ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್​ನಲ್ಲಿ ಈಡೇರುತ್ತಾ?

ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್​ನಲ್ಲಿ ಈಡೇರುತ್ತಾ?


ಜನವರಿ 22: ಮುಂಬರುವ ಬಜೆಟ್ನಲ್ಲಿ (ಕೇಂದ್ರ ಬಜೆಟ್) ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಉತ್ತೇಜನಕಾರಿ ಕ್ರಮಗಳನ್ನು ಸರ್ಕಾರ ಕೈಗೊಳ್ಳುವ ನಿರೀಕ್ಷೆಯಿದೆ. ಕಳೆದ ಕೆಲ ವರ್ಷಗಳಿಂದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ವಿನಿಯೋಗಿಸುತ್ತಿರುವ ಹಣ ಕ್ರಮೇಣವಾಗಿ ಬಂದಿದೆ. 2013-14ರಲ್ಲಿ ಕೃಷಿ ಕ್ಷೇತ್ರಕ್ಕೆ 21,933 ಕೋಟಿ ರೂ ನೀಡಲಾಯಿತು. 2025-26ರ ಬಜೆಟ್‌ನಲ್ಲಿ 1.27 ಲಕ್ಷ ಕೋಟಿ ರೂಗಿಂತ ಹೆಚ್ಚಿನ ಮೊತ್ತವನ್ನು ಕೃಷಿಗೆ ವಿನಿಯೋಗಿಸಲಾಗಿದೆ. 2026-27ರ ಬಜೆಟ್‌ನಲ್ಲಿ ಇದು 1.50 ಲಕ್ಷ ಕೋಟಿ ರೂ ಮುಟ್ಟುವ ನಿರೀಕ್ಷೆಯಿದೆ.

ಪಿಎಂ ಕಿಸಾನ್ ಯೋಜನೆ ಹಣ ಡಬಲ್ ಆಗುತ್ತಾ?

ಈ ಬಾರಿಯ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬಹುದು. ಪಿಎಂ ಕಿಸಾನ್, ಫಸಲ್ ಬಿಮಾ ಯೋಜನೆ, ಕೃಷಿ ಸಂಚಯಿ ಯೋಜನೆ ಇತ್ಯಾದಿ ಸ್ಕೀಮ್‌ಗಳಿಗೆ ಹೆಚ್ಚಿನ ಫಂಡಿಂಗ್ ಬರುವ ಅಪೇಕ್ಷೆಗಳಿವೆ.

ಇದನ್ನೂ ಓದಿ: ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಆರೋಗ್ಯ ಉದ್ಯಮದ ಬಜೆಟ್ ನಿರೀಕ್ಷೆಗಳು…

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಸರ್ಕಾರ ಪ್ರತೀ ವರ್ಷ ಮೂರು ಕಂತುಗಳಲ್ಲಿ ಒಟ್ಟು 6,000 ರೂಪಾಯಿಗಳನ್ನು ನೀಡಲಾಗುತ್ತದೆ. ಸುಮಾರು 9-10 ಕೋಟಿ ರೈತರು ಈ ಯೋಜನೆಗಳನ್ನು ಹೊಂದಿದ್ದಾರೆ. ಸರ್ಕಾರದ ಪ್ರತೀ ಕಂಟಿನ ಹಣಕ್ಕೆ ಸುಮಾರು 20,000 ಕೋಟಿ ರೂ ವ್ಯಯಿಸುತ್ತಿದೆ.

ಈಗ ಪಿಎಂ ಕಿಸಾನ್ ಹಣವನ್ನು ಡಬಲ್ ಮಾಡಿದರೆ ಸರ್ಕಾರಕ್ಕೆ ವರ್ಷಕ್ಕೆ 60,000 ಕೋಟಿ ರೂ ಹೆಚ್ಚುವರಿ ಹೊರೆ ಬೀಳುತ್ತದೆ. ಕೆಲಗಳ ಪ್ರಕಾರ ಸ್ಕೀಮ್ ಮೊತ್ತವನ್ನು ವರದಿ ಹೆಚ್ಚಿಸುವ ಸಾಧ್ಯತೆ ಕಡಿಮೆ. ಕಂಟಿನ ಹಣ ಹೆಚ್ಚಿಸುವ ಯಾವ ಪ್ರಸ್ತಾಪವೂ ಇಲ್ಲ ಎಂದು ಈ ಹಿಂದೆ ಸರ್ಕಾರವೂ ಹೇಳಿದೆ. ಕೆಲವು ವರದಿಗಳ ಪ್ರಕಾರ ಈ ವರ್ಷ ಯೋಜನೆಯಲ್ಲಿ ಒಂದು ಕಂತು ಹೆಚ್ಚಿಸಬಹುದು.

ಇದನ್ನೂ ಓದಿ: ಬಜೆಟ್ನಲ್ಲಿ ಕುಟುಂಬ ಭಾಗ್ಯ; ಜೈಂಟ್ ಟ್ಯಾಕ್ಸೇಶನ್ ಸಿಸ್ಟಂ ತರಲು ಯೋಜನೆ; ಯಾರಿಗೆ ಲಾಭ?

ಬಜೆಟ್‌ಗೆ ಮುಂಚೆ ಸಿಗುತ್ತಾ ಪಿಎಂ ಕಿಸಾನ್ ಹಣ?

2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ 21 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. 21ನೇ ಕಂತಿನ ಹಣ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದರೂ, 22ನೇ ಕಂತಿನ ಹಣ ಈ ತಿಂಗಳು ಸಿಗಬಹುದು. ಬಜೆಟ್‌ಗೆ ಮುಂಚೆ ಸರ್ಕಾರ ಹಣ ಬಿಡುಗಡೆ ಮಾಡಬಹುದು ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 1:05 pm, ಗುರುವಾರ, 22 ಜನವರಿ 26



Source link

Leave a Reply

Your email address will not be published. Required fields are marked *