ದರ್ಶನ್ ತೂಗುದೀಪ ನಟನೆಯ ‘ಬುಲ್ ಬುಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಟಿ ರಚಿತಾ ರಾಮ್ ಅವರು ಆ ಬಳಿಕ ಕನ್ನಡದ ಸ್ಟಾರ್ ನಟಿಯಾಗಿ ಮೆರೆದರು. ಹತ್ತು ವರ್ಷಗಳ ಬಳಿಕವೂ ನಟಿ ರಚಿತಾ ರಾಮ್ ಅವರು ನಾಯಕಿಯಾಗಿಯೇ ಇನ್ನೂ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಇದು ಸಣ್ಣ ಸಾಧನೆಯೇನೂ ಅಲ್ಲ.

ಸ್ಯಾಂಡಲ್ವುಡ್ ನಟಿ, ಗುಳಿಗೆನ್ನೆ ಚೆಲುವೆ ರಚಿತಾ ರಾಮ್ (Rachita Ram) ಅವರ ಅಭಿಮಾನಿ ಬಳಗಕ್ಕೆ ಇಂದು ದೊಡ್ಡ ಹಬ್ಬ. ಕಾರಣ, ಇಂದು (23 January 2026) ರಚಿತಾ ರಾಮ್ ಅಭಿನಯದ ಎರಡು ಸಿನಿಮಾಗಳು ತೆರೆಗೆ ಬರುತ್ತಿವೆ.

ಇಂತಹ ಅದೃಷ್ಟ ಕೆಲವರಿಗೆ ಮಾತ್ರ ಸಿಗುತ್ತದೆ. ಅದು ನಟನಟಿಯಾಗಿರಬಹುದು ಅಥವಾ ಅಭಿಮಾನಿಗಳಿಗಳೇ ಇರಬಹುದು. ಒಂದೇ ದಿನ ತೆರೆಯಲ್ಲಿ ಎರಡು ಸಿನಿಮಾಗಳನ್ನು ನೋಡುವ ಖುಷಿಯೇ ಬೇರೆ. ಆ ಖುಷಿ ಈಗ ಸ್ವತಃ ರಚಿತಾ ರಾಮ್ ಹಾಗೂ ಅವರ ಫ್ಯಾನ್ಸ್ ಇಬ್ಬರಿಗೂ ಲಭಿಸಿದೆ.

ಹೌದು, ನಟಿ ರಚಿತಾ ರಾಮ್ ಹಾಗೂ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಇಂದು ತೆರೆ ಕಂಡಿದೆ. ಜೊತೆಗೆ, ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಸಹ ಇವತ್ತೇ ಬಿಡುಗಡೆ ಆಗಿದೆ. ಈ ಎರಡೂ ಸಿನಿಮಾಗಳಲ್ಲೂ ರಚಿತಾ ರಾಮ್ ಅವರೇ ನಾಯಕಿ.

ಇನ್ನೊಂದು ಕಡೆ, ನಟಿ ರಚಿತಾ ರಾಮ್ ಅವರು ಕಲ್ಟ್ ಸಿನಿಮಾ ಪ್ರೆಸ್ಮೀಟ್ ಸಮಯದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಕೊಟ್ಟ ಉತ್ತರ ಸಾಕಷ್ಟು ವೈರಲ್ ಆಗಿದೆ.. ರಚಿತಾ ರಾಮ್ ಅವರು ಅಂದು ಆಡಿರೋ ಮಾತುಗಳು ಈಗಲೂ ಸಾಕಷ್ಟು ವೈರಲ್ ಆಗುತ್ತಿವೆ.

ದರ್ಶನ್ ತೂಗುದೀಪ ನಟನೆಯ ‘ಬುಲ್ ಬುಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಟಿ ರಚಿತಾ ರಾಮ್ ಅವರು ಆ ಬಳಿಕ ಕನ್ನಡದ ಸ್ಟಾರ್ ನಟಿಯಾಗಿ ಮೆರೆದರು.

ಹತ್ತು ವರ್ಷಗಳ ಬಳಿಕವೂ ನಟಿ ರಚಿತಾ ರಾಮ್ ಅವರು ನಾಯಕಿಯಾಗಿಯೇ ಇನ್ನೂ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಇದು ಸಣ್ಣ ಸಾಧನೆಯೇನೂ ಅಲ್ಲ.

ಒಟ್ಟಿನಲ್ಲಿ, ನಟಿ ರಚಿತಾ ರಾಮ್ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಇಂದು ಸಖತ್ ಹಬ್ಬದ ಮೂಡಿದೆ. ಎರಡು ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುವ ಅವಕಾಶ ಅಭಿಮಾನಿಗಳದ್ದಾದರೆ, ಎರಡು ಸಿನಿಮಾಗಳು ಒಟ್ಟಿಗೇ ರಿಲೀಸ್ ಆಗಿರುವ ಸಂಭ್ರಮ ಸ್ವತಃ ರಚಿತಾ ರಾಮ್ ಅವರಿಗೆ ಇದೆ.

Source link
Rachita Ram: ಇಂದು ಈ ನಟಿಯ ಫ್ಯಾನ್ಸ್ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!