‘ಧುರಂಧರ್ 2’ ತಂಡ ಸೇರಲಿರುವ ಮತ್ತೊಬ್ಬ ಸ್ಟಾರ್ ಹೀರೋ

‘ಧುರಂಧರ್ 2’ ತಂಡ ಸೇರಲಿರುವ ಮತ್ತೊಬ್ಬ ಸ್ಟಾರ್ ಹೀರೋ


ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬಂದಿದೆ, ಆದರೆ ಹಲವು ಕಡೆಗಳಲ್ಲಿ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ ‘ಧುರಂಧರ’ ಸಿನಿಮಾ. ಸಿನಿಮಾದ ಹವಾ ಎಷ್ಟಿದೆಯಂತೆ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಲಿರುವ ಸಿನಿಮಾದ ಎರಡನೇ ಭಾಗವಾದ ‘ಧುರಂಧರ 2’ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ‘ಧುರಂಧರ’ ದೊಡ್ಡ ಹಿಟ್ ಆಗಿರುವ ಕಾರಣ, ‘ಧುರಂಧರ 2’ ಸಿನಿಮಾವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಿಸಲು ಚಿತ್ರತಂಡ ಸಜ್ಜಾಗಿದೆ, ಇದೀಗ ‘ಧುರಂಧರ 2’ ಸಿನಿಮಾಕ್ಕೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟನ ಎಂಟ್ರಿ ಕೂಡ ಆಗಲಿದೆ ಎನ್ನಲಾಗುತ್ತಿದೆ.

‘ಧುರಂಧರ’ ಸಿನಿಮಾ ನಿರ್ದೇಶಿಸಿರುವ ಆದಿತ್ಯ ಧರ್ ಅವರ ಮೊದಲ ಸಿನಿಮಾ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’. ‘ಧುರಂಧರ’ ರೀತಿ ಆ ಸಿನಿಮಾ ಸಹ ಸೈನ್ಯ ಮತ್ತು ದೇಶಪ್ರೇಮದ ಜಾನರ್ ಅನ್ನು ಒಳಗೊಂಡಿತ್ತು. ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಾಯಕನಾಗಿ ನಟಿಸಿದ್ದರು. ‘ಉರಿ’ಗೆ ಮೊದಲು ಒಳ್ಳೆಯ ನಟ ಎಂದಷ್ಟೇ ಎನಿಸಿಕೊಂಡಿದ್ದ ವಿಕ್ಕಿ ಕೌಶಲ್, ‘ಉರಿ’ಯ ಬಳಿಕ ಸ್ಟಾರ್ ನಟ ಆದರು. ರೊಮ್ಯಾಂಟಿಕ್, ರಿಯಲ್ ಲೈಫ್ ಕತೆಗಳಲ್ಲಿ ಪಕ್ಕಾ ಆಕ್ಷನ್ ಸಿನಿಮಾಗಳಿಗೆ ಸೂಕ್ತವಾದ ನಟ ತಾವು ವಿಕ್ಕಿ ಕೌಶಲ್ ‘ಉರಿ ಮೂಲಕ ಸಾಬೀತುಪಡಿಸಿದರು. ಇದೀಗ ಆದಿತ್ಯ ಧರ್ ಅವರು, ತಮ್ಮ ಮೊದಲ ಸಿನಿಮಾದ ನಾಯಕನನ್ನು ‘ಧುರಂಧರ 2’ ಸಿನಿಮಾಕ್ಕೆ ಕರೆ ತರಲು ಮುಂದಾಗಿದ್ದಾರೆ.

ಇದೀಗ ಹರಿದಾಡುತ್ತಿರುವ ಸುದ್ದಿಗಳಂತೆ ವಿಕ್ಕಿ ಕೌಶಲ್ ಅವರು ‘ಧುರಂಧರ 2’ ಸಿನಿಮಾದಲ್ಲಿ ಇರಲಿ. ಅಸಲಿಗೆ ‘ಉರಿ’ ಸಿನಿಮಾದಲ್ಲಿ ‘ಧುರಂಧರ’ ಸಿನಿಮಾದ ನಾಯಕ ಜಸ್ಕೀರತ್ ಸಿಂಗ್ ರಂಗಿ (ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಿಜ ಹೆಸರು) ಉಲ್ಲೇಖವಿದೆ. ‘ಉರಿ’ ಸಿನಿಮಾದಲ್ಲಿ ನಾಯಕ, ಮಹಿಳಾ ಸೈನ್ಯಾಧಿಕಾರಿಯೊಟ್ಟಿಗೆ ಮಾತನಾಡುವಾಗ ಆಕೆ ‘ಜಸ್ಕೀರತ್ ಸಿಂಗ್ ರಂಗಿ ನನ್ನ ಪತಿ, ಅವರು ನೌಶೇರಾನಲ್ಲಿ ನಡೆದ ಆಪರೇಷನ್‌ನಲ್ಲಿ ಹುತಾತ್ಮರಾಗಿದ್ದಾರೆ’ ಎಂದು ಹೇಳುತ್ತಾರೆ. ಅದೇ ರೀತಿ ಇದೀಗ ‘ಧುರಂಧರ 2’ ಸಿನಿಮಾದಲ್ಲಿ ‘ಉರಿ’ ಸಿನಿಮಾದ ನಾಯಕ ವಿಹಾನ್ ಶೇರ್ಗಿಲ್ (ವಿಕ್ಕಿ ಕೌಶಲ್ ಪಾತ್ರದ ಹೆಸರು) ಸಹ ಎಂಟ್ರಿ ಕೊಡಲಿದ್ದಾರೆ. ಆದರೆ ಇದು ಅತಿಥಿ ಪಾತ್ರ ಮಾತ್ರ ಆಗಿರುತ್ತದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ’

‘ಧುರಂಧರ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಪಾತ್ರ ಸಖತ್ ಹಿಟ್ ಆಗಿದ್ದು, ‘ಧುರಂಧರ 2’ ಸಿನಿಮಾದಲ್ಲಿಯೂ ಅವರ ಪಾತ್ರವಿರುತ್ತದೆ. ‘ಧುರಂಧರ’ ಸಿನಿಮಾದಲ್ಲಿ ಆ ಪಾತ್ರ ಮರಣ ಹೊಂದಿದ್ದರೂ ಫ್ಲ್ಯಾಶ್ ಬ್ಯಾಕ್‌ನಲ್ಲಿ ಅಕ್ಷಯ ಪಾತ್ರವನ್ನು ಮತ್ತೆ ಆಯ್ಕೆ ಮಾಡಿಕೊಳ್ಳಬೇಕು. ಇದೀಗ ಅದರ ಜೊತೆಗೆ ವಿಕ್ಕಿ ಕೌಶಲ್ ಪಾತ್ರವೂ ಬಂದಲ್ಲಿಗೆ ಡಬಲ್ ಧಮಾಕ ಆಗಲಿದೆ. ‘ಧುರಂಧರ 2’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *