
ಆದರೆ ಈ ರೀಲ್ ಲೈಫ್ ಹೊರತುಪಡಿಸಿ ರಿಯಲ್ ಲೈಫ್ನಲ್ಲಿಯೂ ಹೀಗೇನಾ ಎನ್ನುವ ಪ್ರಶ್ನೆಯೂ ಇಲ್ಲಿ ಕಾಡುತ್ತಿದೆ. ಮೊದಲ ಪತಿ ಸತ್ತಾಗ ಇಲ್ಲವೇ ವಿಧವೆಯಾದಾಗ, ಆಕೆಯ ವಯಸ್ಸು ಒಂದು ಹಂತ ಮೀರಿದ್ದರೆ, ಆಕೆ 2ನೆಯ ಮದುವೆಯ ಬಗ್ಗೆ ಮಾತನಾಡಿದರೆ, ಭಾಗ್ಯಳಿಗೆ ಸೀರಿಯಲ್ನಲ್ಲಿ ಸಿಕ್ಕಷ್ಟೇ ಬೆಂಬಲ ಸಿಗತ್ತಾ ಎನ್ನುವುದು ಪ್ರಶ್ನೆ. ಕಾಲ ಏನೇ ಬದಲಾಗಿದ್ದರೂ, ಭಾಗ್ಯಳಂಥ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿರೋ ಹೆಣ್ಣುಮಕ್ಕಳು, ಅದರಲ್ಲಿಯೂ ಇಬ್ಬರು ಬೆಳೆದು ನಿಂತ ಮಕ್ಕಳು ಇರುವಾಗ ಮತ್ತೊಂದು ಮದುವೆಯ ಬಗ್ಗೆ ಮಾತನಾಡಿದರೆ, ಸೀರಿಯಲ್ನಲ್ಲಿ ಮದುವೆಯಾಗು ಎನ್ನುವವರೇ ರಿಯಲ್ ಲೈಫ್ನಲ್ಲಿಯೂ ಹೀಗೆಯೇ ಹೇಳ್ತಾರಾ? ಇಷ್ಟೇ ವಿಶಾಲ ಮನೋಭಾವ ತೋರುತ್ತಾರಾ ಎಂದರೆ ಬಹುತೇಕ ಬರುವುದು ಇಲ್ಲ ಎನ್ನುವ ಉತ್ತರಗಳೇ.