Headlines

ಆ ವಿಷಯಕ್ಕೆ ಜಮೀರ್-ಝೈದ್ ಮಧ್ಯೆ ಆಗಿದೆ ಸಾಕಷ್ಟು ಜಗಳ; ವಿವರಿಸಿದ ನಟ

ಆ ವಿಷಯಕ್ಕೆ ಜಮೀರ್-ಝೈದ್ ಮಧ್ಯೆ ಆಗಿದೆ ಸಾಕಷ್ಟು ಜಗಳ; ವಿವರಿಸಿದ ನಟ


ಸಚಿವ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ (ಜೈದ್ ಖಾನ್) ಅವರು ‘ಬನಾರಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅವರು ‘ಕಲ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು (ಜನವರಿ 23) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಎ ಪ್ರಮಾಣ ಪತ್ರವಿದೆ. ಸಿನಿಮಾ ಸಖತ್ ರಾ ಆಗಿರೋದು ಇದಕ್ಕೆ ಕಾರಣ. ಈಗ ಝೈದ್ ಖಾನ್ ಅವರ ತಂದೆ ಜೊತೆ ಆಗೋ ಕಿರಿಕ್ ಗಳ ಬಗ್ಗೆ ಮಾತನಾಡಿದ್ದಾರೆ. ಒಂದು ವಿಷಯದಲ್ಲಿ ಇಬ್ಬರ ನಡುವೆ ಸಾಕಷ್ಟು ಜಗಳ ಆಗಿದೆ.

ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ರಾಜಕೀಯದಲ್ಲೇ ಮುಂದುವರಿಯುವ ಪ್ರಯತ್ನ ಮಾಡುತ್ತಾರೆ. ಪಾಲಕರಿಗೂ ಇದೆ ಹಾರಿಕೆ ಇರುತ್ತದೆ. ಆದರೆ, ಜಮೀರ್‌ಗೆ ಇದು ಇಷ್ಟವಿಲ್ಲ. ಸದ್ಯಕ್ಕೆ ಅವರು ಸಿನಿಮಾ ರಂಗದಲ್ಲಿ ನಟನಾಗಿ ಮಿಂಚುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಝೈದ್ ಖಾನ್ ಅವರ ತಂದೆಯ ಬಗ್ಗೆ ಮಾತನಾಡಿದ್ದಾರೆ.

‘ಕೆಲಸ ಎಂಬುದು ಬಂದರೆ ನಾನು ರಾಕ್ಷಸ. ನನ್ನ ನೂರರಷ್ಟು ಶ್ರಮ ಹಾಕುತ್ತೇನೆ . ಆದರೆ, ಕೆಲಸ ಇಲ್ಲ ಎಂದರೆ ನಾನು ಬೆಡ್ ಮೇಲೆ ಇರುತ್ತೇನೆ. ಯಾವಾಗಲೂ ಸುದ್ದಿಯಲ್ಲಿರಬೇಕು, ಕಾಣಿಸಿಕೊಳ್ಳುತ್ತಾ ಇರಬೇಕು ಎಂಬುದು ನನಗೆ ಇಲ್ಲ. ನನಗೆ ನನ್ನದೇ ಆದ ಖಾಸಗಿ ಜೀವನ ಇದೆ’ ಅಝದ್ ಖಾನ್.

ಇದನ್ನೂ ಓದಿ: ‘ನನ್ನ ಸಿನಿಮಾ ಯಾಕೆ ಕೊಲ್ತೀರಾ?’ ದುನಿಯಾ ವಿಜಿಯ ಪ್ರಶ್ನಿಸಿದ ಝೈದ್ ಖಾನ್, ಉತ್ತರ ಏನಿತ್ತು?

‘ಸಿನಿಮಾ ಇಂಡಸ್ಟ್ರಿಗೆ ನಾನು ಪ್ಯಾಷನ್‌ಗೆ ಬಂದಿದ್ದು. ನನ್ನ ಮನೆಯ ಬಿಸ್ನೆಸ್ ನ ನಡೆಸಿಕೊಂಡು ಹೋಗುವ ಜವಾಬ್ದಾರಿ ನನಗೆ ಇದೆ. ತಂದೆ ದುಡ್ಡು ಕೊಡ್ತಾರೆ ಎಂದು ಬದುಕೋದು ಜೀವನ ಅಲ್ಲ’ ಅವರು ಅವರು. ‘ಸಿನಿಮಾ ಕರಿಯರ್‌ಗೆ ಹೋಗುವಾಗ ತಂದೆ ಬಿಸ್ನೆಸ್ ಮಾಡುವಂತೆ ಸೂಚಿಸಿದ್ದರು. ದುಡ್ಡು ಬೇಕಿದ್ರೂ ಕೊಡ್ತೀನಿ ಎಂದರು. ನಾನು ರಾಜಕೀಯಕ್ಕೆ ಬರೋದು ಅವರಿಗೆ ಇಷ್ಟವಿಲ್ಲ. ಬಿಸ್ನೆಸ್ ಮಾಡಬೇಕು ಎಂಬ ವಿಷಯಕ್ಕೆ ನನ್ನ ತಂದೆ ಹಾಗೂ ನನ್ನ ಮಧ್ಯೆ ಸಾಕಷ್ಟು ಜಗಳ ಆಗಿದೆ’ ಎಂದು ಝೈದ್ ಖಾನ್ ವಿವರಿಸಿದ್ದಾರೆ.

ತಂದೆಯ ಜೊತೆಗಿನ ಜಗಳದ ಬಗ್ಗೆ ವಿಡಿಯೋ ಅಂತ್ಯದಲ್ಲಿ ಝೈದ್ ಮಾತನಾಡಿದ್ದಾರೆ

ಝೈದ್ ಖಾನ್ ಅವರು ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಅವರೇ ಎಲ್ಲವನ್ನೂ ಪ್ಲ್ಯಾನ್ ಮಾಡಿಕೊಂಡು ಬಂದರು. ಅವರಿಗೆ ತಂದೆಯ ಅಷ್ಟೂ ಬೆಂಬಲ ಸಿಕ್ಕಿಲ್ಲವಂತೆ. ತಂದೆ ಕೂಡ ಅವರ ಸಿನಿಮಾ ಕಾರ್ಯಕ್ರಮಗಳಿಗೆ ಬರೋದು ಕಡಿಮೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *