Karna Serial: ಕರ್ಣ- ನಿಧಿ ದೂರ ಆಗ್ತಾರಾ? ಈ ಸಂಭಾಷೆಯಲ್ಲಿ ಅಡಗಿದೆ ಭಯಾನಕ ಮುನ್ಸೂಚನೆ!

Karna Serial: ಕರ್ಣ- ನಿಧಿ ದೂರ ಆಗ್ತಾರಾ? ಈ ಸಂಭಾಷೆಯಲ್ಲಿ ಅಡಗಿದೆ  ಭಯಾನಕ ಮುನ್ಸೂಚನೆ!

Karna Serial: ಕರ್ಣ- ನಿಧಿ ದೂರ ಆಗ್ತಾರಾ? ಈ ಸಂಭಾಷೆಯಲ್ಲಿ ಅಡಗಿದೆ  ಭಯಾನಕ ಮುನ್ಸೂಚನೆ!
ನಿತ್ಯಾ-ತೇಜಸ್​ರನ್ನು ಒಂದು ಮಾಡಲು ಹೋಗಿ ಕರ್ಣ ಸಂಕಷ್ಟಕ್ಕೆ ಸಿಲುಕಿದ್ದಾನೆ. ನಿತ್ಯಾಳ ಮಗುವಿಗೆ ತಾನೇ ತಂದೆ ಎಂದು ಹೇಳಿ ನಿಧಿಯಿಂದ ದೂರವಾಗುವ ಸ್ಥಿತಿ ತಂದುಕೊಂಡಿದ್ದಾನೆ. ಇದೀಗ ನಿಧಿಯೊಂದಿಗೆ ಮತ್ತೆ ಒಂದಾಗುವ ಭರವಸೆ ನೀಡಿದ್ದು, ಈ ಮಾತುಗಳೇ ಅಪಾಯದ ಮುನ್ಸೂಚನೆಯಂತೆ ಕಾಣಿಸುತ್ತಿದೆ.
ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ನಿತ್ಯಾ ಮತ್ತು ತೇಜಸ್​ ದೂರವಾಗಿದ್ದಾರೆ. ಅವರ ಲೈಫ್ ಸರಿ ಮಾಡಲು ಹೋಗಿರುವ ಕರ್ಣನಿಗೆ ದಿಕ್ಕೇ ತೋಚದಾಗಿದೆ. ಏಕೆಂದರೆ, ನಿತ್ಯಾ ಮತ್ತು ತೇಜಸ್​ ಒಂದಾಗದ ಹೊರತೂ ನಿಧಿ ಮತ್ತು ಕರ್ಣ ಒಂದಾಗೋದು ಸಾಧ್ಯವೇ ಇಲ್ಲ.

ಆದರೆ, ಈಗ ಎಲ್ಲವೂ ಅಯೋಮಯವಾಗಿದೆ. ಇದರ ಹೊರತಾಗಿಯೂ ಇವರಿಬ್ಬರೂ ಪ್ರೀತಿಸ್ತಾ ಇರೋ ವಿಷ್ಯ ಯಾರಿಗೂ ಗೊತ್ತಿಲ್ಲ. ಅದೇ ಈಗ ನಿತ್ಯಾ ಹೊಟ್ಟೆಯಲ್ಲಿ ಇರುವ ಮಗು ತನ್ನದೇ ಎಂದು ಕರ್ಣ ಹೇಳಿದ ಮೇಲಂತೂ, ನಿಧಿ-ಕರ್ಣ ಒಂದಾಗೋದು ದೂರದ ಮಾತೇ ಆಗಿಬಿಟ್ಟಿದೆ.

ಇದೀಗ ಅದೇ ಕೊರಗಿನಲ್ಲಿ ಕರ್ಣ ಊಟಮಾಡಲಿಲ್ಲ. ನಿಧಿ ಕೈಯಾರೆ ಅಡುಗೆ ಮಾಡಿ ಕರ್ಣನಿಗೆ ಸಮಾಧಾನ ಮಾಡಿ ಊಟ ಮಾಡಿಸುತ್ತಿದ್ದಾಳೆ. ಆಗ ಅವರಿಬ್ಬರ ನಡುವೆ ನಡೆದ ಮಾತುಕತೆ ನೋಡಿದರೆ, ಇದು ಅಪಾಯದ ಮುನ್ಸೂಚನೆ ಎನ್ನುವ ಹಾಗೆ ಕಾಣಿಸುತ್ತಿದೆ.

ಅದೇನೆಂದರೆ, ಕರ್ಣ ನಿಧಿಗೆ, ಅದೇನೇ ಬಂದರೂ ನಾನು ನಿಮ್ಮ ಕೈಬಿಡಲ್ಲ ಎಂದಿದ್ದಾನೆ. ಅದೇ ರೀತಿ ನಿಧಿ ಕೂಡ ದೇವರೇ ಅಡ್ಡ ಬಂದರೂ ನಮ್ಮಿಬ್ಬರನ್ನೂ ಬೇರೆ ಮಾಡಲು ಸಾಧ್ಯವಿಲ್ಲ ಎಂದಿದ್ದಾಳೆ. ಇಂಥ ಡೈಲಾಗ್​ಗಳು ಸಾಮಾನ್ಯವಾಗಿ ಮಾತು ಈಡೇರದ ಸಂದರ್ಭಗಳಲ್ಲಿ ಬರುವುದು ಇದೆ.

ಅದರಲ್ಲಿಯೂ ಈ ಡೈಲಾಗ್​ ಹೇಳುವ ಸಮಯದಲ್ಲಿ ಕೊಟ್ಟಿರುವ ಹಿನ್ನೆಲೆ ಮ್ಯೂಸಿಕ್​, ಡಬಲ್​ ವಾಯ್ಸ್​ ಎಲ್ಲವನ್ನೂ ಕೇಳಿದರೆ, ಬಹುಶಃ ಇದು ಅಪಾಯದ ಮುನ್ಸೂಚನೆ ಎಂದು ತೋರುತ್ತಿದೆ. ಹಾಗೆ ಆಗದೇ ಇರಲಪ್ಪ ಎಂದು ಸೀರಿಯಲ್​ ಪ್ರೇಮಿಗಳು ಬೇಡಿಕೊಳ್ಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *