ಬೆಂಗಳೂರು: ಫೆಬ್ರವರಿ 07ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಬರಲ್ಲವೆಂದು ಹಟ ಹಿಡಿದಿರುವ ಬಾಂಗ್ಲಾದೇಶ ಮುಂಬರುವ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಬಾಂಗ್ಲಾದೇಶಕ್ಕೆ ಆಗುವ ನಷ್ಟವೇನು ಗೊತ್ತಾ?

ಬಾಂಗ್ಲಾದೇಶವು ತನ್ನ ಕ್ರಿಕೆಟ್ ಅಭಿವೃದ್ದಿ ಪಡಿಸಲು ಐಸಿಸಿಯಿಂದ ಅನುದಾನ ಪಡೆಯುತ್ತದೆ. ಐಸಿಸಿ ಬಾಂಗ್ಲಾದೇಶಕ್ಕೆ ಸುಮಾರು 30ರಿಂದ 40 ಮಿಲಿಯನ್ ಡಾಲರ್(ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 330-340 ಕೋಟಿ ರುಪಾಯಿ) ಅನುದಾನ ಪಡೆಯುತ್ತೆ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶ ಬಾಯ್ಕಾಟ್ ಮಾಡಿದ್ರೆ ಮುಂಬರುವ ದಿನಗಳಲ್ಲಿ ಈ ಅನುದಾನವನ್ನು ಕಳೆದುಕೊಳ್ಳಲಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ 20 ತಂಡಗಳಿಗೂ ಐಸಿಸಿ ಪಾರ್ಟಿಸಿಪೇಷನ್ ಫೀ ಎಂದು $545,950 ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಸುಮಾರು 5 ಕೋಟಿ ರುಪಾಯಿ ನೀಡುತ್ತದೆ. ಈ ಮೊತ್ತವನ್ನು ಬಾಂಗ್ಲಾದೇಶ ಕಳೆದುಕೊಳ್ಳಲಿದೆ.

ಅಂಕಪಟ್ಟಿಯಲ್ಲಿ ಐದರಿಂದ ಹನ್ನೆರಡರವರೆಗೆ ಸ್ಥಾನ ಪಡೆಯುವ ತಂಡಗಳು ತಲಾ 4 ಕೋಟಿ, ನಾಲ್ಕು ಲಕ್ಷ ರುಪಾಯಿ ತಮ್ಮದಾಗಿಸಿಕೊಳ್ಳಲಿವೆ. ಒಂದು ವೇಳೆ ಬಾಂಗ್ಲಾದೇಶ ಈ ಬಾರಿಯ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದರೆ ಮೊತ್ತವನ್ನು ಬಾಂಗ್ಲಾದೇಶ ಕಳೆದುಕೊಳ್ಳಲಿದೆ.

ಇನ್ನು ಐಸಿಸಿ ಇಷ್ಟೆಲ್ಲಾ ವಾರ್ನಿಂಗ್ ಹೊರತಾಗಿಯೂ ಒಂದು ವೇಳೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಬಾಯ್ಕಾಟ್ ಮಾಡಿದ್ರೆ ಸುಮಾರು 2 ಮಿಲಿಯನ್ ಡಾಲರ್, ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 18.31 ಕೋಟಿ ರುಪಾಯಿಗಳನ್ನು ದಂಡದ ರೂಪದಲ್ಲಿ ಐಸಿಸಿಗೆ ನೀಡಬೇಕು.

ಇಷ್ಟೆಲ್ಲಾ ದಂಡ ಕಟ್ಟಿದ ಬಳಿಕವೂ, ಐಸಿಸಿ ನಿಯಮ ಉಲ್ಲಂಘಿಸಿದ ತಪ್ಪಿಗೆ ಐಸಿಸಿ ನೀಡುವ ಶಿಕ್ಷೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಅನುಭವಿಸಬೇಕಾಗುತ್ತದೆ.

ಒಂದು ವೇಳೆ ಬಾಂಗ್ಲಾದೇಶ ತಂಡವು ಈ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಯ್ಕಾಟ್ ಮಾಡಿದರೆ, ರ್‍ಯಾಂಕಿಂಗ್ ವಿಚಾರದಲ್ಲೂ ದೊಡ್ಡ ಹೊಡೆತ ಅನುಭವಿಸಲಿದೆ. ಸದ್ಯ ಬಾಂಗ್ಲಾದೇಶ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಟಾಪ್ 10 ಲಿಸ್ಟ್‌ನಿಂದಲೂ ಹೊರಬೀಳಲಿದೆ.

Source link
ಒಂದ್ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಅನುಭವಿಸೋ ಕಷ್ಟ ಒಂದೆರಡಲ್ಲ! ಭಾರೀ ಬೆಲೆ ತೆರಬೇಕು