Smiley Moon : ಇಂದು ರಾತ್ರಿ ನಿಮ್ಮನ್ನು ನೋಡಿ ನಗ್ತಾನೆ ಚಂದ್ರ, ನೋಡಿ ನಾಚಿ ನೀರಾಗಬೇಡಿ

Smiley Moon : ಇಂದು ರಾತ್ರಿ ನಿಮ್ಮನ್ನು ನೋಡಿ ನಗ್ತಾನೆ ಚಂದ್ರ, ನೋಡಿ ನಾಚಿ ನೀರಾಗಬೇಡಿ


ಚಂದ್ರ(ಚಂದ್ರ)ನು ಸೃಷ್ಟಿಯ ಕುತೂಹಲಕಾರಿ ಗ್ರಹ. ಚಂದ್ರನನ್ನು ಅರ್ಥ ಮಾಡಿಕೊಳ್ಳುವುದು, ಆತನನ್ನು ನೋಡಿ ವರ್ಣಿಸಿದಷ್ಟು ಸುಲಭವಲ್ಲ. ದಿನವೂ ಬೇರೆ ಬೇರೆ ರೀತಿಯಲ್ಲೇ ಕಾಣುತ್ತಾನೆ. ಚಂದ್ರು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ತೊಡೆಯ ಮೇಲೆ ಕೂರಿಸಿ ಊಟ ಮಾಡಲು ತಾಯಿಗೂ ಚಂದಮಾಮನೇ ಬೇಕು, ಪ್ರಿಯಕರನಿಗೆ ಪ್ರೇಯಸಿ ಬಣ್ಣವನ್ನು ಹೋಲಿಸಲು ಈ ಚಂದ್ರನೇ ಬೇಕು. ಚಂದ್ರನನ್ನು ಇಷ್ಟಪಡುವವರೇ ಇಲ್ಲ. ಆದರೆ ನೀವು ಚಂದ್ರನನ್ನು ಕಂಡು ನಕ್ಕಿದ್ದೀರಿ ಆದರೆ ಅವನು ನಕ್ಕಿರುವುದ ಕಂಡಿದ್ದೀರಾ.

ಹಾಗಾದರೆ ಇಂದು ನೋಡಲು ಮರೆಯದಿರಿ. ಚಂದ್ರ ಇಂದು ನಿಮ್ಮನ್ನು ನೋಡಿ ನಗ್ತಾನೆ, ಕಂಡು ನಾಚುವುದು ನೀವು ಮರೀಬೇಡಿ. ಇಂದು ರಾತ್ರಿ ಆಕಾಶದತ್ತ ನೋಡುವವರು ಚಂದ್ರ, ಶನಿ ಮತ್ತು ನೆಪ್ಚೂನ್‌ಗಳ ಅಪರೂಪದ ಸಂಯೋಗವನ್ನು ಕಾಣುತ್ತೀರಿ.

ಚಂದ್ರ ಅರ್ಧಾಕಾರದಲ್ಲಿ ಇರಲಿದೆ ಅವನ ಎರಡೂ ತುದಿಗಳಲ್ಲಿ ಎರಡು ಗ್ರಹಿರಲಿವೆ. ಅದು ಚಂದ್ರ ನಕ್ಕಂತೆ ಕಾಣುತ್ತದೆ. ವೀಕ್ಷಕರು ಚಂದ್ರ ಮತ್ತು ಶನಿ ಎರಡನ್ನೂ ಬರಿಗಣ್ಣಿನಿಂದ ಸುಲಭವಾಗಿ ಗುರುತಿಸಲು ಸಾಧ್ಯ, ಆದರೆ ನೆಪ್ಚೂನ್ ಅನ್ನು ಸಹ ಗುರುತಿಸಲು ಬೈನಾಕ್ಯುಲರ್ ಅಥವಾ ದೂರದರ್ಶಕದ ಅಗತ್ಯ ಬೀಳಬಹುದು. ಅದು ಸ್ವಲ್ಪ ಮಸುಕಾಗಿ ಕಾಣುತ್ತದೆ.

ಮತ್ತಷ್ಟು ಓದಿ: ಚಂದ್ರ ಗ್ರಹಣ: ಚಂದ್ರ ಗ್ರಹಣ, ಬೆಂಕಿ ಚೆಂಡಿನಂತಾದ ಚಂದಿರ: ನಭೋ ಮಂಡಲದ ಅಪರೂಪದ ಚಮತ್ಕಾರ ಇಲ್ಲಿ ನೋಡಿ

ಭೂಮಿಯ ದೃಷ್ಟಿಕೋನದಿಂದ ಆಕಾಶದಲ್ಲಿ ಎರಡು ಅಥವಾ ಹೆಚ್ಚಿನ ಗ್ರಹಗಳು ಹತ್ತಿರದಲ್ಲಿ ದರ್ಶನವಾಗ ಗ್ರಹಗಳ ಸಂಯೋಗ ನೋಡಲು. ಜನವರಿ 23 ರಂದು ನಿರೀಕ್ಷಿಸಲಾದ ತ್ರಿವಳಿ ಸಂಯೋಗವನ್ನು ಸೂರ್ಯಾಸ್ತದ ನಂತರ, ಪಶ್ಚಿಮ ಆಕಾಶದಲ್ಲಿ ಕಡಿಮೆ ಎತ್ತರದಲ್ಲಿ ವೀಕ್ಷಿಸಬಹುದು ಎಂದು ವಿಜ್ಞಾನ ಮತ್ತು ಖಗೋಳಶಾಸ್ತ್ರ ಹೇಳುತ್ತದೆ.

ಯಾವುದೇ ಮರಗಳು ಅಥವಾ ಕಟ್ಟಡಗಳು ನಿಮ್ಮ ದೃಷ್ಟಿಗೆ ಅಡ್ಡಿಯಾಗದಂತೆ ಸ್ಪಷ್ಟವಾದ ನೋಟವನ್ನು ಹೊಂದಿರುವ ಸ್ಥಳವನ್ನು ಹುಡುಕಲು ಪ್ರಯತ್ನಿಸಿ. ಚಂದ್ರನು ಶನಿ ಮತ್ತು ನೆಪ್ಚೂನ್ ಕೆಳಗೆ ನಿಧಾನವಾಗಿ ಬಾಗುತ್ತಾನೆ, ಅದು ನಗುಮುಖದಂತೆ ಕಾಣುತ್ತದೆ. ಚಂದ್ರನು ಇರುವ ನಕ್ಷತ್ರ ಹಾಗೂ ಆತನು ಸಂಚರಿಸುವ ದಿಕ್ಕಿನ ಮೇಲೆ ಕೆಲವು ಪರಿಣಾಮಗಳು ಉಂಟಾಗುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 11:18 am, ಶುಕ್ರ, 23 ಜನವರಿ 26



Source link

Leave a Reply

Your email address will not be published. Required fields are marked *