IPL 2026: ರಾಜಸ್ಥಾನದಿಂದ ಹೊರಬಂದ ರಾಜಸ್ಥಾನ್ ರಾಯಲ್ಸ್

IPL 2026: ರಾಜಸ್ಥಾನದಿಂದ ಹೊರಬಂದ ರಾಜಸ್ಥಾನ್ ರಾಯಲ್ಸ್


IPL 2026: ರಾಜಸ್ಥಾನದಿಂದ ಹೊರಬಂದ ರಾಜಸ್ಥಾನ್ ರಾಯಲ್ಸ್

ಇಂಡಿಯನ್ ಪ್ರಿಮಿಯರ್ ಲೀಗ್ ಸೀಸನ್-19 ರಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಹೊಸ ಹೋಮ್ ಗ್ರೌಂಡ್‌ನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಈ ಹಿಂದೆ ಆಡುತ್ತಿದ್ದ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ಈ ಬಾರಿ ಆರ್ ಆರ್ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿ) ಪದೇ ಪದೇ ಎಚ್ಚರಿಕೆ ನೀಡಿದ್ದರೂ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯು ಸಹ ಚುನಾವಣೆಯನ್ನು ನಡೆಸುವುದಿಲ್ಲ. ಹೀಗಾಗಿ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಹೀಗಾಗಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಬದಲಿ ಹೋಮ್ ಗ್ರೌಂಡ್ ಅನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಮುಂದಿನ ಸೀಸನ್ ನಲ್ಲಿ ರಾಜಸ್ಥಾನ ರಾಯಲ್ಸ್ ಎರಡು ಮೈದಾನಗಳಲ್ಲಿ ಕಣಕ್ಕಿಳಿಯಲಿದೆ. ಅದು ಸಹ ಅಸ್ಸಾಂ ಹಾಗೂ ಮಹಾರಾಷ್ಟ್ರದಲ್ಲಿ ಎಂಬುದು ವಿಶೇಷ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧೀನದಲ್ಲಿರುವ ಪುಣೆಯ ಎಂಸಿಎ ಸ್ಟೇಡಿಯಂ ಅನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತನ್ನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಈ ಮೈದಾನದಲ್ಲಿ ಆರ್ ಆರ್ ನಾಲ್ಕರಿಂದ ಐದು ಪಂದ್ಯಗಳನ್ನಾಡಲಿದೆ ಎಂದು ವರದಿಯಾಗಿದೆ.

ಇನ್ನುಳಿದ ಹೋಮ್ ಗ್ರೌಂಡ್ ಮ್ಯಾಚ್ಗಳನ್ನು ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ಆಡಲಿದೆ. ಕಳೆದ ಕೆಲ ವರ್ಷಗಳಿಂದ ಬರ್ಸಾಪರ ಸ್ಟೇಡಿಯಂ ಅನ್ನು ರಾಜಸ್ಥಾನ್ ರಾಯಲ್ಸ್ ತನ್ನ ದ್ವಿತೀಯ ಹೋಮ್ ಗ್ರೌಂಡ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಪ್ರತಿ ಸೀಸನ್‌ನಲ್ಲೂ ಇಲ್ಲಿ 2 ಮ್ಯಾಚ್‌ಗಳನ್ನಾಡುತ್ತಿದೆ, ಈ ಬಾರಿ ಕೂಡ ಅದು ಮುಂದುವರಿಯಲಿದೆ.

ಅಂದರೆ ತವರು ಮೈದಾನದಲ್ಲಿ ನಡೆಯಲಿರುವ 7 ಪಂದ್ಯಗಳನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 5+2 ರೀತಿಯಲ್ಲಿ ವಿಂಗಡಿಸುವ ಸಾಧ್ಯತೆಯಿದೆ. ಅದರಂತೆ 5 ಮ್ಯಾಚ್ಗಳನ್ನು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಆಡಿದರೆ, ಇನ್ನುಳಿದ ಎರಡು ಪಂದ್ಯಗಳಿಗೆ ಗುವಾಹಟಿಗೆ ತೆರಳುವ ಸಾಧ್ಯತೆ ಹೆಚ್ಚಿದೆ.

ಆರ್ ಆರ್ ಪಡೆಗೆ ಹೊಸ ನಾಯಕ

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ. ಕಳೆದ ಸೀಸನ್ ನಲ್ಲಿ ಆರ್ ಆರ್ ತಂಡದ ಕ್ಯಾಪ್ಟನ್ ಆಗಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಹೀಗಾಗಿ ಆರ್ ಆರ್ ಫ್ರಾಂಚೈಸಿಯು ಈ ಬಾರಿ ಹೊಸ ಕ್ಯಾಪ್ಟನ್ ಅನ್ನು ಪರಿಚಯಿಸಲಿದೆ.

ಇದನ್ನೂ ಓದಿ: IPL 2026: ಇದೇ ಕಾರಣಕ್ಕೆ RCB ಬೆಂಗಳೂರಿನಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದೆ!

ರಾಜಸ್ಥಾನ್ ರಾಯಲ್ಸ್ ತಂಡ: ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ರಿಯಾನ್ ಪರಾಗ್, ಯಧುವೀರ್ ಸಿಂಗ್ ಚರಕ್, ಜೋರ್ಫಾಂಡೆ, ತುಷಾ, ರವಿ, ರವಿ, ರವಿ, ರವಿ. ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರು, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್, ಕುಲದೀಪ್ ಸೇನ್.

 

 



Source link

Leave a Reply

Your email address will not be published. Required fields are marked *