Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ನಡುವೆ ಇದ್ದ ದೂರ ಎಲ್ಲವೂ ಮಾಯವಾಗಿದೆ. ಸದಾಶಿವ ಹಾಗೂ ಭೂಮಿಕಾ ಭೇಟಿಯಾಗಿದ್ದು, ಇಷ್ಟುದಿನ ಏನು ನಡೆಯಿತು ಎಂದು ಅವಳು ಹೇಳಿಕೊಂಡಿದ್ದಳು. ಇದರಿಂದಲೇ ಇದ್ದ ಸಮಸ್ಯೆ ಬಗೆಹರಿದಿದೆ.

ಗೌತಮ್ ವಿದೇಶಕ್ಕೆ ಹೋದಾಗ, ಮಗನಿಗೆ ಶಕುಂತಲಾ ಅಪಾಯ ಮಾಡೋಕೆ ನೋಡಿದ್ದು, ಆಮೇಲೆ ತಲೆಗೆ ಗನ್ ಇಟ್ಟು, ನೀನು ಈ ಮನೆಯಿಂದ ದೂರ ಆದರೆ ಮಾತ್ರ ನಿನ್ನವರು ಚೆನ್ನಾಗಿ ಇರುತ್ತಾರೆ ಎಂದು ಹೇಳಿದ್ದನ್ನೆಲ್ಲವನ್ನು ಭೂಮಿ ತನ್ನ ತಂದೆಗೆ ಹೇಳಿದಳು. ಸದಾಶಿವ ಪರಿಸ್ಥಿತಿ ಅರ್ಥ ಮಾಡಿಕೊಂಡು, ಮಗಳಿಗೆ ಅಳಿಯನ ಜೊತೆ ಬದುಕು ಎಂದು ಹೇಳಿದ್ದಾನೆ.

ಭೂಮಿಕಾ ಕೂಡ, ಗೌತಮ್‌ನನ್ನು ಭೇಟಿಯಾಗಿದ್ದಾಳೆ. ಅಲ್ಲಿ ಅವಳು ಶಕುಂತಲಾಳ ನಿಜವಾದ ಬಣ್ಣ ಏನು ಎಂದು ಹೇಳಿದ್ದಾಳೆ. ನನ್ನವರು ಎಂದುಕೊಂಡವರೇ ಈ ರೀತಿ ಮಾಡಿದರು ಎಂದು ಗೌತಮ್ ಕೂಡ ಬೇಸರ ಹೊರಹಾಕಿದ್ದಾನೆ.

ಅಂದಹಾಗೆ ಭೂಮಿಕಾ, ಗೌತಮ್ ಒಂದಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಕ್ಕಳ ಜೊತೆ ನಾವು ಚೆನ್ನಾಗಿ ಬದುಕೋಣ, ನಮ್ಮದೇ ಆದ ಒಂದು ಪುಟ್ಟ ಗೂಡಿನಲ್ಲಿ ಜೀವನ ಕಟ್ಟಿಕೊಳ್ಳೋಣ, ಯಾವ ದ್ವೇಷವೂ ಬೇಡ ಎಂದು ಭೂಮಿಕಾ ಹೇಳಿದ್ದಾಳೆ. ಇದಕ್ಕೆ ಗೌತಮ್ ಕೂಡ ಒಪ್ಪಿದ್ದಾನೆ.

ಈಗ ಗೌತಮ್ ಹಾಗೂ ಭೂಮಿಕಾ ಕಲ್ಯಾಣೋತ್ಸವ ಮಾಡಿದ್ದಾರೆ. ಅಲ್ಲಿ ಸದಾಶಿವ ಕುಟುಂಬಸ್ಥರು, ಗೌತಮ್ ತಾಯಿ, ಅಜ್ಜಿ ಎಲ್ಲರೂ ಬಂದಿದ್ದಾರೆ. ಒಟ್ಟಿನಲ್ಲಿ ಇಡೀ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.

ಗೌತಮ್-ಭೂಮಿಕಾ ಕುಟುಂಬ ಒಂದಾಗಿದೆ. ಆದರೆ ಜಯದೇವ್ ಮಾತ್ರ ಸುಮ್ಮನೆ ಇರಬೇಕಲ್ವಾ? ಗೌತಮ್ ಹಾಗೂ ಮಲ್ಲಿ ಕುಟುಂಬ ಹಾಳಾದರೆ, ಅವರು ನೋವಿನಿಂದ ಒದ್ದಾಡುತ್ತಿದ್ರೆ ಮಾತ್ರ ಜಯದೇವ್‌ಗೆ ಖುಷಿ ಆಗುವುದು. ಇವರ ಖುಷಿ ಹಾಳು ಮಾಡಲು ಅವು ಏನು ಮಾಡುತ್ತಾನೆ ಎಂದು ಕಾದು ನೋಡಬೇಕಿದೆ.

Source link
Amruthadhaare Serial: ವೀಕ್ಷಕರ ಬಹುದಿನದ ಬೇಡಿಕೆಗೆ ತಥಾಸ್ತು ಎಂದ ದೇವರು! ಇದೇ ಅಮೃತಘಳಿಗೆ