್ನನ್ನು ಬೆಂಬಲಿಸಿದ್ದು, ಸಿಕ್ಕಾಪಟ್ಟೆ ಆಶ್ಚರ್ಯ ತಂದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಒಂದೇ ಒಂದು ನೆಗೆಟಿವ್‌ ಟ್ರೋಲ್ಸ್‌, ಕಾಮೆಂಟ್‌ ನೋಡಿಲ್ಲ. ನಿಮ್ಮ ಪ್ರೀತಿ, ವಿಶ್ವಾಸವನ್ನು ನಾನು ಕೊನೆಯವರಿಗೂ ಉಳಿಸಿಕೊಳ್ತೀನಿ.

ಗಿಲ್ಲಿ ನಟನ ಮುಂದಿನ ನಡೆ ಏನು?

ಗಿಲ್ಲಿ ನಟನನ್ನು ಒಂದು ಕಾರ್ಯಕ್ರಮಕ್ಕೆ ಕರೆಸಬೇಕು ಎಂದು ಅಂದುಕೊಳ್ಳುವವರೇ ಜಾಸ್ತಿಯಿದ್ದಾರೆ. ಇನ್ನೊಂದು ಕಡೆ ಇವರಿಗೆ ಇನ್ನಷ್ಟು ಸಿನಿಮಾ, ಸೀರಿಯಲ್‌ ಆಫರ್‌ಗಳು ಹೆಚ್ಚಾಗಲಿವೆ. ಗಿಲ್ಲಿ ಯಾವ ಅವಕಾಶವನ್ನು ಆಯ್ಕೆ ಮಾಡಿಕೊಂಡು, ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *