ಭಾರತ ತಂಡಕ್ಕೆ ಟಿ20 ಗೆಲ್ಲಿಸಿಕೊಟ್ಟ ನಾಯಕ ಮತ್ತು ಹಲವಾರು ಸ್ಮರಣೀಯ ವಿಜಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಡಾಕ್ಟರೇಟ್ ಗೌರವ ಸಂದಿದೆ. ಪುಣೆಯ ಅಜಿಂಕ್ಯ ಡಿವೈ ಪಾಟೀಲ್ ವಿಶ್ವವಿದ್ಯಾಲಯ (ADYPU) ರೋಹಿತ್ ಶರ್ಮಾ ಅವರಿಗೆ ಗೌರವ ಡಾಕ್ಟರೇಟ್ (D.Litt.) ಪ್ರದಾನ ಮಾಡಲಾಗುವುದು. ಜನವರಿ 24 ರಂದು ನಡೆಯುವ ವಿಶ್ವವಿದ್ಯಾಲಯದ 10 ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಗುವುದು.
ಕ್ರಿಕೆಟ್ಗೆ ರೋಹಿತ್ ಶರ್ಮಾ ಅವರು ಅಸಾಧಾರಣ ಕೊಡುಗೆಗಳಿಗಾಗಿ ಅವರನ್ನು ಗೌರವಿಸುತ್ತಿದ್ದಾರೆ ಎಂದು ವಿಶ್ವವಿದ್ಯಾಲಯವನ್ನು ಪ್ರಕಟಿಸಿದೆ. ಕ್ರಿಕೆಟ್ ಲೋಕದಲ್ಲಿ “ಹಿಟ್ಮ್ಯಾನ್” ಎಂದೆಂದಿಗೂ ಪ್ರಸಿದ್ಧರಾಗಿರುವ ರೋಹಿತ್ ಶರ್ಮಾ ಇನ್ನು ಮುಂದೆ ಡಾ. ರೋಹಿತ್ ಶರ್ಮಾ ಎನಿಸಿಕೊಳ್ಳಲಿದ್ದಾರೆ.
ರೋಹಿತ್ ಶರ್ಮಾ ಭಾರತದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರು. ಪರ ಮೂರು ಮಾದರಿಯ ಕ್ರಿಕೆಟ್ನಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಭಾರತದ ನಿವೃತ್ತ ಆಟಗಾರ. ಆದರೆ ಏಕ ಮಾದರಿಯಲ್ಲಿ ಅವರ ಪರಾಕ್ರಮ ಮುಂದುವರೆದಿದೆ.
ಮೇಲೆ ಹೇಳಿದಂತೆ ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ ರೋಹಿತ್ ತಮ್ಮ ನಾಯಕತ್ವದಲ್ಲಿ ಭಾರತ ತಂಡವನ್ನು ಎರಡೆರಡು ಐಸಿಸಿ ಟ್ರೋಫಿ ಗೆಲುವಿನತ್ತ ಮುನ್ನಡೆಸಿದ್ದರು. 2024 ರ ಟಿ 20 ನಲ್ಲಿ ಭಾರತವನ್ನು ಕೊಟ್ಟ ರೋಹಿತ್, ಆ ಬಳಿಕ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಭಾರತಕ್ಕೆ ಗೆದ್ದರು.
ರೋಹಿತ್ ಶರ್ಮಾ ಇದುವರೆಗೆ ಟೀಂ ಇಂಡಿಯಾ ಪರ 508 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರು 20,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 111 ಅರ್ಧಶತಕಗಳು ಮತ್ತು 50 ಶತಕಗಳು ಇವೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ಕೂಡ ರೋಹಿತ್ ಹೆಸರಿನಲ್ಲಿದೆ.




